AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೆಂಥಾ ಪ್ರೀತಿ, ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನು ಗುಂಡಿ ತೋಡಿ ಮುಚ್ಚೇಬಿಟ್ಟ

ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಪ್ರೇಯಸಿಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೆಂಥಾ ಪ್ರೇತಿ, ಎಷ್ಟೋ ಮಂದಿ ಮನೆಯಲ್ಲಿ ಇಬ್ಬರ ಮದುವೆ ಒಪ್ಪಿಕೊಳ್ಳಲಿಲ್ಲವೆಂದು ಪ್ರಾಣಬಿಡುವವರನ್ನು ಕೇಳಿದ್ದೇವೆ. ಆದರೆ ಇಷ್ಟ ಪಟ್ಟವರು ಮದುವೆಯಾಗು ಎಂದು ಕೇಳಿದ್ದಕ್ಕೆ ಕೊಲೆ ಮಾಡಿರುವ ಹಲವು ನಿದರ್ಶನಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಮದುವೆಯಾಗು ಎಂದಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಗುಂಡಿ ತೋಡಿ ಮುಚ್ಚಿರುವ ಘಟನೆ ತಮಿಳುನಾಡಿನ ಈರೋಡ್​ನಲ್ಲಿ ನಡೆದಿದೆ.

ಇದೆಂಥಾ ಪ್ರೀತಿ, ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನು ಗುಂಡಿ ತೋಡಿ ಮುಚ್ಚೇಬಿಟ್ಟ
ಕ್ರೈಂ
ನಯನಾ ರಾಜೀವ್
|

Updated on: Nov 03, 2025 | 9:49 AM

Share

ಚೆನ್ನೈ, ನವೆಂಬರ್ 03: ಇದೆಂಥಾ ಪ್ರೇತಿ, ಎಷ್ಟೋ ಮಂದಿ ಮನೆಯಲ್ಲಿ ಇಬ್ಬರ ಮದುವೆ ಒಪ್ಪಿಕೊಳ್ಳಲಿಲ್ಲವೆಂದು ಪ್ರಾಣಬಿಡುವವರನ್ನು ಕೇಳಿದ್ದೇವೆ. ಆದರೆ ಇಷ್ಟ ಪಟ್ಟವರು ಮದುವೆಯಾಗು ಎಂದು ಕೇಳಿದ್ದಕ್ಕೆ ಕೊಲೆ(Murder) ಮಾಡಿರುವ ಹಲವು ನಿದರ್ಶನಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಮದುವೆಯಾಗು ಎಂದಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಗುಂಡಿ ತೋಡಿ ಮುಚ್ಚಿರುವ ಘಟನೆ ತಮಿಳುನಾಡಿನ ಈರೋಡ್ನಲ್ಲಿ ನಡೆದಿದೆ.

ಈರೋಡ್ ಜಿಲ್ಲೆಯಲ್ಲಿರುವ ಬಾಳೆ ತೋಟವೊಂದರಲ್ಲಿ 35 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಹೂತಿಟ್ಟಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತನಿಖಾಧಿಕಾರಿಗಳು ಆಕೆಯೊಂದಿಗೆ ಸಂಬಂಧ ಹೊಂದಿದ್ದ 27 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮಳೆ ಬಂತೆಂದು ಅಣಬೆ ಸಂಗ್ರಹಿಸಲು ಹೊಲಕ್ಕೆ ಹೋದ ಸ್ಥಳೀಯರು ರಕ್ತಸಿಕ್ತ ಚಾಕು ಮತ್ತು ಮಣ್ಣಿನಲ್ಲಿ ಕೂದಲನ್ನು ಕಂಡು ಬೆಚ್ಚಿಬಿದ್ದಿದ್ದರು. ಗೋಬಿಚೆಟ್ಟಿಪಾಳಯಂ ಪಟ್ಟಣದ ಬಳಿಯ ಕೃಷಿಭೂಮಿಯಲ್ಲಿ ಮೂರು ಅಡಿ ಆಳದ ಗುಂಡಿಯಿಂದ ಪೊಲೀಸರು ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ.

ಮೃತರನ್ನು ಅಪ್ಪಕುಡಲ್ ಪಟ್ಟಣದ ಬ್ಯೂಟಿಷಿಯನ್ ಸೋನಿಯಾ ಎಂದು ಗುರುತಿಸಲಾಗಿದೆ. ಅವರು ನವೆಂಬರ್ 1 ರಿಂದ ಕಾಣೆಯಾಗಿದ್ದರು. ಅವರು ಕೆಲಸದಿಂದ ಮನೆಗೆ ಬಾರದ ಕಾರಣ ಅವರ ಕುಟುಂಬವು ನಾಪತ್ತೆ ದೂರು ದಾಖಲಿಸಿದೆ. ವಿಧವೆಯಾಗಿರುವ ಸೋನಿಯಾ, ತನ್ನ ಮಗ, ಮಗಳು ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದರು.

ಮತ್ತಷ್ಟು ಓದಿ:  ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್​​ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ

ತನಿಖೆಯಲ್ಲಿ ಆಕೆ ಬಿ.ಕಾಂ ಪದವೀಧರ ಮತ್ತು ಶವ ಪತ್ತೆಯಾದ ಬಾಳೆ ತೋಟದ ಮಾಲೀಕ ಮೋಹನ್ ಕುಮಾರ್ ಎಂಬ ಆರೋಪಿಯೊಂದಿಗೆ ಸಂಪರ್ಕ ಹೊಂದಿರುವ ಕರೆ ದಾಖಲೆಗಳು ಬಹಿರಂಗಗೊಂಡಿವೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಆ ಮಹಿಳೆ ತನ್ನನ್ನು ಮದುವೆಯಾಗುವಂತೆ ಕೇಳುತ್ತಲೇ ಇದ್ದಳು, ಮತ್ತು ಇದು ಕೊಲೆಗೆ ಕಾರಣವಾಯಿತು ಎಂದು ಆತ ಬಾಯ್ಬಿಟ್ಟಿದ್ದಾನೆ. ಸೋನಿಯಾ ಮತ್ತು ಮೋಹನ್ ಕುಮಾರ್ ಎರಡು ವರ್ಷಗಳ ಹಿಂದೆ ಗೋಬಿಚೆಟ್ಟಿಪಾಳ್ಯಂ ಬಳಿಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಭೇಟಿಯಾದರು. ಕಾಲಾನಂತರದಲ್ಲಿ, ಅವರು ನಡುವೆ ಸಂಬಂಧ ಬೆಳೆದಿತ್ತು.

ಅಪರಾಧ ನಡೆದ ದಿನ ಮೋಹನ್ ಕುಮಾರ್ ತನ್ನ ಜಮೀನಿನಲ್ಲಿ ಗುಂಡಿ ತೋಡಿ ರಾತ್ರಿ 8 ಗಂಟೆ ಸುಮಾರಿಗೆ ಸೋನಿಯಾಳನ್ನು ಅಲ್ಲಿಗೆ ಕರೆಸಿಕೊಂಡಿದ್ದ . ಅವನು ಆಕೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಸಣ್ಣ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಂದು, ನಂತರ ಆಕೆಯ ಶವವನ್ನು ಹೂತು ಹಾಕಿ, ಆಕೆಯ ಫೋನ್ ಮತ್ತು ಬಟ್ಟೆಗಳನ್ನು ಭವಾನಿ ಕಾಲುವೆಯ ಬಳಿ ವಿಲೇವಾರಿ ಮಾಡಿದ್ದ. ಪೆರುಂಡುರೈ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಂಡದೊಂದಿಗೆ ಸ್ಥಳದಲ್ಲೇ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ