57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೃಹಮಂತ್ರಿ ಅಮಿತ್​ ಶಾ; ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಶುಭಾಶಯ

| Updated By: Lakshmi Hegde

Updated on: Oct 22, 2021 | 3:33 PM

ಅಮಿತ್​ ಶಾ 1964ರಲ್ಲಿ ಗುಜರಾತ್​​ನಲ್ಲಿ ಜನಿಸಿದ್ದಾರೆ. ಬಹಳ ಮೊದಲಿನಿಂದಲೂ ಅಮಿತ್​ ಶಾ ಮತ್ತು ನರೇಂದ್ರ ಮೋದಿ ಆಪ್ತರು. ಈಗಲೂ ಸಹ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ತಿರದಿಂದ ಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅಮಿತ್​ ಶಾ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ.

57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೃಹಮಂತ್ರಿ ಅಮಿತ್​ ಶಾ; ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಶುಭಾಶಯ
ಅಮಿತ್ ಶಾ
Follow us on

ಬಿಜೆಪಿಯ ಚಾಣಕ್ಯನೆಂದೇ ಗುರುತಿಸಿಕೊಂಡಿರುವ ಗೃಹಮಂತ್ರಿ ಅಮಿತ್​ ಶಾ (Amit Shah) ಇಂದು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅಮಿತ್ ಶಾ ರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi), ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಸಚಿವ ಹರ್ದೀಪ್​ ಸಿಂಗ್​ ಪುರಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ಸಿಎಂ ಹಿಮಂತ ಬಿಸ್ವಾ ಶರ್ಮಾ ಸೇರಿ ಹಲವು ರಾಜಕೀಯ ಗಣ್ಯರು ಶುಭಕೋರಿದ್ದಾರೆ.  ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಅಮಿತ್​ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಅಮಿತ್​ ಭಾಯ್​ ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರವನ್ನು ಬಲಪಡಿಸಲು ಅವರು ಬಹುಮುಖ್ಯ ಕೊಡುಗೆ ನೀಡಿದ್ದಾರೆ. ಇದೇ ಉತ್ಸಾಹದಲ್ಲಿ ಅವರ ದೇಶಸೇವೆ ಮುಂದುವರಿಯಲಿ. ಭಗವಂತ ಅವರಿಗೆ ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.  

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಟ್ವೀಟ್​ ಮಾಡಿ, ನನ್ನ ಹಿರಿಯ ಸಹೋದ್ಯೋಗಿ ಮತ್ತು ಕೇಂದ್ರ ಸಚಿವರಾದ ಅಮಿತ್​ ಶಾರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಾರತ ದೇಶದ ಭದ್ರತೆಗಾಗಿ ಅಪಾರ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.  ಕೇಂದ್ರ ಸಚಿವ ಹರ್ದೀಪ್​ ಸಿಂಗ್ ಪುರಿ ಟ್ವೀಟ್​ ಮಾಡಿ, ಜನ್ಮದಿನ ಆಚರಣೆ ಖುಷಿಯಲ್ಲಿರುವ ಅಮಿತ್ ಶಾರಿಗೆ ಅಭಿನಂದನೆಗಳು. ಅವರೊಬ್ಬ ನುರಿತ ರಾಜಕೀಯ ತಂತ್ರಜ್ಞ, ಸಮರ್ಪಿತ ರಾಷ್ಟ್ರೀಯವಾದಿ, ದೃಢಮನಸಿನ, ಜನಪ್ರಿಯ ನಾಯಕ  ಎಂದು ಹೊಗಳಿದ್ದಾರೆ.

ಅಮಿತ್​ ಶಾ 1964ರಲ್ಲಿ ಗುಜರಾತ್​​ನಲ್ಲಿ ಜನಿಸಿದ್ದಾರೆ. ಬಹಳ ಮೊದಲಿನಿಂದಲೂ ಅಮಿತ್​ ಶಾ ಮತ್ತು ನರೇಂದ್ರ ಮೋದಿ ಆಪ್ತರು. ಈಗಲೂ ಸಹ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ತಿರದಿಂದ ಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅಮಿತ್​ ಶಾ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಿದ ಸಮಯದಲ್ಲೇ ಅಮಿತ್​ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಹಾಗೇ, ಹಿಂದೆ ಗುಜರಾತ್​ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕ್ಯಾಬಿನೆಟ್​​ನಲ್ಲಿ ಕೂಡ ಸಚಿವರಾಗಿದ್ದರು. 2019ರಲ್ಲಿ ಎರಡನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದಾಗ ಅಮಿತ್​ ಶಾ ಗೃಹ ಮಂತ್ರಿಯಾಗಿ ನೇಮಕವಾಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನವರು ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬಸವರಾಜ ಬೊಮ್ಮಾಯಿ

“ಮಹತ್ವದ ಸಾಧನೆ”: 100 ಕೋಟಿ ಲಸಿಕೆ ಸಾಧನೆಗೆ ಸರ್ಕಾರವನ್ನು ಶ್ಲಾಘಿಸಿದ ಭಾರತ್ ಬಯೋಟೆಕ್