ಇಬ್ಬರು ಮಹಿಳೆಯರನ್ನು ಸಜೀವವಾಗಿ ಸಮಾಧಿ ಮಾಡಿದ ವಿಡಿಯೋ ವೈರಲ್

ಮಧ್ಯಪ್ರದೇಶದ ರೇವಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದ ಇಬ್ಬರು ಮಹಿಳೆಯರನ್ನು ಬಹುತೇಕ ಜೀವಂತ ಸಮಾಧಿ ಮಾಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ರೇವಾದಲ್ಲಿ ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಕ್‌ನಿಂದ ಮಹಿಳೆಯರ ಮೇಲೆ ಜಲ್ಲಿಕಲ್ಲು ಹಾಕಲಾಗಿದೆ.

ಇಬ್ಬರು ಮಹಿಳೆಯರನ್ನು ಸಜೀವವಾಗಿ ಸಮಾಧಿ ಮಾಡಿದ ವಿಡಿಯೋ ವೈರಲ್
ಇಬ್ಬರು ಮಹಿಳೆಯರನ್ನು ಸಜೀವವಾಗಿ ಸಮಾಧಿ ಮಾಡಿದ ವಿಡಿಯೋ ವೈರಲ್

Updated on: Jul 22, 2024 | 5:27 PM

ರೇವಾ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ತಮ್ಮ ಪ್ರದೇಶದಲ್ಲಿ ರಸ್ತೆ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಟ್ರಕ್‌ನಿಂದ ಜಲ್ಲಿಕಲ್ಲು ಸುರಿದು ಭಾಗಶಃ ಸಮಾಧಿ ಮಾಡಲಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ಮಂಗವಾ ಪೊಲೀಸ್ ಠಾಣಾ ವ್ಯಾಪ್ತಿಯ ಹಿನೋಟಾ ಜೋರೋಟ್ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾಗ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಮಹಿಳೆಯರನ್ನು ಜಲ್ಲಿಕಲ್ಲುಗಳ ರಾಶಿಯಲ್ಲಿ ಕುತ್ತಿಗೆಯವರೆಗೂ ಹೂತು ಹಾಕಲಾಗಿದೆ.

ಶನಿವಾರ ನಡೆದ ಈ ಘಟನೆಯ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಜಲ್ಲಿಕಲ್ಲು ತುಂಬಿದ ಟ್ರಕ್‌ನ ಹಿಂದೆ ಕುಳಿತಿರುವುದನ್ನು ನೋಡಬಹುದು. ಅದನ್ನು ಅವರ ಮೇಲೆ ಲೋಡ್ ಮಾಡಲಾಗಿದೆ. ನಂತರ ಸ್ಥಳೀಯರು ಅವರನ್ನು ರಕ್ಷಿಸಿ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.


ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಾವನ್ನು ಇಡಿಯಾಗಿ ನುಂಗಿ ಮತ್ತೆ ಹೊರಹಾಕಿದ ಬೃಹತ್ ನಾಗರಹಾವು; ಮೈ ಜುಮ್ಮೆನಿಸುವ ವಿಡಿಯೋ ವೈರಲ್

ವೈರಲ್ ಆದ ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಾಗಿದೆ. ಪೊಲೀಸರು ಡಂಪರ್ ಅನ್ನು ವಶಪಡಿಸಿಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

ಈ ಘಟನೆಯ ಕುರಿತು ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಜೈದೀಪ್ ಪ್ರಸಾದ್, ಇದು ಭೂ ವಿವಾದದ ಕೌಟುಂಬಿಕ ವಿಷಯವಾಗಿದೆ ಎಂದು ಹೇಳಿದ್ದಾರೆ. ಈ ಘಟನೆ ರಾಜಕೀಯ ಪ್ರಕೋಪಕ್ಕೂ ಕಾರಣವಾಗಿದ್ದು, ಈ ಬಗ್ಗೆ ಮೌನ ವಹಿಸಿರುವ ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಯುವ ಮುಖಂಡ ಶ್ರೀನಿವಾಸ್ ಬಿ.ವಿ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ