ಬಿಹಾರ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿರುವಂತಹ ಘಟನೆ ಭಾನುವಾರ ಬಿಹಾರ (Bihar) ದ ಭಾಗಲ್ಪುರದಲ್ಲಿ ನಡೆದಿದೆ. ಗಂಗಾನದಿಗೆ ಅಡ್ಡಲಾಗಿ ಆಗುವನಿ-ಸುಲ್ತಂಗಂಜ್ ನಡುವೆ ನಿರ್ಮಾಣವಾಗುತ್ತಿದ್ದ ಸೂಪರ್ ಸ್ಟ್ರಕ್ಚರ್ ಸೇತುವೆ 2ನೇ ಸಲ ಕುಸಿದಿದೆ. ಸೇತುವೆಯ 500 ಮೀಟರ್ ಭಾಗವು ಇದ್ದಕ್ಕಿದ್ದಂತೆ ನದಿಗೆ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇತ್ತೀಚೆಗೆ ಚಂಡಮಾರುತದಿಂದಾಗಿ ಏಪ್ರಿಲ್ನಲ್ಲಿ ಸೇತುವೆಗೆ ಸ್ವಲ್ಪ ಹಾನಿಯಾಗಿತ್ತು. ಎರಡು ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು ಎನ್ನಲಾಗಿದೆ.
ಸಿಎಂ ನಿತೀಶ್ ಕುಮಾರ್ ಅವರು 23 ಫೆಬ್ರವರಿ 2014 ರಂದು ಸೇತುವೆಯ ಶಂಕುಸ್ಥಾಪನೆ ಮಾಡಿದ್ದರು. ಬಿಹಾರ ಸರ್ಕಾರದ ಈ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆ ಯೋಜನೆ ಎಂದು ಪರಿಗಣಿಸಲಾಗಿತ್ತು. ಈ ಯೋಜನೆಯ ವೆಚ್ಚದ ಆರಂಭಿಕ ಮೌಲ್ಯಮಾಪನ 1710.77 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈ ಸೇತುವೆಯ ನಿರ್ಮಾಣದಿಂದ ಉತ್ತರ ಮತ್ತು ದಕ್ಷಿಣ ಬಿಹಾರ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಲಿದೆ.
ಇದನ್ನೂ ಓದಿ: ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಫೋಟೋ ಶೇರ್: ತುಮಕೂರಿನ ಮಹಿಳೆ ಮಾಹಿತಿ ಸಂಗ್ರಹಿಸಿದ ಒಡಿಶಾ ಪೊಲೀಸರು
Bihar: Under Construction bridge collapses in Bhagalpur
Read @ANI Story | https://t.co/ebKooSOvF9#Biharbridgecollapses #Bhagalpur pic.twitter.com/FGiCdkGxTj
— ANI Digital (@ani_digital) June 4, 2023
ಈ ಸೇತುವೆ ಉದ್ದ ಸುಮಾರು 3.160 ಕಿ.ಮೀ. ರಸ್ತೆಯ ಒಟ್ಟು ಉದ್ದ ಸುಮಾರು 25 ಕಿ.ಮೀ ಆಗಿದ್ದು, ಮಾರ್ಚ್ 2020 ರೊಳಗೆ ಸಂಚಾರ ಆರಂಭಿಸುವುದಾಗಿ ಇಲಾಖೆ ಸೂಚನೆ ನೀಡಿತ್ತು. ಈ ಸೇತುವೆ NH 31 ಮತ್ತು NH 80 ಸಂಪರ್ಕಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿ 31, ಪಸ್ರಾಹಾ ಮತ್ತು ಮುಂಗೇರ್ ಭಾಗಲ್ಪುರ್ ರಾಷ್ಟ್ರೀಯ ಹೆದ್ದಾರಿ 80 ರಲ್ಲಿರುವ ಸುಲ್ತಂಗಂಜ್ ಬಳಿ ನಾಲ್ಕು-ಪಥದ ರಸ್ತೆಗೆ ಈ ಸೇತುವೆಯನ್ನು ಸಂಪರ್ಕಿಸಲಾಗುತ್ತಿದೆ.
ಘಟನೆ ಕುರಿತಾಗಿ ಎಎನ್ಐ ಜೊತೆ ಎಲ್ಒಪಿ ವಿಜಯ್ ಕುಮಾರ್ ಸಿನ್ಹಾ ಮಾತನಾಡಿದ್ದು, ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 pm, Sun, 4 June 23