ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಬಿಗ್ ಬಾಸ್ಗೆ ಸಂಬಂಧಿಸಿದ ತಾಜಾ ಮಾಹಿತಿಗೆ www.tv9kannada.com ಲಿಂಕ್ ಕ್ಲಿಕ್ ಮಾಡಿ.
1) ಕೆಂಪುಕೋಟೆ ಹಿಂಸಾಚಾರಕ್ಕೆ ಕೇಂದ್ರದ ಷಡ್ಯಂತ್ರವೂ ಕಾರಣ: ಅರವಿಂದ ಕೇಜ್ರಿವಾಲ್
ರೈತ ಪ್ರತಿಭಟನೆಕಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ನಮ್ಮ ರೈತರು ದೇಶದ್ರೋಹಿಗಳಲ್ಲ ಎಂದು ಉತ್ತರ ಪ್ರದೇಶದ ಕಿಸಾನ್ ಮಹಾಪಂಚಾಯತ್ನಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
Link: ರೈತರು ದೇಶದ್ರೋಹಿಗಳಲ್ಲ: ಅರವಿಂದ ಕೇಜ್ರಿವಾಲ್
2) ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದು ಕಷ್ಟವೇ: ರಾಹುಲ್ ಗಾಂಧಿ ಪ್ರಶ್ನೆ
ಬ್ರಿಟಿಷರನ್ನೇ ಓಡಿಸಿದ ನಮಗೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದು ಕಷ್ಟವೇ ಎಂದು ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
Link: ಬ್ರಿಟಿಷರನ್ನೇ ಓಡಿಸಿದವರು ನಾವು: ರಾಹುಲ್ ಗಾಂಧಿ ಪ್ರಶ್ನೆ
3) ಮೋದಿಯನ್ನು ಹೊಗಳಿದ ಕಾಂಗ್ರೆಸ್ನ ಹಿರಿಯ ನಾಯಕ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ‘ತಮ್ಮ ಬದುಕು ಸಾಗಿ ಬಂದ ಹಾದಿಯನ್ನು ಮರೆಯದ ಪ್ರಾಮಾಣಿಕ ನಾಯಕ’ ಎಂದು ಭಾನುವಾರ (ಫೆ.28) ಹೊಗಳಿದ್ದಾರೆ.
Link: ‘ಪ್ರಾಮಾಣಿಕತೆಗೆ ಮೋದಿಯೇ ಮಾದರಿ’ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್
4) ಲಸಿಕೆ ನೀಡುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಮಾರ್ಚ್ 1ರಿಂದ ಎರಡನೇ ಹಂತದ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ. ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ, ಇತರ ರೋಗಗಳಿಂದ ಬಳಲುತ್ತಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Link: ಕರ್ನಾಟಕದ ಈ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಲಭ್ಯ
5) ಒಂದೇ ವಾರದಲ್ಲಿ ಕರಗಿತು ಭಾರೀ ಮೊತ್ತದ ಹಣ
ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 9 ಕಂಪೆನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 2,19,920.71 ಕೋಟಿ ರೂಪಾಯಿ (₹ 2.19 ಲಕ್ಷ ಕೋಟಿ) ಕಳೆದುಕೊಂಡಿವೆ. ಇದು ಒಂದೇ ವಾರದಲ್ಲಿ ಇಳಿಕೆ ಆಗಿರುವ ಮೊತ್ತ.
Link: ಒಂದೇ ವಾರದಲ್ಲಿ ಟಾಪ್ 9 ಕಂಪೆನಿಗಳ ಮೌಲ್ಯ 2.19 ಲಕ್ಷ ಕೋಟಿ ರೂ. ಇಳಿಕೆ
6) ತೈಲ ಬೆಲೆ ಇಳಿಯುತ್ತದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ತೈಲ ಬೆಲೆಯಿಂದ ಆತಂಕಕ್ಕೀಡಾಗಿರುವ ಜನರಿಗೆ ಸದ್ಯದಲ್ಲೇ ಬೆಲೆ ಇಳಿಕೆಯ ಸಮಾಧಾನ ದೊರೆಯಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ.
Link: ಚಳಿಗಾಲದ ನಂತರ ತೈಲ ದರ ಇಳಿಕೆ
7) ಕೆಲವೇ ದಿನಗಳಲ್ಲಿ ‘ಕ್ಯಾಚ್ ದಿ ರೇನ್’ ಅಭಿಯಾನ
ಜಲ ಸಂರಕ್ಷಣೆಯ ಕುರಿತು ನಮ್ಮ ಜವಾಬ್ದಾರಿಗಳನ್ನು ಅರಿಯಬೇಕಿದ್ದು, ಕೆಲವೇ ದಿನಗಳಲ್ಲಿ ಜಲಶಕ್ತಿ ಮಂತ್ರಾಲಯ ‘ಕ್ಯಾಚ್ ದಿ ರೇನ್’ (Catch the Rain) ಅಭಿಯಾನ ಆರಂಭಿಸಲಿದೆ.
Link: ಮಳೆ ಬಂದಾಗ ನೀರು ಹಿಡ್ಕೊಳಿ
8) ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು
ಈ ಬಗ್ಗೆ ಅಮಿತಾಭ್ ಅವರೇ ತಮ್ಮ ಬ್ಲಾಗ್ನಲ್ಲಿ ಮಾಹಿತಿ ನೀಡಿದ್ದಾರೆ. ‘ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ, ಸರ್ಜರಿ.. ಈಗೇನೂ ಬರೆಯಲು ಸಾಧ್ಯವಾಗುತ್ತಿಲ್ಲ’ ಎಂದು ಒಂದೇ ಸಾಲಿನಲ್ಲಿ ತಮ್ಮ ಸ್ಥಿತಿ ಹೇಳಿಕೊಂಡಿದ್ದಾರೆ.
Link: ಅಮಿತಾಭ್ ಅಭಿಮಾನಿಗಳಲ್ಲಿ ಆತಂಕ
9) ಶವದ ಮಿದುಳಿಗೆ ಜೀವ
ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದಿಂದ ಮಹತ್ವದ ಸಾಧನೆಯೊಂದು ನಡೆದಿದೆ. ಮೃತ ವ್ಯಕ್ತಿಯ ಮಿದುಳಿಗೆ ಜೀವ ತುಂಬಿ ಸಂಶೋಧನೆ ಹಾಗೂ ತರಬೇತಿ ನಡೆಸುವುದರ ಮೂಲಕ ಗಮನ ಸೆಳೆದಿದ್ದಾರೆ.
Link: ಬಾಗಲಕೋಟೆ ಮೆಡಿಕಲ್ ಕಾಲೇಜಿನಿಂದ ಮಹತ್ವದ ಸಾಧನೆ
Published On - 6:06 pm, Sun, 28 February 21