ಭಯೋತ್ಪಾದನೆ ಎದುರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಸಹಾಯ ಮಾಡಲು ಭಾರತ ಸಿದ್ಧ: ರಾಜನಾಥ್​​ ಸಿಂಗ್

ಪಾಕಿಸ್ತಾನವು ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಯನ್ನು ನಿಯಂತ್ರಿಸಬೇಕು. ಅಗತ್ಯವಿದ್ದರೆ ಭಾರತವು ಕೂಡ ಇದಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಗ್ರಹಿಸಲು ಅಸಮರ್ಥ ಎಂದು ಭಾವಿಸಿದರೆ, ಭಯೋತ್ಪಾದನೆಯನ್ನು ತಡೆಯಲು ಸಹಕರಿಸಲು ಭಾರತ ಸಿದ್ಧವಾಗಿದೆ ಎಂದು ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಯೋತ್ಪಾದನೆ ಎದುರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಸಹಾಯ ಮಾಡಲು ಭಾರತ ಸಿದ್ಧ: ರಾಜನಾಥ್​​ ಸಿಂಗ್
Follow us
|

Updated on: Apr 11, 2024 | 1:01 PM

ದೆಹಲಿ, ಏ.10: ಭಯೋತ್ಪಾದನೆಯನ್ನು ಎದುರಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಪಾಕ್​​​ಗೆ ಸಹಾಯ ಮಾಡಲು ಭಾರತ ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಹೇಳಿದ್ದಾರೆ. ಎಎನ್ಐ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಒಂದು ಸಾಧನವಾಗಿ ಬಳಸಿಕೊಂಡು ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಪ್ರಯತ್ನಿಸಿದರೆ, ಅದರ ಪರಿಣಾಮ ಎದುರಿಸಲು ಪಾಕ್​​ ಸಿದ್ಧವಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನವು ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಯನ್ನು ನಿಯಂತ್ರಿಸಬೇಕು. ಅಗತ್ಯವಿದ್ದರೆ ಭಾರತವು ಕೂಡ ಇದಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಗ್ರಹಿಸಲು ಅಸಮರ್ಥ ಎಂದು ಭಾವಿಸಿದರೆ, ಭಯೋತ್ಪಾದನೆಯನ್ನು ತಡೆಯಲು ಸಹಕರಿಸಲು ಭಾರತ ಸಿದ್ಧವಾಗಿದೆ ಎಂದು ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಗಳನ್ನು ಓಡಿಸುವ ಶಕ್ತಿ ಇದೆ: ಹರ್ಯಾಣ ಸಚಿವ

ಪಾಕ್ ಆಕ್ರಮಿತ-ಕಾಶ್ಮೀರವು ಭಾರತದ ಭಾಗವಾಗಿತ್ತು ಮುಂದೆಯೂ ಅದು ಭಾರತದ ಭಾಗವಾಗಿರುತ್ತದೆ ಎಂದರು. ಇದೇ ಸಮಯದಲ್ಲಿ ಇಂದಿರಾಗಾಂಧಿ ಕಾಲದಲ್ಲಿ ಏರಿದ ತುರ್ತುಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ತನ್ನ ತಾಯಿಯ ನಿಧನದ ಸಂದರ್ಭದಲ್ಲಿ ಅವರ ಕೊನೆಯ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗಲಿರಲಿಲ್ಲ. ಅದಕ್ಕೆ ಅವಕಾಶ ಸರ್ಕಾರ ನೀಡಿರಲಿಲ್ಲ. ಆ ಸಮಯದಲ್ಲಿ ಕಾಂಗ್ರೆಸ್​​ ಸರ್ವಾಧಿಕಾರಿಯ ರೀತಿಯಲ್ಲಿ ವರ್ತಿಸುತ್ತಿತ್ತು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ