Chhota Rajan: ಬಂಧಿತ ಪಾತಕಿ ಛೋಟಾ ರಾಜನ್ ಕೊರೊನಾ ಸೋಂಕಿನಿಂದ ಸಾವು: ಸುಳ್ಳುಸುದ್ದಿ ಎಂದ ಏಮ್ಸ್
Underworld Don Chhota Rajan Death Hoax: ದೆಹಲಿಯ ತಿಹಾರ್ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸುತ್ತಿದ್ದ ಅವರನ್ನು, ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೆಹಲಿ: ಒಂದು ಕಾಲದಲ್ಲಿ ದಾವುದ್ ಇಬ್ರಾಹಿಂ ಸಹಚರನಾಗಿದ್ದ ಭೂಗತ ಪಾತಕಿ ಛೋಟಾ ರಾಜನ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಇಂದು (ಮೇ 7) ಮೃತಪಟ್ಟಿದ್ದಾನೆ ಎಂದು ವರದಿಯಾಗಿತ್ತು. ಆದರೆ ಅದು ಸುಳ್ಳುಸುದ್ದಿ ಎಂದು ಏಮ್ಸ್ ತಿಳಿಸಿದೆ. 2015ರಲ್ಲಿ ಛೋಟಾ ರಾಜನ್ನನ್ನು ಬಂಧಿಸಲಾಗಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸುತ್ತಿದ್ದ ರಾಜನ್ನನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಿಹಾರ್ ಜೈಲಿನ 20,500 ಕೈದಿಗಳ ಪೈಕಿ ಕನಿಷ್ಠ 170 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಅಲ್ಲದೇ ಸುಮಾರು ತಿಹಾರ್ ಜೈಲಿನ ಸುಮಾರು 70 ಅಧಿಕಾರಿಗಳಿಗೂ ಸೋಂಕು ತಗುಲಿದೆ.
ಮಾಜಿ ಭೂಗತ ದೊರೆ ಛೋಟಾ ರಾಜನ್ ವಿರುದ್ಧ 68 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 35 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಛೋಟಾ ರಾಜನ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಒಂದು ಕಾಲದಲ್ಲಿ ಅಂದರೆ ಭೂಗತ ಲೋಕವನ್ನು ಪ್ರವೇಶಿಸುವ ಮುನ್ನ, ರಾಜೇಂದ್ರ ನಿಕಲಾಜೆ ಎಂಬ ಹೆಸರು ಹೊಂದಿದ್ದ ಛೋಟಾ ರಾಜನ್ ನಂತರ ಭೂಗತ ಪಾತಕಿ, ಡಿ ಗ್ಯಾಂಗ್ನ ದಾವೂದ್ ಇಬ್ರಾಹಿಂನ ಸಹಚರನಾಗಿ ಗುರುತಿಸಲ್ಪಟ್ಟಿದ್ದ. ಆದರೆ ಮುಂದೆ ಭೂಗತ ಲೋಕದಲ್ಲಿ ಸ್ವಯಂ ಶಕ್ತಿಯಾಗಿ ಬೆಳೆದ ಆತ ದಾವೂದ್ ಇಬ್ರಾಹಿಂಗೆ ಭರ್ಜರಿ ಪೈಪೋಟಿ ನೀಡಲಾರಂಭಿಸಿದ. ಭೂಗತ ಲೋಕವನ್ನು ನಿಯಂತ್ರಿಸುವ ವಿಷಯದಲ್ಲಿ ದಾವೂದ್ ಇಬ್ರಾಂಹಿಂಗೂ ಛೋಟಾ ರಾಜನ್ಗೂ ಶೀತಲ ಸಮರ ನಡೆದಿತ್ತು.
ಕರ್ನಾಟಕದ ಮಂಡ್ಯದ ನಕಲಿ ವಿಳಾಸ ನೀಡಿ ಪಾಸ್ಪೋರ್ಟ್ ಪಡೆದಿದ್ದ ಛೋಟಾ ರಾಜನ್ ವಿರುದ್ಧ ಮಂಡ್ಯ ತಹಶೀಲ್ದಾರ್ ದೆಹಲಿ ಕೋರ್ಟ್ನಲ್ಲಿ ಸಾಕ್ಷ್ಯ ಹೇಳಿದ್ದರು . ಪಾಸ್ಪೋರ್ಟ್ ಪ್ರಕರಣದಲ್ಲಿ ಛೋಟಾ ರಾಜನ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು.
ತಿಹಾರ್ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ ಛೋಟಾ ರಾಜನ್ನನ್ನು ಇತರ ಕೈದಿಗಳ ಜತೆ ಬೆರೆಯುವುದರಿಂದ ದೂರವಿಡಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಛೋಟಾ ರಾಜನ್ಗೆ ಏಕಾಂತ ಕಾರಾಗೃಹವಾಸ ವಿಧಿಸಲಾಗಿತ್ತು.
2015ರಲ್ಲಿ ಛೋಟಾ ರಾಜನ್ನ್ನು ಇಂಡೋನೇಷ್ಯಾದಿಂದ ಬಂಧಿಸಿ ಭಾರತಕ್ಕೆ ತರಲಾಗಿತ್ತು. ತದನಂತರ ತಿಹಾರ್ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು.
ಇದನ್ನೂ ಓದಿ: Karnataka Lockdown: ಕರ್ನಾಟಕ ಸಂಪೂರ್ಣ ಲಾಕ್ಡೌನ್? ಅಧಿಕೃತ ಘೋಷಣೆಯೊಂದೇ ಬಾಕಿ
ದಾವೂದ್ ಇಬ್ರಾಹಿಂಗೆ ವಯಸ್ಸಾಯ್ತು; ಪಾತಕಲೋಕ ಆಳುವ ‘ಡಿ’ ಕಂಪನಿಗೆ ಉತ್ತರಾಧಿಕಾರಿ ಬೇಕಂತೆ.. (Underworld don and gangster Chhota Rajan died due to Covid-19 at AIIMS New Delhi on Friday)
Published On - 4:05 pm, Fri, 7 May 21