ಪಾಕ್ ಬಣ್ಣ ಬಯಲು ಮಾಡಲು ಹೊರಟ ನಿಯೋಗ, ಕೊನೆಗೂ ಪ್ರತಿನಿಧಿಯನ್ನು ಕಳುಹಿಸಲು ಒಪ್ಪಿಕೊಂಡ ಮಮತಾ
ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್‌ನ ವಿವರಗಳನ್ನು ಜಗತ್ತಿಗೆ ಎತ್ತಿ ತೋರಿಸಲು ಬಹು ದೇಶಗಳಿಗೆ ಭೇಟಿ ನೀಡಲಿರುವ ಸಂಸದೀಯ ನಿಯೋಗಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.ಇದಕ್ಕೂ ಮೊದಲು, ಕೇಂದ್ರವು ತೃಣಮೂಲ ಸಂಸದ ಮತ್ತು ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಏಳು ರಾಜತಾಂತ್ರಿಕ ನಿಯೋಗಗಳಲ್ಲಿ ಒಂದರ ಸದಸ್ಯರನ್ನಾಗಿ ಹೆಸರಿಸಿತ್ತು. ಈ ನಿಯೋಗಗಳು ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತದ ನಿಲುವನ್ನು ಮಂಡಿಸಲು ವಿವಿಧ ವಿದೇಶಗಳಿಗೆ ಪ್ರಯಾಣಿಸಲಿವೆ.

ಕೋಲ್ಕತ್ತಾ, ಮೇ 20: ಜಗತ್ತಿನ ಮುಂದೆ ಪಾಕಿಸ್ತಾನದ ಮುಖವಾಡ ಕಳಚಲು ಹೊರಟಿರುವ ಬಹುಪಕ್ಷ ಸಂಸದರ ನಿಯೋಗಕ್ಕೆ ಟಿಎಂಸಿಯಿಂದ ಯಾರನ್ನೂ ಕಳುಹಿಸುವುದಿಲ್ಲ ಎಂದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇದೀಗ ಸಂಸದ ಅಭಿಷೇಕ್ ಬ್ಯಾನರ್ಜಿಯನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ, ಆಪರೇಷನ್ ಸಿಂಧೂರ್ ನಿಯೋಗಕ್ಕೆ ನಾಮನಿರ್ದೇಶನ ಕೋರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಆ ಪಾತ್ರಕ್ಕೆ ನಾಮನಿರ್ದೇಶನ ಮಾಡಿದ್ದಾರೆ.
ಇದಕ್ಕೂ ಮೊದಲು, ಕೇಂದ್ರವು ತೃಣಮೂಲ ಸಂಸದ ಮತ್ತು ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಏಳು ರಾಜತಾಂತ್ರಿಕ ನಿಯೋಗಗಳಲ್ಲಿ ಒಂದರ ಸದಸ್ಯರನ್ನಾಗಿ ಹೆಸರಿಸಿತ್ತು. ಈ ನಿಯೋಗಗಳು ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತದ ನಿಲುವನ್ನು ಮಂಡಿಸಲು ವಿವಿಧ ವಿದೇಶಗಳಿಗೆ ಪ್ರಯಾಣಿಸಲಿವೆ.
ವಿರೋಧ ವ್ಯಕ್ತವಾದ ಹಿನ್ನೆಲೆ ಯೂಸುಫ್ ಬದಲಿಗೆ ಅಭಿಷೇಕ್ ಬ್ಯಾನರ್ಜಿಯನ್ನು ಕಳುಹಿಸಲು ಟಿಎಂಸಿ ನಿರ್ಧರಿಸಿದೆ. ಸರ್ವಪಕ್ಷ ನಿಯೋಗಗಳಿಗೆ ಪಕ್ಷವು ಯಾರನ್ನು ನಾಮನಿರ್ದೇಶನ ಮಾಡಬೇಕೆಂದು ಕೇಂದ್ರವು ನಿರ್ಧರಿಸಬಾರದು ಎಂದು ಮಮತಾ ಹೇಳಿದ್ದರು.
We’re delighted to share that our Chairperson Smt. @MamataOfficial has nominated Nat’l GS Shri @abhishekaitc to represent Trinamool Congress in the all-party delegation for India’s global outreach against terrorism.
At a time when the world must unite to confront the growing…
— All India Trinamool Congress (@AITCofficial) May 20, 2025
ಬೈಜಯಂತ್ ಪಾಂಡಾ (ಬಿಜೆಪಿ), ರವಿಶಂಕರ್ ಪ್ರಸಾದ್ (ಬಿಜೆಪಿ), ಸಂಜಯ್ ಕುಮಾರ್ ಝಾ (ಜೆಡಿಯು), ಶ್ರೀಕಾಂತ್ ಶಿಂಧೆ (ಶಿವಸೇನೆ), ಶಶಿ ತರೂರ್ (ಕಾಂಗ್ರೆಸ್), ಕನಿಮೋಳಿ (ಡಿಎಂಕೆ) ಮತ್ತು ಸುಪ್ರಿಯಾ ಸುಳೆ (ಎನ್‌ಸಿಪಿ-ಎಸ್‌ಪಿ) ನೇತೃತ್ವದ ನಿಯೋಗವು ಒಟ್ಟು 32 ದೇಶಗಳು ಮತ್ತು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿರುವ ಇಯು ಪ್ರಧಾನ ಕಚೇರಿಗೆ ಭೇಟಿ ನೀಡಲಿದೆ.
ಮತ್ತಷ್ಟು ಓದಿ: ಜಗತ್ತಿನ ಮುಂದೆ ಪಾಕ್ ಮುಖವಾಡ ಕಳಚಲು ನಮ್ಮ ಸಂಸದರನ್ನು ಕಳಿಸೋದಿಲ್ಲ ಎಂದ ಮಮತಾ ಬ್ಯಾನರ್ಜಿ
ಪ್ರತಿ ನಿಯೋಗದಲ್ಲಿ ಆರರಿಂದ ಎಂಟು ರಾಜಕಾರಣಿಗಳು ಇರುತ್ತಾರೆ. ಅವರಿಗೆ ಸಹಾಯ ಮಾಡಲು ಮಾಜಿ ರಾಜತಾಂತ್ರಿಕರೊಬ್ಬರು ಸಹ ಇರುತ್ತಾರೆ. 51 ರಾಜಕಾರಣಿಗಳಲ್ಲಿ 31 ಮಂದಿ ಆಡಳಿತಾರೂಢ ಎನ್ಡಿಎ ಪಕ್ಷದವರಾಗಿದ್ದರೆ, ಉಳಿದ 20 ಬೇರೆ ಪಕ್ಷಗಳವರು. ಎಲ್ಲಾ ಏಳು ನಿಯೋಗಗಳಲ್ಲಿ ಕನಿಷ್ಠ ಒಬ್ಬ ಮುಸ್ಲಿಂ ಪ್ರತಿನಿಧಿ ಇದ್ದಾರೆ, ಅವರು ರಾಜಕಾರಣಿ ಅಥವಾ ರಾಜತಾಂತ್ರಿಕರಾಗಿರಬಹುದು.
ಒಂದು ಮಿಷನ್, ಒಂದು ಸಂದೇಶ, ಒಂದು ಭಾರತ ಎ ಮಿಷನ್ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಒಂದು ಸಂದೇಶ, ಒಂದು ಭಾರತ, ಭಯೋತ್ಪಾದನೆಯ ವಿರುದ್ಧ ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುವ ಆಪರೇಷನ್ ಸಿಂಧೂರ್ ಅಡಿಯಲ್ಲಿ ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ದೇಶಗಳನ್ನು ಭೇಟಿ ಮಾಡಲಿವೆ. ನಿಯೋಗದಲ್ಲಿ ಮಾಜಿ ಕೇಂದ್ರ ಸಚಿವರಾದ ಗುಲಾಂ ನಬಿ ಆಜಾದ್, ಎಂಜೆ ಅಕ್ಬರ್, ಆನಂದ್ ಶರ್ಮಾ, ವಿ ಮುರಳೀಧರನ್, ಸಲ್ಮಾನ್ ಖುರ್ಷಿದ್ ಮತ್ತು ಎಸ್ಎಸ್ ಅಹ್ಲುವಾಲಿಯಾ ಕೂಡ ಇದ್ದಾರೆ, ಅವರು ಪ್ರಸ್ತುತ ಸಂಸತ್ ಸದಸ್ಯರಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Tue, 20 May 25