ತಂತ್ರಜ್ಞಾನ ಕ್ಷೇತ್ರದ ಸುಧಾರಣೆಗೆ 6 ಹೊಸ ವೇದಿಕೆಗಳು: ಆವಿಷ್ಕಾರದಿಂದ ಸಂಪತ್ತು ಎಂದ ಕೇಂದ್ರ ಸಚಿವ
ಕ್ಯಾಪಿಟಲ್ ಗೂಡ್ಸ್ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಮೊತ್ತದ ಹೂಡಿಕೆ ಮಾಡಲಾಗುವುದು ಎಂದು ಸಚಿವರು ಘೋಷಿಸಿದರು.
ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಆವಿಷ್ಕಾರಗಳಿಗೆ ಹೊಸ ವೇಗ ನೀಡಲೆಂದು 6 ಹೊಸ ವೇದಿಕೆಗಳಿಗೆ ಕೇಂದ್ರ ಭಾರೀ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ, ವಿಜ್ಞಾನ ತಂತ್ರಜ್ಞಾನ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಆವಿಷ್ಕಾರದತ್ತ ನಾವು ಹೆಚ್ಚು ಗಮನ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಯಾವ ದೇಶವು ಆವಿಷ್ಕಾರದತ್ತ ಹೆಚ್ಚು ಗಮನ ನೀಡುತ್ತದೆಯೋ ಅದು ಪ್ರಗತಿ ಸಾಧಿಸುತ್ತದೆ. ಅತ್ಯುನ್ನತ ತಂತ್ರಜ್ಞಾನ (ಹೈ ಎಂಡ್ ಟೆಕ್ನಾಲಜಿ) ಆಧರಿತ ಕ್ಷೇತ್ರಗಳಲ್ಲಿ ಆವಿಷ್ಕಾರಗಳು ಹೆಚ್ಚೆಚ್ಚು ನಡೆಯಬೇಕು. ಆಗ ಮಾತ್ರ ನಮ್ಮ ದೇಶದ ಸಂಪತ್ತು ಹೆಚ್ಚಾಗುತ್ತದೆ. ಆವಿಷ್ಕಾರದಿಂದ ಬುದ್ಧಿವಂತಿಕೆ ಹೆಚ್ಚಾಗುತ್ತದೆಯೇ ಹೊರತು ಖಾಲಿಯಾಗುವುದಿಲ್ಲ. (Brain Gain not Brain Drain) ಎಂದು ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಈ ಆರು ವೇದಿಕೆಗಳು ಭಾರತ ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ಇಲ್ಲಿನ ಬದುಕಿನ ಸುಧಾರಣೆಗೆ ಹಲವು ನಿರ್ದಿಷ್ಟ ಪರಿಹಾರಗಳನ್ನು ಸೂಚಿಸಲಿದೆ. ಕ್ಯಾಪಿಟಲ್ ಗೂಡ್ಸ್ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಮೊತ್ತದ ಹೂಡಿಕೆ ಮಾಡಲಾಗುವುದು ಎಂದು ಸಚಿವರು ಘೋಷಿಸಿದರು.
ಉತ್ಪಾದನೆ, ಬಂಡವಾಳ ವೃದ್ಧಿಸುವ ಸರಕುಗಳು ಮತ್ತು ಸಾರಿಗೆ ಕ್ಷೇತ್ರದ ಸುಧಾರಣೆಗೆ ಮಾತೃಸ್ವರೂಪಿಯಾಗುವಂಥ ತಂತ್ರಜ್ಞಾನಗಳನ್ನು ಈ ವೇದಿಕೆಗಳು ಆವಿಷ್ಕರಿಸುತ್ತವೆ. ಪ್ರಸ್ತುತ ಸನ್ನಿವೇಶ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಈ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು. ದೇಶದ ಅಭಿವೃದ್ಧಿಗೆ ಅತ್ಯುನ್ನತ ತಂತ್ರಜ್ಞಾನವು ಅತ್ಯಗತ್ಯ. ಆವಿಷ್ಕಾರಗಳ ಮೂಲಕ ರೂಪಿಸಿದ ಉತ್ಪನ್ನಗಳು ದೇಶದ ಸಂಪತ್ತು ಹೆಚ್ಚಿಸುತ್ತದೆ ಎಂದು ಸಚಿವರು ಹೇಳಿದರು.
Union Minister Prakash Javadekar launches 6 technology innovation platforms. “Our problem is lack of innovation &, nation that innovates makes progress. Innovation in high-end technology is very important as it creates wealth and ensures ‘Brain Gain’, not ‘Brain Drain’,” he says. pic.twitter.com/9niq2lt2LU
— ANI (@ANI) July 2, 2021
(Union Minister Prakash Javadekar launches 6 technology innovation platforms)