ಬಿಹಾರ: ಓಡಿ ಹೋಗಿ ವಿವಾಹವಾಗಿ ಕೇವಲ 8 ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ದಂಪತಿ
ಓಡಿಹೋಗಿ ಮದುವೆಯಾಗಿದ್ದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಅವರದ್ದು ಅಂತರ್ಜಾತಿ ವಿವಾಹ. ಪೋಷಕರ ವಿರೋಧಿಸಿ ಮದುವೆಯಾಗುವವರೆಗೆ ಇದ್ದ ಧೈರ್ಯ ಮುಂದೇಕೆ ಇರಲಿಲ್ಲ ಎಂಬುದು ಪ್ರಶ್ನೆಯಾಗಿದೆ. ಈ ಘಟನೆ ಬಹದ್ದೂರ್‌ಪುರ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಶುಭಂ ಕುಮಾರ್ ಮತ್ತು ಅವರ 18 ವರ್ಷದ ಪತ್ನಿ ಮುನ್ನಿ ಕುಮಾರಿ ಮಂಗಳವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬೇಗುಸರಾಯ್, ಜುಲೈ 30: ಪೋಷಕರ ವಿರೋಧ ಕಟ್ಟಿಕೊಂಡು ಓಡಿ ಹೋಗಿ ಮದುವೆ(Marriage)ಯಾಗಿದ್ದ ದಂಪತಿ ಕೇವಲ 8 ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ. ಅವರದ್ದು ಅಂತರ್ಜಾತಿ ವಿವಾಹ. ಪೋಷಕರ ವಿರೋಧಿಸಿ ಮದುವೆಯಾಗುವವರೆಗೆ ಇದ್ದ ಧೈರ್ಯ ಮುಂದೇಕೆ ಇರಲಿಲ್ಲ ಎಂಬುದು ಪ್ರಶ್ನೆಯಾಗಿದೆ. ಈ ಘಟನೆ ಬಹದ್ದೂರ್‌ಪುರ ಗ್ರಾಮದಲ್ಲಿ ನಡೆದಿದೆ.
19 ವರ್ಷದ ಶುಭಂ ಕುಮಾರ್ ಮತ್ತು ಅವರ 18 ವರ್ಷದ ಪತ್ನಿ ಮುನ್ನಿ ಕುಮಾರಿ ಮಂಗಳವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಕಠಿಣ ಹೆಜ್ಜೆ ಇಡುವ ಮೊದಲು, ಶುಭಂ ಅವರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಅಲ್ವಿದಾ (ವಿದಾಯ) ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 2024 ರಲ್ಲಿ ಮನೆಯಿಂದ ಓಡಿಹೋಗಿ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು. ಅವರ ಮದುವೆಯ ನಂತರ, ಅವರ ಕುಟುಂಬವು ಈ ಸಂಬಂಧವನ್ನು ವಿರೋಧಿಸಿತು ಮತ್ತು ಒಂದು ಪಂಚಾಯತಿ ಸಹ ನಡೆಸಿತು, ಆ ಸಮಯದಲ್ಲಿ ಮುನ್ನಿಯ ಸಿಂಧೂರವನ್ನು ಸ್ಪ್ರೈಟ್‌ನಿಂದ ತೊಳೆದು, ಆಕೆಯನ್ನು ಕುಟುಂಬಕ್ಕೆ ಹಿಂದಿರುಗಿಸಲಾಯಿತು.
ಮತ್ತಷ್ಟು ಓದಿ: ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಆದಾಗ್ಯೂ, ದಂಪತಿ ಡಿಸೆಂಬರ್ 2024 ರಲ್ಲಿ ಮತ್ತೆ ಒಂದಾದರು ಮತ್ತು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅವರ ಕುಟುಂಬಗಳು ಮತ್ತು ನೆರೆಹೊರೆಯವರ ಪ್ರಕಾರ, ಇಬ್ಬರ ನಡುವೆ ಯಾವುೇ ಭಿನ್ನಾಭಿಪ್ರಾಯಗಳು ಕಂಡುಬಂದಿಲ್ಲ.
ಘಟನೆ ನಡೆದ ದಿನ ದಂಪತಿಯ ಕುಟುಂಬವು ವೈದ್ಯರನ್ನು ನೋಡಲು ಹೊರಗೆ ಹೋಗಿದ್ದರು. ಮಧ್ಯಾಹ್ನ ಹಿಂತಿರುಗಿದಾಗ ಮನೆ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಕಿಟಕಿಯ ಮೂಲಕ ನೋಡಿದಾಗ ಶುಭಂ ನೇಣು ಬಿಗಿದ ಸ್ಥಿತಿಯಲ್ಲಿದ್ದರು ಮತ್ತು ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದರು. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆನಂದ್ ಪಾಂಡೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಸಹ ಕರೆಸಲಾಯಿತು.
ಈ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಆದಾಗ್ಯೂ, ಮುನ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಆಕೆಯ ಶವವನ್ನು ಕಂಡುಕೊಂಡ ಶುಭಂ, ಕೂಡ ಆತ್ಮಹತ್ಯೆಗೆ ಶಣಾಗಿದ್ದಾರೆ.
ಬಹದ್ದೂರ್‌ಪುರ ಗ್ರಾಮದಲ್ಲಿ ವಿವಾಹಿತ ದಂಪತಿ ಶುಭಂ ಕುಮಾರ್ ಮತ್ತು ಮುನ್ನಿ ಕುಮಾರಿ ಅವರ ಮೃತದೇಹಗಳು ಪತ್ತೆಯಾಗಿವೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಎಸ್‌ಪಿ ಹೇಳಿದರು. ಸಾವಿಗೆ ಕಾರಣವೇನೆಂದು ಕೇಳಿದಾಗ, ಮರಣೋತ್ತರ ಪರೀಕ್ಷೆ ಮತ್ತು ಪೂರ್ಣ ತನಿಖೆಯ ನಂತರವೇ ನಾವು ನಿಖರವಾದ ಸಂದರ್ಭಗಳನ್ನು ನಿರ್ಧರಿಸಬಹುದು ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
