ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ, ಐದು ದಿನಗಳ ಮಹಾ ಉತ್ಸವ, ಸಂಸ್ಕೃತಿ ಸಂಗಮದ ಅದ್ಭುತ ವೈಭವ

Tv9 Festival Of India: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಮೂಲಕ ಜನರನ್ನು ಆಕರ್ಷಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ(Tv9 Festival Of India) ಕಾರ್ಯಕ್ರಮ ಈ ಬಾರಿಯೂ ಅದ್ಧೂರಿಯಾಗಿ ನಡೆಯಲಿದೆ. ಟಿವಿ9 ನೆಟ್‌ವರ್ಕ್ ಮೂರನೇ ಬಾರಿಗೆ ಈ ಉತ್ಸವವನ್ನು ಆಯೋಜಿಸಲು ಸಜ್ಜಾಗಿದೆ. ಐದು ದಿನಗಳ ಸಾಂಸ್ಕೃತಿಕ ಉತ್ಸವವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಐತಿಹಾಸಿಕ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ, ಐದು ದಿನಗಳ ಮಹಾ ಉತ್ಸವ, ಸಂಸ್ಕೃತಿ ಸಂಗಮದ ಅದ್ಭುತ ವೈಭವ
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ

Updated on: Aug 20, 2025 | 11:12 AM

ನವದೆಹಲಿ, ಆಗಸ್ಟ್​ 19: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಮೂಲಕ ಜನರನ್ನು ಆಕರ್ಷಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ(Tv9 Festival Of India)  ಈ ಬಾರಿಯೂ ಅದ್ಧೂರಿಯಾಗಿ ನಡೆಯಲಿದೆ. ಟಿವಿ9 ನೆಟ್‌ವರ್ಕ್ ಮೂರನೇ ಬಾರಿಗೆ ಈ ಉತ್ಸವವನ್ನು ಆಯೋಜಿಸಲು ಸಜ್ಜಾಗಿದೆ. ಐದು ದಿನಗಳ ಸಾಂಸ್ಕೃತಿಕ ಉತ್ಸವವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಐತಿಹಾಸಿಕ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಉತ್ಸವಗಳು ದೇಶವನ್ನು ಒಂದುಗೂಡಿಸುತ್ತದೆ .ಈ ಉತ್ಸವಗಳನ್ನು ಆಯೋಜಿಸಲು ತಾವು ತುಂಬಾ ಉತ್ಸುಕರಾಗಿರುವುದಾಗಿ ಟಿವಿ9 ನೆಟ್‌ವರ್ಕ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಕೆ. ವಿಕ್ರಮ್ ಹೇಳಿದ್ದಾರೆ.

ಉತ್ಸವದ ಪ್ರಮುಖ ಆಕರ್ಷಣೆಗಳು:
ದುರ್ಗಾ ಪೂಜಾ ಮಂಟಪ: ಈ ಹಬ್ಬದ ಅತ್ಯಂತ ವಿಶಿಷ್ಟ ಆಕರ್ಷಣೆಗಳಲ್ಲಿ ಒಂದು ದುರ್ಗಾ ದೇವಿಯ ಪೂಜೆಗಾಗಿ ಸ್ಥಾಪಿಸಲಾದ ಮಂಟಪ. ಇದು ದೆಹಲಿಯಲ್ಲಿ ಅತ್ಯಂತ ಎತ್ತರದ ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ದುರ್ಗಾ ಪೂಜಾ ಮಂಟಪವಾಗಲಿದೆ.

ಸಂಗೀತ ಪ್ರದರ್ಶನಗಳು: ಬಾಲಿವುಡ್ ಹಾಡುಗಳಿಂದ ಹಿಡಿದು ಜಾನಪದ ಸಂಗೀತದವರೆಗೆ, ದೇಶದ ಪ್ರಮುಖ ಸಂಗೀತ ಕಲಾವಿದರ ಪ್ರದರ್ಶನಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತವೆ.

ದಾಂಡಿಯಾ – ಗರ್ಬಾ ನೃತ್ಯ: ಲೈವ್ ದಾಂಡಿಯಾ ಮತ್ತು ಗರ್ಬಾ ನೃತ್ಯ ಪ್ರದರ್ಶನಗಳು ಮನರಂಜನೆ ನೀಡುತ್ತವೆ.

ಶಾಪಿಂಗ್: ಜೀವನಶೈಲಿ, ಅಲಂಕಾರ, ಸೌಂದರ್ಯ ಮತ್ತು ಕೈಯಿಂದ ತಯಾರಿಸಿದ ಉತ್ಪನ್ನಗಳಿಂದ ಹಿಡಿದು ಹೈ-ಸ್ಟ್ರೀಟ್ ಫ್ಯಾಷನ್‌ವರೆಗೆ ಅಂತಾರಾಷ್ಟ್ರೀಯ ಉತ್ಪನ್ನಗಳನ್ನು ಒಳಗೊಂಡ ಮಳಿಗೆಗಳನ್ನು ಸ್ಥಾಪಿಸಲಾಗುವುದು.

ಆಹಾರೋತ್ಸವ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ಪ್ರದೇಶಗಳ ವಿಶೇಷ ಭಕ್ಷ್ಯಗಳೊಂದಿಗೆ ಆಹಾರೋತ್ಸವವು ನಿಮ್ಮನ್ನು ಮನಸೋಲುವಂತೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ.

ಮಕ್ಕಳಿಗಾಗಿ ವಿಶೇಷ ಕಾರ್ಯಾಗಾರ: ಕಾರ್ಯಾಗಾರಗಳು, ಆಟಗಳು, ಸ್ಪರ್ಧೆಗಳು ಮತ್ತು ಕಲಾ ಮೂಲೆಗಳನ್ನು ವಿಶೇಷವಾಗಿ ಯುವಕರು ಮತ್ತು ಮಕ್ಕಳಿಗಾಗಿ ಆಯೋಜಿಸಲಾಗುತ್ತಿದೆ.

ಈ ಐದು ದಿನಗಳ ಆಚರಣೆಯು ಸದಾ ನಿಮ್ಮ ಮನಸ್ಸಿನಲ್ಲಿ ಉಳಿಯುವ ನೆನಪುಗಳನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ನಿಮ್ಮ ಕುಟುಂಬದೊಂದಿಗೆ ಹೋಗಲು ಮರೆಯಬೇಡಿ.

ಕಾರ್ಯಕ್ರಮದ ವಿವರಗಳು
ಕಾರ್ಯಕ್ರಮದ ದಿನಾಂಕ: ಸೆಪ್ಟೆಂಬರ್ 28 – ಅಕ್ಟೋಬರ್ 2, 2025

ಸ್ಥಳ: ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ನವದೆಹಲಿ

ಸಮಯ: ಬೆಳಗ್ಗೆ 10.00 – ರಾತ್ರಿ 10.00

ಹೆಚ್ಚಿನ ವಿವರಗಳಿಗಾಗಿ, https://www.tv9festivalofindia.com/ ಗೆ ಭೇಟಿ ನೀಡಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:11 am, Wed, 20 August 25

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us