ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿ ಆಸಿಫ್ ಹತ್ಯೆ

ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿಯನ್ನು ದೆಹಲಿಯಲ್ಲಿ ಕೊಲೆ(Murder) ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿಜಾಮುದ್ದೀನ್ ಪ್ರದೇಶದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಮಾಹಿತಿಯ ಪ್ರಕಾರ, ಸ್ಕೂಟಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ವಿಷಯ ವಿಕೋಪಕ್ಕೆ ಹೋಗಿ ಆಸಿಫ್ ಖುರೇಷಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆ ನಿಜಾಮುದ್ದೀನ್ ಭೋಗಲ್ ಜಂಗ್ಪುರದಲ್ಲಿ ನಡೆದಿದೆ.

ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿ ಆಸಿಫ್ ಹತ್ಯೆ
ಹುಮಾ ಖುರೇಷಿ

Updated on: Aug 08, 2025 | 8:21 AM

ನವದೆಹಲಿ, ಆಗಸ್ಟ್ 08: ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಆಸಿಫ್​ನನ್ನು ದೆಹಲಿಯಲ್ಲಿ ಕೊಲೆ(Murder) ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿಜಾಮುದ್ದೀನ್ ಪ್ರದೇಶದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಮಾಹಿತಿಯ ಪ್ರಕಾರ, ಸ್ಕೂಟಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ವಿಷಯ ವಿಕೋಪಕ್ಕೆ ಹೋಗಿ ಆಸಿಫ್ ಖುರೇಷಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆ ನಿಜಾಮುದ್ದೀನ್ ಭೋಗಲ್ ಜಂಗ್ಪುರದಲ್ಲಿ ನಡೆದಿದೆ.

ಆಸಿಫ್ ಖುರೇಷಿಯವರ ಹತ್ಯೆಯಿಂದಾಗಿ ಖುರೇಷಿ ಕುಟುಂಬದಲ್ಲಿ ದುಃಖದ ವಾತಾವರಣವಿದೆ. ಹುಮಾ ಖುರೇಷಿಯ ತಂದೆ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ರಾತ್ರಿ 11 ಗಂಟೆ ಸುಮಾರಿಗೆ, ಸ್ಕೂಟಿಯನ್ನು ಗೇಟ್‌ನಿಂದ ತೆಗೆದು ಪಕ್ಕದಲ್ಲಿ ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ನಂತರ, ಆಸಿಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಗೆ ತಲುಪಿದಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇಷ್ಟು ಸಣ್ಣ ವಿಚಾರಕ್ಕೆ ಒಂದು ಜೀವವನ್ನೇ ತೆಗೆಯುತ್ತಾರೆ ಎಂದರೆ ಅವರು ಎಷ್ಟು ಕ್ರೂರಿಗಳಾಗಿರಬಹುದು ಎಂದು ಖುರೇಷಿ ಪತ್ನಿ ಹಾಗೂ ಕುಟುಂಬದವರು ಆರೋಪಿಸಿದ್ದಾರೆ. ಮೃತ ಆಸಿಫ್ ಖುರೇಷಿ ಅವರ ಪತ್ನಿ ಹೇಳುವಂತೆ, ಈ ಹಿಂದೆಯೂ ಆರೋಪಿಯು ಪಾರ್ಕಿಂಗ್ ವಿವಾದಕ್ಕಾಗಿ ನನ್ನ ಪತಿಯೊಂದಿಗೆ ಜಗಳವಾಡಿದ್ದ.

ಮತ್ತಷ್ಟು ಓದಿ: Video: ಒಂದು ಚೂರೂ ಮನುಷ್ಯತ್ವ ಇಲ್ವಾ?, ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ

ಗುರುವಾರ ರಾತ್ರಿ ನನ್ನ ಪತಿ ಕೆಲಸದಿಂದ ಮನೆಗೆ ಹಿಂದಿರುಗಿದಾಗ, ಪಕ್ಕದ ಮನೆಯವರ ಸ್ಕೂಟಿ ಮನೆಯ ಮುಂದೆ ನಿಂತಿತ್ತು. ಅದನ್ನು ತೆಗೆಯಲು ಅವರು ಕೇಳಿದ್ದಾರೆ. ಆದರೆ ಸ್ಕೂಟಿ ತೆಗೆಯುವ ಬದಲು ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದರು. ಬಳಿಕ ಜೋರು ಜಗಳ ನಡೆದಿದೆ. ಆರೋಪಿ ಚೂಪಾದ ಚಾಕುವಿನಿಂದ ಅವರಿಗೆ ಇರಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹುಮಾ ಖುರೇಷಿ ತಂದೆ ಸಲೀಂ ಖುರೇಷಿ ನಾನು ಮನೆಯಲ್ಲಿ ಮಲಗಿದ್ದೆ ಎಂದು ಹೇಳಿದರು. ಆಸಿಫ್ ಕೊಲೆಯಾಗಿದ್ದಾನೆ ಎಂದು ನನಗೆ ಕರೆ ಬಂದಿತು. ಆಸಿಫ್ ಸ್ಕೂಟರ್ ತೆಗೆಯಲು ಕೇಳಿದ್ದ. ಈ ಬಗ್ಗೆ ಜಗಳ ನಡೆದಿತ್ತು. ಆಸಿಫ್ ಮೇಲೆ ಇಬ್ಬರು ಒಟ್ಟಿಗೆ ಹಲ್ಲೆ ನಡೆಸಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಹೇಳಿದ್ದಾರೆ

ಆಸಿಫ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಇದರ ನಂತರ ಆತನನ್ನು ಕೊಲ್ಲಲು ಏನು ಬಳಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಿದ್ದಾರೆ. ಜಗಳ ಕೇವಲ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದ್ದೇ ಅಥವಾ ಅವರ ನಡುವೆ ಹಳೆಯ ದ್ವೇಷವೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಪರಾಧಕ್ಕೆ ಬಳಸಲಾದ ಆಯುಧವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us