AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭಾ ಕ್ಷೇತ್ರಗಳಲ್ಲಿ ಆದಷ್ಟು ಬೇಗ ಕಚೇರಿ ಸ್ಥಾಪಿಸಿ ಎಂದು ಪಕ್ಷದ 13 ಶಾಸಕರಿಗೆ ತಿಪ್ರಾ ಮೋಥಾ ಮುಖ್ಯಸ್ಥ ದೆಬ್ಬರ್ಮಾ ಸಂದೇಶ

Pradyot Kishore Debbarma: ಗ್ರೇಟರ್ ತಿಪ್ರಾಲ್ಯಾಂಡ್ ರಾಜ್ಯ ಸ್ಥಾನದ ವಿಷಯದಲ್ಲಿ ಪಕ್ಷವು ತನ್ನ ನಿಲುವನ್ನು ಬದಲಾಯಿಸಿಲ್ಲ ಮತ್ತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಅದನ್ನು ಪ್ರಸ್ತಾಪಿಸುತ್ತದೆ ಎಂದು ದೆಬ್ಬರ್ಮಾ ಹೇಳಿದ್ದಾರೆ.

ವಿಧಾನಸಭಾ ಕ್ಷೇತ್ರಗಳಲ್ಲಿ ಆದಷ್ಟು ಬೇಗ ಕಚೇರಿ ಸ್ಥಾಪಿಸಿ ಎಂದು ಪಕ್ಷದ 13 ಶಾಸಕರಿಗೆ ತಿಪ್ರಾ ಮೋಥಾ ಮುಖ್ಯಸ್ಥ ದೆಬ್ಬರ್ಮಾ ಸಂದೇಶ
ದೆಬ್ಬರ್ಮಾ ಟ್ವೀಟ್ ಮಾಡಿದ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Mar 18, 2023 | 1:27 PM

Share

ಜನರು ಸುಲಭವಾಗಿ ಅವರನ್ನು ತಲುಪಲು ತ್ರಿಪುರಾದಲ್ಲಿರುವ (Tripura) ತಮ್ಮ ಪಕ್ಷದ ಎಲ್ಲಾ 13 ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿ ಕಚೇರಿ ಸ್ಥಾಪಿಸುವಂತೆ ತಿಪ್ರಾ ಮೋಥಾ (Tipra Motha) ಮುಖ್ಯಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ (Pradyot Kishore Debbarma) ಶುಕ್ರವಾರ ಹೇಳಿದ್ದಾರೆ. ಕಚೇರಿಯ ಕುರ್ಚಿ ಚಿತ್ರವನ್ನು ಹಂಚಿಕೊಂಡಿರುವ ಟ್ವೀಟ್ ಮಾಡಿದ ದೆಬ್ಬರ್ಮಾ “ನನ್ನ ಎಲ್ಲಾ 13 ಶಾಸಕರನ್ನು ಅವರ ಸ್ಥಳೀಯ ಕ್ಷೇತ್ರಗಳಲ್ಲಿ (ಅವರ ಮನೆಗಳಲ್ಲಿ ಅಲ್ಲ) ಕಚೇರಿ ಸ್ಥಾಪಿಸಲು ನಾನು ಕೇಳಿಕೊಂಡಿದ್ದೇನೆ ಇದರಿಂದ ನಮ್ಮ ಜನರು ತಮ್ಮ ಸಮಸ್ಯೆಗಳನ್ನು ಎಲ್ಲಿ ಹೇಳಬಹುದು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಈ ಕಚೇರಿಗಳನ್ನು ಸ್ಥಾಪಿಸಲು ನಾನು ಅವರಿಗೆ ಗಡುವು ನೀಡಿದ್ದೇನೆ ಮತ್ತು ಅವುಗಳು ಸಾಧ್ಯವಾದಷ್ಟು ಬೇಗ ಕಾರ್ಯನಿರ್ವಹಿಸುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.ಇದಕ್ಕೂ ಮುನ್ನ, ಈಶಾನ್ಯ ರಾಜ್ಯದಲ್ಲಿ 13 ಸ್ಥಾನಗಳನ್ನು ಪಡೆದು ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿರುವ ಪ್ರಾದೇಶಿಕ ಪಕ್ಷದ ಶಾಸಕರು ಒಟ್ಟಾಗಿ ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.

ತಿಪ್ರಾ ಮೋಥಾ ಚುನಾವಣಾ ಹೋರಾಟದಲ್ಲಿ ಇಲ್ಲದಿದ್ದರೆ, 60 ಸದಸ್ಯ ಬಲದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದಿದ್ದಾರೆ ದೆಬ್ಬರ್ಮಾ. ನೂತನ ವಿಧಾನಸಭೆಯ ಮೊದಲ ಅಧಿವೇಶನ ಮಾರ್ಚ್ 24ರಂದು ಆರಂಭವಾಗಲಿದೆ.

ವಿಧಾನಸಭೆಯಲ್ಲಿ ತಿಪ್ರಾ ಮೋತಾದ 13 ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೆಬ್ಬರ್ಮಾ, ರಾಜ್ಯದ ಮೂಲನಿವಾಸಿಗಳ ಸಮಸ್ಯೆಗಳಿಗೆ ಸಂವಿಧಾನಾತ್ಮಕ ಪರಿಹಾರದ ವಿಷಯವನ್ನು ಪಕ್ಷವು ಸದನದಲ್ಲಿ ಪ್ರಸ್ತಾಪಿಸುತ್ತದೆ ಎಂದಿದ್ದರು.

ಇದನ್ನೂ ಓದಿ: Jharkhand: ಅನುಕಂಪದ ನೌಕರಿ ಆಸೆಗೆ ಗಂಡನನ್ನೇ ಕೊಲೆ ಮಾಡಿ ಸೀಲಿಂಗ್ ಫ್ಯಾನ್​ಗೆ ನೇತು ಹಾಕಿದ್ದ ಪತ್ನಿ; ಆಮೇಲೇನಾಯ್ತು?

ಪ್ರಾದೇಶಿಕ ಪಕ್ಷದ ಎಲ್ಲಾ 13 ಶಾಸಕರು ತಮ್ಮ ಮಾತೃಭಾಷೆ ಕೊಕ್ಬೊರೊಕ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ದೆಬ್ಬರ್ಮಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Sat, 18 March 23