AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ SDPI, PFI ಲಿಂಕ್ ಶಂಕೆ, ಅದಕ್ಕೆ ಕರ್ನಾಟಕ ಕಾಂಗ್ರೆಸ್ ಪ್ರೋತ್ಸಾಹ -ಕೇಂದ್ರ ಸಚಿವ ಜೋಶಿ ಗಂಭೀರ ಆರೋಪ

Pralhad Joshi: ಕಾಂಗ್ರೆಸ್ ಪಿಎಫ್ಐ ಗೆ ಪ್ರೋತ್ಸಾಹ ನೀಡುತ್ತಿದೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ SDPI, PFI ಲಿಂಕ್ ಶಂಕೆ, ಅದಕ್ಕೆ ಕರ್ನಾಟಕ ಕಾಂಗ್ರೆಸ್ ಪ್ರೋತ್ಸಾಹ -ಕೇಂದ್ರ ಸಚಿವ ಜೋಶಿ ಗಂಭೀರ ಆರೋಪ
ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ SDPI, PFI ಲಿಂಕ್ ಶಂಕೆ, ಕರ್ನಾಟಕ ಕಾಂಗ್ರೆಸ್ ನಿಂದ SDPI, PFI ಗೆ ಪ್ರೋತ್ಸಾಹ -ಕೇಂದ್ರ ಸಚಿವ ಜೋಶಿ ಗಂಭೀರ ಆರೋಪ
TV9 Web
| Edited By: |

Updated on:Jul 27, 2022 | 3:41 PM

Share

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿಂದು ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ ಜೋಶಿ, ಪ್ರಕರಣದ ಕುರಿತ ಆರಂಭಿಕ ವರದಿಗಳು ಮತ್ತು ಕೆಲವು ಮಾಧ್ಯಮ ವರದಿಗಳು SDPI ಮತ್ತು PFI ಲಿಂಕ್‌ಗಳಿರೋದನ್ನ ಸೂಚಿಸುತ್ತಿದೆ. ಕೇರಳದಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ (Karnataka Congress) ಕೂಡಾ ಇಂಥವರನ್ನ ಪ್ರೋತ್ಸಾಹಿಸುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿ.ಎಫ್.ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನೆಲ್ಲ ಹಿಂಪಡೆದರು. ಈ ರೀತಿ ಕಾಂಗ್ರೆಸ್ ಪಿಎಫ್ಐ ಗೆ ಪ್ರೋತ್ಸಾಹ ನೀಡುತ್ತಿದೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದಾರೆ.

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ : ಕೇಂದ್ರ ಸಚಿವ ಜೋಶಿ ವಿಡಿಯೋ ಹೇಳಿಕೆ

ಇದೇ ವೇಳೆ ಪ್ರವೀಣ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ದುಷ್ಕರ್ಮಿಗಳು ನಡೆಸಿದ ದಾಳಿಯಿಂದ ನಮ್ಮ ಕಾರ್ಯಕರ್ತನ ಹತ್ಯೆಯಾಗಿದೆ‌. ಈ ಕೃತ್ಯ ಎಸಗಿದವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಬೇಕು. ಎಲ್ಲರಿಗೂ ಪಾಠವಾಗುವಂತೆ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹಾಗು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವ ವಿಶ್ವಾಸವನ್ನು ಪ್ರಲ್ಹಾದ್ ಜೋಶಿ ಅವರು ವ್ಯಕ್ತಪಡಿಸಿದರು.

ಪ್ರವೀಣ್ ನೆಟ್ಟಾರು ಆತ್ಮಕ್ಕೆ ಶಾಂತಿ ಕೋರಿದ ಸಚಿವರು, ಪ್ರವೀಣ್ ಕುಟುಂಬಕ್ಕೆ ದುಃಖ ನೀಗಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Published On - 1:47 pm, Wed, 27 July 22