AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಗಳನ್ನು ಓಡಿಸುವ ಶಕ್ತಿ ಇದೆ: ಹರ್ಯಾಣ ಸಚಿವ

ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಯನ್ನು ಓಡಿಸುವ ಶಕ್ತಿ ಇದೆ ಎಂದು ಹರ್ಯಾಣ ಸಚಿವ ಕನ್ವರ್ ಪಾಲ್(Kanwar Pal) ಹೇಳಿದ್ದಾರೆ. ಬಿಜೆಪಿಯ ಕಾರ್ಯಕರ್ತರೆಲ್ಲವೂ ಕಮಲದಂತೆ, ಕೆಸರಿನಲ್ಲಿ ಬೆಳೆದರೂ ಪರಿಶುದ್ಧವಾಗಿರುತ್ತವೆ ಎಂದರು. ಜಹಾ ಭಾರತೀಯ ಜನತಾ ಪಾರ್ಟಿ ಕಾ ಝಂಡಾ ಲಗೇಗಾ ವಹಾ ಸೇ ದುಷ್ಟ್​ ಆತ್ಮಾಯೇ, ಭೂತ್​ ಪ್ರೇತ್​ ಭೀ ದೂರ್ ರಹೇಂಗೆ. ಅಂದರೆ ಬಿಜೆಪಿ ಧ್ವಜ ಎಲ್ಲೆಲ್ಲಿ ಇರುತ್ತೋ ಅಲ್ಲಿ ದುಷ್ಟಶಕ್ತಿಗಳು ದೂರವಿರುತ್ತವೆ ಎಂದಿದ್ದಾರೆ.

ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಗಳನ್ನು ಓಡಿಸುವ ಶಕ್ತಿ ಇದೆ: ಹರ್ಯಾಣ ಸಚಿವ
ಕನ್ವರ್​ ಪಾಲ್
ನಯನಾ ರಾಜೀವ್
|

Updated on: Apr 11, 2024 | 10:21 AM

Share

ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಯನ್ನು ಓಡಿಸುವ ಶಕ್ತಿ ಇದೆ ಎಂದು ಹರ್ಯಾಣ ಸಚಿವ ಕನ್ವರ್ ಪಾಲ್(Kanwar Pal) ಹೇಳಿದ್ದಾರೆ. ಬಿಜೆಪಿಯ ಕಾರ್ಯಕರ್ತರೆಲ್ಲವೂ ಕಮಲದಂತೆ, ಕೆಸರಿನಲ್ಲಿ ಬೆಳೆದರೂ ಪರಿಶುದ್ಧವಾಗಿರುತ್ತವೆ ಎಂದರು. ಜಹಾ ಭಾರತೀಯ ಜನತಾ ಪಾರ್ಟಿ ಕಾ ಝಂಡಾ ಲಗೇಗಾ ವಹಾ ಸೇ ದುಷ್ಟ್​ ಆತ್ಮಾಯೇ, ಭೂತ್​ ಪ್ರೇತ್​ ಭೀ ದೂರ್ ರಹೇಂಗೆ. ಅಂದರೆ ಬಿಜೆಪಿ ಧ್ವಜ ಎಲ್ಲೆಲ್ಲಿ ಇರುತ್ತೋ ಅಲ್ಲಿ ದುಷ್ಟಶಕ್ತಿಗಳು ದೂರವಿರುತ್ತವೆ ಎಂದಿದ್ದಾರೆ.

ಯಮುನಾನಗರ ಜಿಲ್ಲೆಯ ಜಗದ್ರಿಯಿಂದ ಶಾಸಕರಾಗಿರುವ ಪಾಲ್ ಅವರು ಹರ್ಯಾಣ ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವರಾಗಿದ್ದಾರೆ.

ಬಿಜೆಪಿಯ ಮೊದಲ ಅಧಿಕಾರಾವಧಿಯಲ್ಲಿ, 2014 ರಿಂದ 2019 ರವರೆಗೆ ಅವರು ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದರು. 2019 ರಲ್ಲಿ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು.

ಮತ್ತಷ್ಟು ಓದಿ: ಕಳೆದ ವರ್ಷ ಬಿಜೆಪಿ ಜತೆ ಕೈಜೋಡಿಸಲು ಶರದ್ ಪವಾರ್ ಸಿದ್ಧರಾಗಿದ್ದರು: ಪ್ರಫುಲ್ ಪಟೇಲ್

ಮನೋಹರ್ ಲಾಲ್ ಖಟ್ಟರ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರು ಕೂಡ ರಾಜೀನಾಮೆ ನೀಡಿದರು, ಆದರೆ ಮಾರ್ಚ್ 12 ರಂದು ರಚನೆಯಾದ ನಯಾಬ್ ಸೈನಿ ಸರ್ಕಾರದಲ್ಲಿ ಪಾಲ್ ಅವರು ಸಿಎಂ ನಂತರ ಅತ್ಯಂತ ಹಿರಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್​ 19ರಿಂದ ಜೂನ್​ 1ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ, ಜೂನ್ 4ರಂದು ಫಲಿತಾಂಶ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ