ಉತ್ತರ ಪ್ರದೇಶದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಅದ್ಧೂರಿ ಮದುವೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 20, 2022 | 1:50 PM

ಕಳೆದ ವಾರ ನಾವು ಹವನ್ ಪೂಜಾ ಮಾಡಿದ್ದೆವು. ಈಗ ನಾವು ಕಪ್ಪೆ ಜೋಡಿಗೆ ಮದುವೆ ಮಾಡುತ್ತಿದ್ದೇವೆ. ಈ ಆಚರಣೆಯಿಂದಾಗಿ ನಮ್ಮ ಪ್ರದೇಶದಲ್ಲಿ ಮಳೆಯಾಗಬಹುದು ಎಂದು ನಾವು ಭಾವಿಸುತ್ತೇವೆ...

ಉತ್ತರ ಪ್ರದೇಶದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಅದ್ಧೂರಿ ಮದುವೆ
ಕಪ್ಪೆಗಳ ಮದುವೆ
Follow us on

ಗೋರಖ್​​ಪುರ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ (Uttar Pradesh) ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಗಾಗಿ ಪ್ರಾರ್ಥಿಸಿದ ಗೋರಖ್ ಪುರದ (Gorakhpur) ಜನರು ಕಪ್ಪೆಗಳಿಗೆ ಮದುವೆ (Frog Wedding) ಮಾಡಿಸಿದ್ದಾರೆ. ಹಿಂದೂ ಮಹಾಸಂಘ್ ಎಂಬ ಸ್ಥಳೀಯ ಗುಂಪು ಮಂಗಳವಾರ ಇಲ್ಲಿನ ಕಲಿಬರಿ ದೇವಾಲಯದಲ್ಲಿ ಮದುವೆ ಮಾಡಿಸಿದ್ದಾರೆ.ಈ ಮದುವೆಯಲ್ಲಿ ಹಲವಾರು ಜನರೂ ಭಾಗಿಯಾಗಿದ್ದಾರೆ. ಇಡೀ ಪ್ರದೇಶವೇ ಬರದ ಪರಿಸ್ಥಿತಿಯಲ್ಲಿದೆ. ಶ್ರಾವಣ ಮಾಸದ ಐದು ದಿನಗಳು ಈಗಾಗಲೇ ಕಳೆದಿದೆ ಆದರೆ ಮಳೆಯೇ ಬಂದಿಲ್ಲ ಎಂದು ಹಿಂದೂ ಮಹಾಸಂಘದ ರಾಮಕಾಂತ್ ವರ್ಮಾ ಹೇಳಿದ್ದಾರೆ. ಕಳೆದ ವಾರ ನಾವು ಹವನ್ ಪೂಜಾ ಮಾಡಿದ್ದೆವು. ಈಗ ನಾವು ಕಪ್ಪೆ ಜೋಡಿಗೆ ಮದುವೆ ಮಾಡುತ್ತಿದ್ದೇವೆ. ಈ ಆಚರಣೆಯಿಂದಾಗಿ ನಮ್ಮ ಪ್ರದೇಶದಲ್ಲಿ ಮಳೆಯಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ. ಈ ಆಚರಣೆ ಖಂಡಿತವಾಗಿಯೂ ಫಲ ನೀಡುತ್ತದೆ, ಇಲ್ಲಿ ಮಳೆಯಾಗುತ್ತದೆ ಎಂದು ಮದುವೆಯಲ್ಲಿ ಭಾಗಿಯಾದ ಜನರು ಹೇಳಿದ್ದಾರೆ.


ಜುಲೈ 13ರಂದು ಇಲ್ಲಿನ ಮಹಾರಾಜ್ ಗಂಜ್ ಜಿಲ್ಲೆಯಲ್ಲಿನ ಮಹಿಳೆಯರು ಸ್ಥಳೀಯ ಶಾಸಕ ಜೈಮಂಗಲ್ ಕನೋಜಿಯಾ ಮತ್ತು ನಗರ ಪಾಲಿಕೆ ಚೇರ್ ಮೆನ್ ಕೃಷ್ಣ ಗೋಪಾಲ್ ಜೈಸ್ವಾಲ್ ಅವರಿಗೆ ಕೆಸರು ಸ್ನಾನ ಮಾಡಿಸಿದ್ದರು. ಮಳೆ ದೇವರಾದ ಇಂದ್ರನನ್ನು ಒಲಿಸುವುದಕ್ಕಾಗಿ ಆ ಪ್ರದೇಶದ ನಾಯಕರಿಗೆ ಕೆಸರು ಸ್ನಾನ ಮಾಡಿಸುವ ಆಚರಣೆಯಾಗಿದೆ ಇದು.

ಬರದ ಪರಿಸ್ಥಿತಿ ಎದುರಿಸುತ್ತಿರಾಗ ಮಹಿಳೆಯರು ಮಾತ್ರ ಹಳೇ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ ಎಂದಿದ್ದಾರೆ ಜೈಸ್ವಾಲ್.