ಮಧ್ಯಪ್ರದೇಶ: ಕೊವಿಡ್ ಪ್ರಕರಣಗಳ ಉಲ್ಬಣ ನಡುವೆಯೇ ಕೋತಿಯ ಅಂತ್ಯಕ್ರಿಯೆಯಲ್ಲಿ 1,500 ಮಂದಿ ಭಾಗಿ
ಅಂತಿಮ ಸಂಸ್ಕಾರದ ನಂತರ ಗ್ರಾಮಸ್ಥರು ಹಣ ಸಂಗ್ರಹಿಸಿ 1500ಕ್ಕೂ ಹೆಚ್ಚು ಜನರಿಗೆ ಔತಣಕೂಟ ಏರ್ಪಡಿಸಿದ್ದರು. ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಲಾಯಿತು, ಗ್ರಾಮಸ್ಥರನ್ನು ಭೋಜನಕ್ಕೆ ಆಹ್ವಾನಿಸಲಾಯಿತು.
ಭೋಪಾಲ್: ಮಧ್ಯಪ್ರದೇಶದ (Madhya Pradesh) ಹಳ್ಳಿಯೊಂದರಲ್ಲಿ ಕೋತಿಯೊಂದರ ಅಂತ್ಯಕ್ರಿಯೆಗೆ (funeral of a monkey )ಸುಮಾರು 1,500 ಜನ ಜಮಾಯಿಸಿದ ನಂತರ ಕೊವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಡಿಸೆಂಬರ್ 29 ರಂದು ರಾಜ್‌ಗಢ್ ಜಿಲ್ಲೆಯ ದಲುಪುರ ಗ್ರಾಮದ ನಿವಾಸಿಗಳು ಕೋತಿಗೆ ಅಂತಿಮ ವಿಧಿಗಳನ್ನು ಮಾಡಿದ್ದರು. ಶವಸಂಸ್ಕಾರದ ಸ್ಥಳಕ್ಕೆ ಕೋತಿಯ ಶವವನ್ನು ಕೊಂಡೊಯ್ಯುವಾಗ ಸ್ತೋತ್ರಗಳನ್ನು ಪಠಿಸುತ್ತಾ ಅಂತ್ಯಕ್ರಿಯೆಯ ಮೆರವಣಿಗೆಯನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಹರಿ ಸಿಂಗ್ ಎಂಬ ಯುವಕ ಕೂಡ ಹಿಂದೂ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡಿದ್ದಾನೆ. ಕೋತಿ ಸಾಕುಪ್ರಾಣಿಯಾಗಿರಲಿಲ್ಲ, ಆದರೆ ಆಗಾಗ್ಗೆ ಹಳ್ಳಿಗೆ ಬರುತ್ತಿತ್ತು. ದೇಶದ ಹಲವಾರು ಭಾಗಗಳಲ್ಲಿ, ಮಂಗಗಳನ್ನು ಭಗವಾನ್ ಹನುಮಾನ್ ಜೊತೆಗಿನ ಒಡನಾಟಕ್ಕಾಗಿ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಅಂತಿಮ ಸಂಸ್ಕಾರದ ನಂತರ ಗ್ರಾಮಸ್ಥರು ಹಣ ಸಂಗ್ರಹಿಸಿ 1500ಕ್ಕೂ ಹೆಚ್ಚು ಜನರಿಗೆ ಔತಣಕೂಟ ಏರ್ಪಡಿಸಿದ್ದರು. ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಲಾಯಿತು, ಗ್ರಾಮಸ್ಥರನ್ನು ಭೋಜನಕ್ಕೆ ಆಹ್ವಾನಿಸಲಾಯಿತು. ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರದಿಂದಾಗಿ ಕೊವಿಡ್ ಪ್ರಕರಣಗಳು ಉಲ್ಬಣಗೊಂಡಿದ್ದು ಇದನ್ನು ನಿಯಂತ್ರಿಸಲು CrPC ಯ ಸೆಕ್ಷನ್ 144 ರ ಅಡಿಯಲ್ಲಿ ದೊಡ್ಡ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಸಮಯದಲ್ಲಿಯೇ ಕೋತಿಯ ಅಂತ್ಯ ಸಂಸ್ಕಾರ ನಡೆದಿದೆ.
कुछ लोगों ने मुंडन करवाया, चंदा करके हज़ारों लोग के लिये भोज का आयोजन किया अब धारा 144 के उल्लंघन में गांववालों पर मामला दर्ज हो गया है pic.twitter.com/yPq0lSkV2N
— Anurag Dwary (@Anurag_Dwary) January 11, 2022
ಕೊವಿಡ್ ಪ್ರೋಟೋಕಾಲ್‌ಗಳ ಉಲ್ಲಂಘನೆಗಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಇಬ್ಬರನ್ನು ಬಂಧಿಸಿದ್ದಾರೆ. ಇತರ ಅನೇಕ ಗ್ರಾಮಸ್ಥರು ಕ್ರಮಕ್ಕೆ ಹೆದರಿ ತಲೆಮರೆಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ನಿನ್ನೆ 2,317 ಹೊಸ ಕೊವಿಡ್ ಪ್ರಕರಣಗಳು ಮತ್ತು ಸೋಂಕಿನಿಂದ ಒಂದು ಸಾವು ವರದಿಯಾಗಿದೆ. ಪ್ರಕರಣಗಳ ಸಂಖ್ಯೆ ಹಿಂದಿನ ದಿನ 2,039 ರ ಸಂಖ್ಯೆಗಿಂತ ಸುಮಾರು 300 ಹೆಚ್ಚಾಗಿದೆ. ಇಂದೋರ್, ಭೋಪಾಲ್, ಗ್ವಾಲಿಯರ್, ಜಬಲ್ಪುರ್ ಮತ್ತು ಸಾಗರ್ ಜಿಲ್ಲೆಗಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8,599 ಆಗಿದೆ.
ಇದನ್ನೂ ಓದಿ: Lata Mangeshkar: ಕೊವಿಡ್ನಿಂದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ