TTD: ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ, ಕೂರ್ಮಪೀಠ ಸಮರ್ಪಿಸಿದ ಇನ್ಫೋಸಿಸ್ ಮೂರ್ತಿ ದಂಪತಿ

Sudha Murthy, Narayana Murthy at Tirupati: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂ ಮೌಲ್ಯದ ಶಂಖ ಮತ್ತು ಕೂರ್ಮಪೀಠ ಸಮರ್ಪಿಸಿದ್ದಾರೆ.

TTD: ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ, ಕೂರ್ಮಪೀಠ ಸಮರ್ಪಿಸಿದ ಇನ್ಫೋಸಿಸ್ ಮೂರ್ತಿ ದಂಪತಿ
ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ದಂಪತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2023 | 1:10 PM

ತಿರುಪತಿ ತಿಮ್ಮಪ್ಪನ ಭಕ್ತರ ಸಂಖ್ಯೆ ಅಗಾಧವಾದುದು. ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ, ಭಕ್ತರ ಕಷ್ಟಗಳನ್ನು ಕರಗಿಸುತ್ತಾನೆ. ಜಗತ್ತಿನಾದ್ಯಂತ ಜನರು ತಿರುಪತಿ ಸನ್ನಿಧಾನಕ್ಕೆ ಬಂದು ಹೋಗುತ್ತಾರೆ. ಜನಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು, ಸೆಲಬ್ರಿಟಿಗಳು ತಿರುಪತಿ ಬಾಲಾಜಿ (Tirupati Balaji) ಕಂಡು ಸಂತೃಪ್ತರಾಗುತ್ತಾರೆ. ಹಿಂದೆಲ್ಲಾ ರಾಜ ಮಹಾರಾಜರು ವೆಂಕಟೇಶ್ವರನಿಗೆ ಜಮೀನು, ಬಂಗಾರ, ವಜ್ರ ವೈಡೂರ್ಯಗಳನ್ನು ಸಮರ್ಪಿಸುತ್ತಿದ್ದರು. ನಮ್ಮ ಜನಾರ್ದನ ರೆಡ್ಡಿ ಚಿನ್ನದ ಕಿರೀಟವನ್ನೇ ಕೊಟ್ಟು ಸುದ್ದಿ ಮಾಡಿದ್ದರು. ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ (Infosys Murthy Couple) ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಹೋಗಿ ಬೆಲೆಬಾಳುವ ಕಾಣಿಕೆಗಳನ್ನು ಸಮರ್ಪಿಸಿದ್ದಾರೆ.

ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ದಂಪತಿ ಸಮರ್ಪಿಸಿದ 2 ಕಿಲೋ ಕಾಣಿಕೆಗಳ ಮೌಲ್ಯ 1.25 ಕೋಟಿ ರೂ ಎನ್ನಲಾಗಿದೆ. ಶ್ರೀವಾರಿ ಪೂಜೆಗೆ ಬಳಸುವ ಅಭಿಷೇಕದ ಶಂಖ ಹಾಗೂ ಕೂರ್ಮಪೀಠವನ್ನು ದಾನವಾಗಿ ಕೊಟ್ಟಿದ್ದಾರೆ. ಎರಡೂ ಕೂಡ ಚಿನ್ನದಿಂದ ಮಾಡಿದುದಾಗಿದೆ. ಟಿಟಿಡಿ ಸಿಇಒ ಧರ್ಮ ರೆಡ್ಡಿ ಅವರು ಈ ಸಂದರ್ಭದಲ್ಲಿ ಮೂರ್ತಿ ದಂಪತಿಗೆ ಶೇಷವಸ್ತ್ರ ತೊಡಿಸಿ ಪ್ರಸಾದ ಕೊಟ್ಟರು.

ಇದನ್ನೂ ಓದಿTamil Nadu: ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮೇಲೆ ಇ.ಡಿ ದಾಳಿ, 9 ಸ್ಥಳಗಳಲ್ಲಿ ಶೋಧ ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ಇಬ್ಬರೂ ಕೂಡ ತಿರುಪತಿ ತಿಮ್ಮಪ್ಪನ ಭಕ್ತರು. ಸುಧಾ ಮೂರ್ತಿ ಅವರು ಎರಡು ಬಾರಿ ಟಿಟಿಡಿ ಟ್ರಸ್ಟ್ ಬೋರ್ಡ್​ನ ಛೇರ್ಮನ್ ಆಗಿದ್ದರು. ಅವರ ಅವಧಿಯಲ್ಲಿ ತಿರುಪತಿ, ತಿರುಮಲದಲ್ಲಿ ಸೌಕರ್ಯವ್ಯವಸ್ಥೆಯನ್ನು ಉನ್ನತೀಕರಿಲಾಗಿತ್ತು. ಜಗನ್ಮೋಹನ್ ರೆಡ್ಡಿ ಸಿಎ ಆದ ಬಳಿಕ ಸುಧಾ ಮೂರ್ತಿ ಅವರು ಬೋರ್ಡ್ ಛೇರ್ಮನ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
Daily Devotional: ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಉತ್ತಮ?
Daily Devotional: ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಉತ್ತಮ?
ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ