ಮದರಸಾಗಳು ರಾಷ್ಟ್ರೀಯ ಭದ್ರತೆಗೊಂದು ಬೆದರಿಕೆ, ಭಯೋತ್ಪಾದನೆಯನ್ನು ಪೋಷಿಸುತ್ತಿವೆ: ಬಂಡಿ ಸಂಜಯ್ ಕುಮಾರ್

|

Updated on: Sep 20, 2024 | 11:13 AM

ಮದರಸಾಗಳು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಕಾರಣ ಅವು ರಾಷ್ಟ್ರೀಯ ಭದ್ರತೆಗೊಂದು ಬೆದರಿಕೆ ಎಂದು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮದರಸಾಗಳು ರಾಷ್ಟ್ರೀಯ ಭದ್ರತೆಗೊಂದು ಬೆದರಿಕೆ, ಭಯೋತ್ಪಾದನೆಯನ್ನು ಪೋಷಿಸುತ್ತಿವೆ: ಬಂಡಿ ಸಂಜಯ್ ಕುಮಾರ್
ಬಂಡಿ ಸಂಜಯ್ ಕುಮಾರ್
Image Credit source: Timesnow
Follow us on

‘‘ಮದರಸಾಗಳು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಕಾರಣ ಅವು ರಾಷ್ಟ್ರೀಯ ಭದ್ರತೆಗೊಂದು ಬೆದರಿಕೆ’’ ಎಂದು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಶ್ರೀ ವಿದ್ಯಾರಣ್ಯ ಆವಾಸ ವಿದ್ಯಾಲಯಂನ ಹಾಸ್ಟೆಲ್ ಬ್ಲಾಕ್​ನ ಉದ್ಘಾಟಿಸಿ ಮಾತನಾಡಿದರು.

ಮದರಸಾಗಳು ತಮ್ಮ ವಿದ್ಯಾರ್ಥಿಗಳಿಗೆ ಎಕೆ-47 ರೈಫಲ್‌ಗಳನ್ನು ತಯಾರಿಸಲು ತರಬೇತಿ ನೀಡುತ್ತವೆ ಎಂದು ಅವರು ಹೇಳಿದ್ದಾರೆ.
ಉಗ್ರವಾದವನ್ನು ಉತ್ತೇಜಿಸಲು ಹಣವನ್ನು ಬಳಸುತ್ತಿರುವ ಇಂತಹ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿದೆ ಎಂದು ಅವರು ಟೀಕಿಸಿದರು.

ಹೈದರಾಬಾದ್, ಸಿದ್ದಿಪೇಟ್ ಅಥವಾ ಕರೀಂ ನಗರದಂತಹ ಸ್ಥಳಗಳಲ್ಲಿ, ಕೆಲವು ಮದರಸಾಗಳು ತಮ್ಮ ವಿದ್ಯಾರ್ಥಿಗಳಿಗೆ 10 ರಿಂದ 100 ರೂಪಾಯಿಗಳವರೆಗೆ ಸಣ್ಣ ಮೊತ್ತವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಅಮೆರಿಕ, ಮುಂಬೈ ಅಥವಾ ಲಂಡನ್‌ನಲ್ಲಿ ಎಲ್ಲಿ ಬಾಂಬ್ ಸ್ಫೋಟವಾಗಲಿ, ಜನರು ಮದರಸಾ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ, ಅವರೊಂದಿಗೆ ಸಂಪರ್ಕವಿರುತ್ತದೆ.

ಮತ್ತಷ್ಟು ಓದಿ:  ಭಯೋತ್ಪಾದನೆ ಎದುರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಸಹಾಯ ಮಾಡಲು ಭಾರತ ಸಿದ್ಧ: ರಾಜನಾಥ್​​ ಸಿಂಗ್

ಆದರೂ, ಸರ್ಕಾರ ಏನು ಮಾಡುತ್ತಿದೆ? ಇದನ್ನು ಪರಿಹರಿಸುವ ಬದಲು, ಇದು ಹೊಸ ತಂತ್ರಜ್ಞಾನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಈ ಮದರಸಾಗಳಿಗೆ ಹಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷದ ನಾಯಕರೊಬ್ಬರು ಮದರಸಾಗಳಲ್ಲಿ ಓದಿ ಮೆರಿಟ್ ಗಳಿಸಿರುವ ವಿದ್ಯಾರ್ಥಿಗಳನ್ನು ಸರ್ಕಾರ ಗೌರವಿಸುವುದಿಲ್ಲ ಕೇವಲ ಸಂಸ್ಕೃತ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರ ಎಂದಿದ್ದರು.

ಪ್ರತಿಪಕ್ಷಗಳ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮೊಹ್ಸಿನ್ ಶಿಕ್ಷಣದಲ್ಲಿ ಪ್ರಗತಿಗಾಗಿ ಯಾವುದೇ ಪ್ರಶಸ್ತಿಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಂತಹ ಪ್ರಶಸ್ತಿ ನೀಡಬೇಕಾದರೆ ಸೌದಿ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಪ್ರಶಸ್ತಿ ಪಡೆಯಿರಿ ಎಂದು ಮೊಹ್ಸಿನ್ ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ