Pulwama Terror Attack ಪುಲ್ವಾಮಾ ದಾಳಿಗೆ 3 ವರ್ಷ: 2019ರಲ್ಲಿ ಪಾಕ್ ನಡೆಸಿದ ಭಯೋತ್ಪಾದಕ ದಾಳಿ ಬಗ್ಗೆ 10 ಸಂಗತಿಗಳು ಇಲ್ಲಿವೆ

3 Years of Pulwama Attack ಫೆಬ್ರವರಿ 14, 2019 ರಂದು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್​​​ನ 20 ವರ್ಷದ ಆತ್ಮಹತ್ಯಾ ಬಾಂಬರ್ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲು ಪಡೆಗೆ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು 40 ಯೋಧರನ್ನು ಹತ್ಯೆಗೈದಿದ್ದನು.

Pulwama Terror Attack ಪುಲ್ವಾಮಾ ದಾಳಿಗೆ 3 ವರ್ಷ: 2019ರಲ್ಲಿ ಪಾಕ್ ನಡೆಸಿದ ಭಯೋತ್ಪಾದಕ ದಾಳಿ ಬಗ್ಗೆ 10 ಸಂಗತಿಗಳು ಇಲ್ಲಿವೆ
ಪುಲ್ವಾಮಾ ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Digi Tech Desk

Updated on:Feb 14, 2022 | 10:53 AM

ಮೂರು ವರ್ಷಗಳ ಹಿಂದೆ ಇದೇ ದಿನ ಪುಲ್ವಾಮಾದಲ್ಲಿ(Pulwama Attack) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 14, 2019 ರಂದು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ 20 ವರ್ಷದ ಆತ್ಮಹತ್ಯಾ ಬಾಂಬರ್ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲು ಪಡೆಗೆ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು 40 ಯೋಧರನ್ನು ಹತ್ಯೆಗೈದಿದ್ದನು. ಭೀಕರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾಯಿತು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ತಮ್ಮ ಪ್ರತಿಕ್ರಿಯೆಯ ಸಮಯ, ಸ್ಥಳ ಮತ್ತು ಸ್ವರೂಪವನ್ನು ಆಯ್ಕೆ ಮಾಡಲು ಭದ್ರತಾ ಪಡೆಗಳಿಗೆ ಅನುಮತಿ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ನಂತರ ಭಾರತ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ವಿರುದ್ಧ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು. ಫೆಬ್ರವರಿ 26, 2019 ರ ಮುಂಜಾನೆ ಐಎಎಫ್ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಿ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡವು. ಪುಲ್ವಾಮಾದಲ್ಲಿ ನಡೆದ ಉಗ್ರದಾಳಿ ಕಳೆದ ಮೂರು ದಶಕಗಳಿಂದೀಚೆಗೆ ಭದ್ರತ ಸಿಬ್ಬಂದಿ ಮೇಲೆನಡೆದ ಭೀಕರ ಭಯೋತ್ಪಾದಕ ದಾಳಿಯಾಗಿದೆ ಇದೆ. ಪಾಕಿಸ್ತಾನ ಪ್ರಾಯೋಜಿತ ಭೀಕರ ದಾಳಿ ಇದಾಗಿದ್ದು,  ಈ ಘಟನೆಯ ತನಿಖೆ ನಡೆದಿದ್ದು ಹೇಗೆ? ಅಪರಾಧಿಗಳಿಗೆ ಶಿಕ್ಷೆಯಾಯಿತೇ?

ಪುಲ್ವಾಮಾ ದಾಳಿ ಬಗ್ಗೆ  10 ಸಂಗತಿಗಳು ಇಲ್ಲಿವೆ.

  1. ಜೈಶ್-ಎ-ಮೊಹಮ್ಮದ್ (JeM) ಆತ್ಮಾಹುತಿ ಬಾಂಬರ್ ಅನ್ನು ಆದಿಲ್ ಅಹ್ಮದ್ ದರ್ (20) ಎಂದು ಗುರುತಿಸಲಾಗಿದೆ. ಜಿಹಾದಿಯಾದ ದರ್, ಪುಲ್ವಾಮಾದ ಲೆಥ್‌ಪೋರಾದಲ್ಲಿ 35-40 ಸಿಆರ್‌ಪಿಎಫ್ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗಳಲ್ಲಿ ಒಂದಕ್ಕೆ ಐಇಡಿ ತುಂಬಿದ ಕಾರನ್ನು ಡಿಕ್ಕಿ ಹೊಡೆದಿದ್ದನು.
  2. ಫೆಬ್ರವರಿ 14, 2019 ರಂದು ಮಧ್ಯಾಹ್ನ 3:15 ರ ಸುಮಾರಿಗೆ 2,500 ಸಿಆರ್‌ಪಿಎಫ್ ಸಿಬ್ಬಂದಿಗಳೊಂದಿಗೆ 78 ಬಸ್‌ಗಳ ಬೆಂಗಾವಲು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ.
  3. ಭಯೋತ್ಪಾದಕ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿತು. ಫೆಬ್ರವರಿ 15, 2019 ರಂದು, ದಾಳಿಯನ್ನು ಪಾಕಿಸ್ತಾನ ಪ್ರಾಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು.
  4. ಫೆಬ್ರವರಿ 26 ರಂದು, ಭಾರತೀಯ ಸಶಸ್ತ್ರ ಪಡೆಗಳು ಜೈಶ್-ಎ-ಮೊಹಮ್ಮದ್ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದವು.
  5. ದಾಳಿಯ ಸುಮಾರು 18 ತಿಂಗಳ ನಂತರ ಆಗಸ್ಟ್ 2020 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗುಂಪು ಜೈಷೆ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನರ ವಿರುದ್ಧ ಭಯೋತ್ಪಾದಕ ದಾಳಿ ಸಂಚು ನಡೆಸಿದ ಆರೋಪದಲ್ಲಿ 13,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು.
  6. ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದರ್ 200 ಕೆಜಿ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಚಲಾಯಿಸುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
  7. ಮಸೂದ್ ಅಜರ್, ಆತನ ಸಹೋದರರಾದ ಅಬ್ದುಲ್ ರೌಫ್ ಮತ್ತು ಅಮ್ಮರ್ ಅಲ್ವಿ ಮತ್ತು ಆತನ ಸೋದರಳಿಯ ಮೊಹಮ್ಮದ್ ಉಮರ್ ಫಾರೂಕ್, 2018 ರಲ್ಲಿ ಭಾರತಕ್ಕೆ ನುಸುಳಿದ್ದರು ಮತ್ತು ನಂತರ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು.
  8. ಆರೋಪಪಟ್ಟಿಯಲ್ಲಿ ಆರೋಪಿಸಲಾದ 19 ಜನರಲ್ಲಿ 12 ಮಂದಿ ಕಾಶ್ಮೀರದ ನಿವಾಸಿಗಳಾಗಿದ್ದರೆ, 7 ಮಂದಿ ಪಾಕಿಸ್ತಾನಿ ಪ್ರಜೆಗಳು. ಪಾಕಿಸ್ತಾನದ ನಿವಾಸಿಗಳಲ್ಲಿ ಮಸೂದ್ ಅಜರ್ ಅಲ್ವಿ, ರೌಫ್ ಅಸ್ಗರ್ ಅಲ್ವಿ, ಅಮ್ಮರ್ ಅಲ್ವಿ, ಕ್ವಾರಿ ಮುಫ್ತಿ ಯಾಸಿರ್ (ಹತನಾಗಿದ್ದಾನೆ), ಮೊಹಮ್ಮದ್ ಇಸ್ಮಾಯಿಲ್, ಮುಹಮ್ಮದ್ ಉಮರ್ ಫಾರೂಕ್ (ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು), ಕಮ್ರಾನ್ ಅಲಿ (ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು) ಸೇರಿದ್ದಾರೆ.
  9. ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಕಾಶ್ಮೀರಿ ನಿವಾಸಿಗಳೆಂದರೆ ಶಾಕಿರ್ ಬಶೀರ್, ಇನ್ಶಾ ಜಾನ್, ಪೀರ್ ತಾರಿಕ್ ಅಹ್ಮದ್ ಶಾ, ವೈಜ್-ಉಲ್-ಇಸ್ಲಾಮ್, ಮೊಹಮ್ಮದ್ ಅಬ್ಬಾಸ್ ರಾಥರ್, ಬಿಲಾಲ್ ಅಹ್ಮದ್ ಕುಚೆ, ಮೊಹಮ್ಮದ್ ಇಕ್ಬಾಲ್ ರಾಥರ್, ಸಮೀರ್ ಅಹ್ಮದ್ ದರ್, ಅಶಾಕ್ ಅಹ್ಮದ್ ನೆಂಗ್ರೂ, ಆದಿಲ್ ಅಹ್ಮದ್ ದರ್- ಈತ ಆತ್ಮಹತ್ಯಾ ಬಾಂಬರ್, ಸಜ್ಜದ್ ಅಹ್ಮದ್ ಭಟ್ (ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ), ಮುದಾಸಿರ್ ಅಹ್ಮದ್ ಖಾನ್ (ಹತ್ಯೆಗೀಡಾಗಿದ್ದಾನೆ).
  10. ಎನ್‌ಐಎ ನಡೆಸಿದ ತನಿಖೆಯು ಪಾಕಿಸ್ತಾನದ ಶಾಕರ್‌ಗಢದಲ್ಲಿರುವ ಲಾಂಚ್ ಪ್ಯಾಡ್‌ಗಳಿಂದ ಭಯೋತ್ಪಾದಕರನ್ನು ಭಾರತದ ಭೂಪ್ರದೇಶಕ್ಕೆ ತಳ್ಳುವಲ್ಲಿ ಪಾಕಿಸ್ತಾನಿ ಸಂಘಟನೆಯ ಪಾತ್ರವನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: Video: ಭೂ ವೀಕ್ಷಣಾ ಉಪಗ್ರಹ ಸೇರಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

Published On - 10:29 am, Mon, 14 February 22

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು