AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lal Bahadur Shastri Jayanti 2023: ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ, ಅಮೂಲ್ಯ ಸಂದೇಶ ಇಲ್ಲಿದೆ 

ಇಂದು ಭಾರತದ ಹೆಮ್ಮೆಯ ಪುತ್ರ ಹಾಗೂ ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ.  ಪ್ರಾಮಾಣಿಕತೆ, ಸರಳ ಜೀವನ ಮತ್ತು ದಿಟ್ಟ ನಿರ್ಧಾರಕ್ಕೆ ಹೆಸರುವಾಸಿಯಾದ  ಲಾಲ್ ಬಹದ್ದೂರ್ ಶಾಸ್ತ್ರಿಯವರು "ಜೈ ಜವಾನ್ ಜೈ ಕಿಸಾನ್" ಘೋಷಣೆಯ ಮೂಲಕ ಭಾರತೀಯರಲ್ಲಿ ಬೆರೆತವರು. ಅವರ ಜನ್ಮ ಜಯಂತಿಯ  ಈ ಸುಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ  ಸ್ಪೂರ್ತಿದಾಯಕ ಆಲೋಚನೆಗಳ ಬಗ್ಗೆ ತಿಳಿದುಕೊಳ್ಳೋಣ., 

Lal Bahadur Shastri Jayanti 2023: ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ, ಅಮೂಲ್ಯ ಸಂದೇಶ ಇಲ್ಲಿದೆ 
ಲಾಲ್ ಬಹದ್ದೂರ್ ಶಾಸ್ತ್ರಿ
ಮಾಲಾಶ್ರೀ ಅಂಚನ್​
| Edited By: |

Updated on:Oct 02, 2023 | 11:55 AM

Share

ಭಾರತ ಮಾತೆಯ ಹೆಮ್ಮೆಯ ಪುತ್ರ ಮತ್ತು  ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು (Lal Bahadur Shastri) ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮುಘಲ್ಸರಾಯ್​ನಲ್ಲಿ ಜನಿಸಿದರು. ಪಂಡಿತ್ ಜವಾಹರಲಾಲ್ ನೆಹರೂ ಅವರ ಮರಣ  ನಂತರ  ಶಾಸ್ತ್ರಿಯವರು 1964, ಜೂನ್ 9 ರಂದು ಪ್ರಧಾನಿಯಾಗಿ ಅಧಿಕಾರವನ್ನು ವಹಿಸಿಕೊಂಡರು ಮತ್ತು ಸುಮಾರು 18 ತಿಂಗಳ ಕಾಲ ಪ್ರಧಾನಿಯಾಗಿ ದೇಶವನನ್ನು  ಮುನ್ನಡೆಸಿದರು.  1965ರಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ನೆರಯ ದೇಶವವನ್ನು ಸೋಲಿಸುವ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ಪಸರಿಸಿದರು. ಮತ್ತು ಜನವರಿ 10,  1966 ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳ ನಂತರ, ಜನವರಿ 11, 1966 ರ ರಾತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ನಿಗೂಢವಾಗಿ ನಿಧನರಾದರು. ಪ್ರಧಾನಿಯಾಗುವ ಮುನ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೇ ಸಚಿವ, ಸಾರಿಗೆ ಮತ್ತು ಸಂಪರ್ಕ ಸಚಿವ, ವಾಣಿಜ್ಯ ಮತ್ತು ಕೈಗಾರಿಕ ಸಚಿವ, ಗೃಹ ಸಚಿವರ ಜವಬ್ದಾರಿಯನ್ನು ನಿರ್ವಹಿಸಿದ್ದರು.  ಸ್ವಾತಂತ್ರ್ಯ ಹೋರಾಟದಲ್ಲಿಯೂ ಅವರ ಕೊಡುಗೆ ಮಹತ್ವದ್ದು. ಅವರು ಪ್ರಾಮಾಣಿಕತೆ, ಸರಳ ಜೀವನ  ಮತ್ತು ಮಾನವೀಯತೆಯಂತಹ ಗುಣಗಳಿಗೆ ಹೆಸರುವಾಸಿಯಾಗಿದ್ದರು. ಅವರ ಮರಣ ನಂತರ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಸರಳ ಜೀವನವನ್ನು ನಡೆಸಿದ ಶಾಸ್ತ್ರೀಯವರ ಚಿಂತನೆಗಳು ಬಹಳ ಶ್ರೇಷ್ಠವಾಗಿದ್ದವು.  ಅವರ 119 ನೇ ಜನ್ಮ ಜಯಂತಿಯ  ಈ ಸುಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ  ಸ್ಪೂರ್ತಿದಾಯಕ ಆಲೋಚನೆಗಳ ಬಗ್ಗೆ ತಿಳಿದುಕೊಳ್ಳೋಣ.,

ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಪೂರ್ತಿದಾಯಕ ಆಲೋಚನೆಗಳು:

• ಪ್ರಗತಿಗಾಗಿ ನಾವು ನಮ್ಮೊಳಗೆ ಹೋರಾಡುವ ಬದಲು ಬಡತನ, ರೋಗ, ಮತ್ತು ಅಜ್ಞಾನದ ವಿರುದ್ಧ ಹೋರಾಡಬೇಕು.

• ದೇಶದ ಶಕ್ತಿ ಮತ್ತು ಸ್ಥಿರತೆಯ ಪ್ರಮುಖ ಕಾರ್ಯವೆಂದರೆ ಜನರಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಸ್ಥಾಪಿಸುವುದು.

• ಕಾನೂನನ್ನು ಗೌರವಿಸಬೇಕು. ಇದರಿಂದ ಪ್ರಜಾಪ್ರಭುತ್ವದ ಬಲವಾದ ರಚನೆಯನ್ನು ಕಾಪಾಡಿಕೊಳ್ಳಬಹುದು.

• ಹಿಂಸೆ ಮತ್ತು ಅಸತ್ಯದ ಮಾರ್ಗವನ್ನು ಅನುಸರಿಸುವ ಮೂಲಕ ನೀವು ಎಂದಿಗೂ ಎಂದಿಗೂ ನಿಜವಾದ ಪ್ರಜಾಪ್ರಭುತ್ವ ಮತ್ತು ಸ್ವರಾಜ್ಯವನ್ನು ಸಾಧಿಸಲು ಸಾಧ್ಯವಿಲ್ಲ.

• ಕಾನೂನನ್ನು ಗೌರವಿಸಬೇಕು ಇದರಿಂದ ನಮ್ಮ ಪ್ರಜಾಪ್ರಭುತ್ವದ ಮೂಲ ರಚನೆಯು ಅಖಂಡವಾಗಿ ಉಳಿಯುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವವೂ ಬಲಗೊಳ್ಳುತ್ತದೆ.

• ನಾವು ಆಂತರಿಕವಾಗಿ ಬಲಿಷ್ಟರಾಗಿ ಬಡತನ ಮತ್ತು ನಿರುದ್ಯೋಗವನ್ನು ಶಾಶ್ವತವಾಗಿ ನಮ್ಮ ದೇಶದಿಂದ ತೊಲಗಿಸದರೆ ಮಾತ್ರ ನಾವು ಜಗತ್ತಿನ ಗೌರವನ್ನು ಸಂಪಾದಿಸಬಹುದು.

• ಶಿಸ್ತು ಮತ್ತು ಒಗ್ಗಟ್ಟು ದೇಶದ ಶಕ್ತಿಯ ಮೂಲವಾಗಿದೆ.

ಇದನ್ನೂ ಓದಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ; ಬಗೆಹರಿದಿಲ್ಲ ಮಾಜಿ ಪ್ರಧಾನಿಯ ಸಾವಿನ ಸುತ್ತ ಇರುವ ಈ ನಾಲ್ಕು ರಹಸ್ಯಗಳು..

• ದೇಶದ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಯಾಗಿ ಉಳಿಯಬೇಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕರೂ ಕಾನೂನನ್ನು ಗೌರವಿಸುವುದು ಅನಿವಾರ್ಯವಾಗಿದೆ.

• ಯುದ್ಧದಲ್ಲಿ ಹೋರಾಡಿದಂತೆ ನಾವು ಧೈರ್ಯದಿಂದ ಶಾಂತಿಗಾಗಿ ಹೋರಾಡಬೇಕು.

• ದೇಶದ ಸ್ವಾತಂತ್ರ್ಯವನ್ನು ರಕ್ಷಿಸುವ ಜವಬ್ದಾರಿ ಬರೀ ಯೋಧರದ್ದಲ್ಲ, ಅದು ಇಡೀ ದೇಶದ ಜವಬ್ದಾರಿಯಾಗಿದೆ.

• ಜೈ ಜವಾನ್ ಜೈ ಕಿಸಾನ್: ನಮ್ಮ ದೇಶವನ್ನು ರಕ್ಷಿಸುವ ಮತ್ತು ಬಲಿಷ್ಠಗೊಳಿಸುವ ಸೈನಿಕರಿಗೆ ಮತ್ತು ರೈತರಿಗೆ ನಮನ ಸಲ್ಲಿಸೋಣ.

• ನಮ್ಮ ಶಕ್ತಿ ಮತ್ತು ಆ ಶಕ್ತಿಯ ಪ್ರಮುಖ ಕಾರ್ಯವೆಂದರೆ ಜನರಲ್ಲಿ ಏಕತೆಯನ್ನು ಸ್ಥಾಪಿಸುವುದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:54 am, Mon, 2 October 23

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು