Breaking News ರೈಲ್ವೆ ಉದ್ಯೋಗಿಗಳಿಗೆ 78 ದಿನದ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

ರೈಲ್ವೆ ನೌಕರರು ಪ್ರಯಾಣಿಕ ಮತ್ತು ಸರಕು ಸೇವೆಗಳ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

Breaking News ರೈಲ್ವೆ ಉದ್ಯೋಗಿಗಳಿಗೆ 78 ದಿನದ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ
ಭಾರತೀಯ ರೈಲ್ವೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 12, 2022 | 4:50 PM

2021-22 ಹಣಕಾಸು ವರ್ಷಕ್ಕೆ ರೈಲ್ವೆ ಉದ್ಯೋಗಿಗಳಿಗೆ (railway employees) 78 ದಿನಗಳಿಗೆ ಸಮಾನವಾದ ಉತ್ಪಾದಕತೆ ಆಧಾರಿತ ಬೋನಸ್ (PLB) ಪಾವತಿಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಪಿಎಲ್‌ಬಿ ಮೊತ್ತವನ್ನು ಸುಮಾರು 11.27 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ ಪಾವತಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್(Anurag Thakur) ಬುಧವಾರ ಹೇಳಿದ್ದಾರೆ. ರೈಲ್ವೆ ನೌಕರರು ಪ್ರಯಾಣಿಕ ಮತ್ತು ಸರಕು ಸೇವೆಗಳ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ, ಇದು ಆರ್ಥಿಕತೆಗೆ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿಯೂ ಸಹ ರೈಲ್ವೇ ನೌಕರರು ಆಹಾರ, ರಸಗೊಬ್ಬರ, ಕಲ್ಲಿದ್ದಲು ಮತ್ತು ಇತರ ವಸ್ತುಗಳಂತಹ ಅಗತ್ಯ ವಸ್ತುಗಳ ನಿರಂತರ ಚಲನೆಯನ್ನು ಖಾತ್ರಿಪಡಿಸಿಕೊಂಡರು. ಕಾರ್ಯಾಚರಣೆಯ ಪ್ರದೇಶದಲ್ಲಿ ಅಂತಹ ಸರಕುಗಳ ಕೊರತೆಯಿಲ್ಲ ಎಂದು ರೈಲ್ವೆ ಖಚಿತಪಡಿಸಿದೆ ಎಂದು ರೈಲ್ವೆ ಸಚಿವಾಲಯ ಈ ಹಿಂದಿನ ಹೇಳಿಕೆಯಲ್ಲಿ ತಿಳಿಸಿದೆ.

ರೈಲ್ವೇ ಕಳೆದ ಮೂರು ವರ್ಷಗಳಲ್ಲಿ, ಸರಕು ಸಾಗಣೆಯಲ್ಲಿ ಮಾರುಕಟ್ಟೆ ಪಾಲನ್ನು ಮರಳಿ ಪಡೆಯಲು ಮತ್ತು ಸೂಕ್ತ ನೀತಿ ಉಪಕ್ರಮಗಳ ಮೂಲಕ ಕೈಗೆಟಕುವ ಪ್ರಯಾಣಿಕರ ದರ ಕ್ರಮ ಹೆಚ್ಚಿಸಲು ಕ್ರಮಗಳ ಸರಣಿಯನ್ನು ಕೈಗೊಂಡಿದೆ ಎಂದು ಹೇಳಿದೆ.

ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ನಿರ್ಧಾರವನ್ನು ಪ್ರಕಟಿಸಿದರು.

“ರೈಲ್ವೆಯ 11.27 ಲಕ್ಷ ಉದ್ಯೋಗಿಗಳಿಗೆ 1,832 ಕೋಟಿ ರೂ.ಗಳ ಉತ್ಪಾದಕತೆ ಸಂಬಂಧಿತ ಬೋನಸ್ ನೀಡಲಾಗುವುದು. ಇದು 78 ದಿನಗಳ ಬೋನಸ್ ಆಗಿರುತ್ತದೆ ಮತ್ತು ರೂ 17,951 ಅದರ ಗರಿಷ್ಠ ಮಿತಿಯಾಗಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. 2002ರ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ಬಹು-ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2022ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಠಾಕೂರ್ ತಿಳಿಸಿದರು. ಇದು 97ನೇ ಸಾಂವಿಧಾನಿಕ ತಿದ್ದುಪಡಿಯ ನಿಬಂಧನೆಗಳನ್ನು ಒಳಗೊಂಡಿರುತ್ತದೆ.

ಅನುರಾಗ್ ಠಾಕೂರ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

  1. 2022-23 ರಿಂದ 2025-26 ರವರೆಗೆ 15 ನೇ ಹಣಕಾಸು ಆಯೋಗದ ಉಳಿದ ನಾಲ್ಕು ವರ್ಷಗಳವರೆಗೆ ಈಶಾನ್ಯ ಪ್ರದೇಶಕ್ಕಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ (PM-DevINE) ಹೊಸ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
  2. ಬಹು-ರಾಜ್ಯ ಸಹಕಾರ ಸಂಘಗಳ ಕಾಯಿದೆ, 2002 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುವ ಬಹು-ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2022 ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದು 97 ನೇ ಸಾಂವಿಧಾನಿಕ ತಿದ್ದುಪಡಿಯ ನಿಬಂಧನೆಗಳನ್ನು ಒಳಗೊಂಡಿರುತ್ತದೆ.
  3. ರೈಲ್ವೆಯ 11.27 ಲಕ್ಷ ಉದ್ಯೋಗಿಗಳಿಗೆ ಉತ್ಪಾದಕತೆ ಸಂಬಂಧಿತ ಬೋನಸ್ 1,832 ಕೋಟಿ ರೂ. ಇದು 78 ದಿನಗಳ ಬೋನಸ್ ಆಗಿರುತ್ತದೆ. ರೂ 17,951 ಇದರ ಗರಿಷ್ಠ ಮಿತಿಯಾಗಿದೆ.
  4. ಪ್ರಪಂಚದಾದ್ಯಂತ LPG ಬೆಲೆಗಳು ಹೆಚ್ಚಾಗುತ್ತಿವೆ. ಬೆಲೆ ಏರಿಕೆಯ ಹೊರೆ ಸಾಮಾನ್ಯ ಜನರ ಮೇಲೆ ಬೀಳದಂತೆ ಸಾರ್ವಜನಿಕ ವಲಯದ ಉದ್ಯಮಗಳ ತೈಲ ಮಾರುಕಟ್ಟೆ ಕಂಪನಿಗಳಿಗೆ ಒಂದು ಬಾರಿ 22,000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

Published On - 4:05 pm, Wed, 12 October 22