ಲುಲು ಮಾಲ್ನಲ್ಲಿ ನಮಾಜ್, ಇದೇನು ಲುಲು ಮಸೀದಿಯೇ? ಎಂದ ಅಖಿಲ ಭಾರತ್ ಹಿಂದೂ ಮಹಾಸಭಾ
ಮುಸ್ಲಿಂ ಜನರು ನಮಾಜ್ ಮಾಡುತ್ತಿರುವ ಮತ್ತೊಂದು ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ್ ಹಿಂದೂ ಮಹಾಸಭಾದ ವಕ್ತಾರ ಶಿಶಿರ್ ಚತುರ್ವೇದಿ, ಇದು ಲುಲು ಮಾಲ್ ಅಲ್ಲ. ಇದು ಲುಲು ಮಸೀದಿ. ಇಲ್ಲಿ ಜಮೀನು ಖರೀದಿಸಿ ಬೇರೆಯದ್ದೇ ಉದ್ದೇಶಕ್ಕೆ ಇದನ್ನು ಬಳಸಲಾಗುತ್ತದೆ ಎಂದಿದ್ದಾರೆ.
ಲಕ್ನೊ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ (Lucknow) ಲುಲು ಮಾಲ್ನಲ್ಲಿ(Lulu Mall) ನಮಾಜ್ (Namaz) ಮಾಡುತ್ತಿರುವ ಮತ್ತೊಂದು ವಿಡಿಯೊ ಸಿಕ್ಕಿದೆ ಎಂದು ಅಖಿಲ ಭಾರತ್ ಹಿಂದೂ ಮಹಾಸಭಾ ಹೇಳಿದೆ. ಮುಸ್ಲಿಂ ಜನರು ನಮಾಜ್ ಮಾಡುತ್ತಿರುವ ಮತ್ತೊಂದು ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ್ ಹಿಂದೂ ಮಹಾಸಭಾದ ವಕ್ತಾರ ಶಿಶಿರ್ ಚತುರ್ವೇದಿ, ಇದು ಲುಲು ಮಾಲ್ ಅಲ್ಲ. ಇದು ಲುಲು ಮಸೀದಿ. ಇಲ್ಲಿ ಜಮೀನು ಖರೀದಿಸಿ ಬೇರೆಯದ್ದೇ ಉದ್ದೇಶಕ್ಕೆ ಇದನ್ನು ಬಳಸಲಾಗುತ್ತದೆ. ಈ ಬಗ್ಗೆ ಆಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Namaz inside Lulu Mall, Lucknow …. even malls are not spared now ? pic.twitter.com/lES84Sqhuy
ಇದನ್ನೂ ಓದಿ— Vikas (@VikasPronamo) July 13, 2022
ಇದಕ್ಕಿಂತ ಮೊದಲು ಲುಲು ಮಾಲ್ನಲ್ಲಿ ನಮಾಜ್ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಲುಲು ಮಾಲ್ ಪಿಆರ್ ಒ ಹೇಳಿದ್ದರು. ಲುಲು ಮಾಲ್ ಒಳಗೆ ನಮಾಜ್ ಮಾಡಿದವರ ವಿರುದ್ಧ 153A, 295A, 341 ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಮಾಜ್ ಮಾಡಿದವರು ಮಾಲ್ ಸಿಬ್ಬಂದಿ ಅಥವಾ ಮಾಲ್ ಗೆ ಸಂಬಂಧಪಟ್ಟವರಲ್ಲ. ಹಾಗಾಗಿ ಅಪರಿಚಿತ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಲುಲು ಮಾಲ್ನಲ್ಲಿ ನಮಾಜ್ ಮಾಡುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿರುವ ಶಿಶಿರ್ ಚತುರ್ವೇದಿ ಅವರ ಮನೆಗೆ ಲುಲು ಮಾಲ್ ನ ಅಧಿಕಾರಿಗಳು ಹೋಗಿದ್ದಾರೆ. ಲುಲು ಮಾಲ್ನ ಜನರಲ್ ಮ್ಯಾನೇಜರ್ ಸಮೀರ್ ವರ್ಮಾ ಮತ್ತು ಇತರ ಅಧಿಕಾರಿಗಳು, ಪೊಲೀಸರೊಂದಿಗೆ ಶಿಶಿರ್ ಮನೆಗೆ ಹೋಗಿದ್ದಾರೆ.ಆದಾಗ್ಯೂ, ಲುಲು ಮಾಲ್ ಅಧಿಕಾರಿಗಳು ಶಿಶಿರ್ ಜತೆ ಏನು ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
Published On - 2:41 pm, Fri, 15 July 22