Uttar Pradesh: ಅಕ್ರಮವಾಗಿ ನೆಲೆಸಿದ ನಾಲ್ವರು ಚೀನಾ ಪ್ರಜೆಗಳನ್ನು ಬಂಧಿಸಿದ ಉತ್ತರ ಪ್ರದೇಶದ ಪೊಲೀಸರು!
ಉತ್ತರ ಪ್ರದೇಶ ಪೊಲೀಸರದ ವಿಶೇಷ ಕಾರ್ಯಪಡೆ ಹವಾಲಾ ದಂಧೆ ಕುರಿತು ತನಿಖೆ ನಡೆಸುತ್ತಿದ್ದು ಭಾರತದಲ್ಲಿ ಅಕ್ರಮವಾಗಿ ತಂಗಿದ್ದ ನಾಲ್ವರು ಚೀನಾ ಪ್ರಜೆಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನೋಯ್ಡಾ: ಚೀನಾದೊಂದಿಗೆ ನಂಟು ಹೊಂದಿರುವ ನಾಲ್ವರು ಚೀನಾ ಪ್ರಜೆಗಳನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರದ ವಿಶೇಷ ಕಾರ್ಯಪಡೆ ಹವಾಲಾ ದಂಧೆ ಕುರಿತು ತನಿಖೆ ನಡೆಸುತ್ತಿದ್ದು ಭಾರತದಲ್ಲಿ ಅಕ್ರಮವಾಗಿ ತಂಗಿದ್ದ ನಾಲ್ವರು ಚೀನಾ ಪ್ರಜೆಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬಂಧಿತರನ್ನು ಜಾನ್ಸನ್ ಅಲಿಯಾಸ್ ಹಿ ಜುವಾಂಗ್, ರೈನ್ ಅಲಿಯಾಸ್ ರೆನ್ ಚಾವೊ, ಝೆಂಗ್ ಹಾವೋಝೆ ಅಲಿಯಾಸ್ ಜಾನ್ ಮತ್ತು ಜೆಂಗ್ ಡೈ ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳು 2020 ರಿಂದ ಮಾನ್ಯವಿಲ್ಲದ ವೀಸಾದಿಂದ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾರೆ ಮತ್ತು ಚೀನಾದ ಪ್ರಜೆ ಕ್ಸು ಫೀ ಅಲಿಯಾಸ್ ಕೆಲಯ್ (36) ನೊಂದಿಗೆ ಸಂಪರ್ಕ ಹೊಂದಿದ್ದಾರೆ, ಜೂನ್ 13 ರಂದು ಇದೇ ಆರೋಪದ ಮೇಲೆ ಆತನ ಭಾರತೀಯ ಗೆಳತಿ ಪೆಟೆಕ್ರಿನುವೊ (22) ಜೊತೆಗೆ ಬಂಧಿಸಲಾಯಿತು.
ಮಾನ್ಯ ಇಲ್ಲದ ವೀಸಾ ಹೊಂದಿರುವ ಈ ನಾಲ್ಕು ಚೀನೀ ಪ್ರಜೆಗಳನ್ನು ಎಸ್‌ಟಿಎಫ್ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಇವರಿಗೂ ಈ ಹವಾಲಾ ಪ್ರಕರಣಕ್ಕೂ ಲಿಂಕ್ ಇದೆ ಎನ್ನಲಾಗುತ್ತಿದೆ. ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ತಂಗಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ 14 ಚೀನಾದ ಪ್ರಜೆಗಳನ್ನು ನೋಯ್ಡಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಈ ಆರೋಪಿಗಳು ಮೊಬೈಲ್ ಫೋನ್ ಕಂಪನಿಯಲ್ಲಿ ಕೆಲಸ ಮಾಡುತ್ತುದ್ದರು ಆದರೆ ಅವರ ವೀಸಾಗಳು 2020 ರಲ್ಲಿ ಮುಕ್ತಾಯಗೊಂಡಿದೆ. 14 ಚೀನೀ ಪ್ರಜೆಗಳನ್ನು ದೆಹಲಿಯ ಕರಾಗೃಹಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published On - 3:03 pm, Thu, 14 July 22