ಕೇಂದ್ರ ಸಚಿವೆಯ ಅಪ್ರಾಪ್ತ ಮಗಳಿಗೆ ಜಾತ್ರೆಯಲ್ಲಿ ಕಿರುಕುಳ; ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆ

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಯುವಕರು ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಅವರ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ನಡೆದ ಸಂತ ಮುಕ್ತಾಯಿ ಯಾತ್ರೆಯ ಸಂದರ್ಭದಲ್ಲಿ ತನ್ನ ಅಪ್ರಾಪ್ತ ಮಗಳು ಮತ್ತು ಇತರ ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ದೂರು ನೀಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಕೇಂದ್ರ ಸಚಿವೆಯ ಅಪ್ರಾಪ್ತ ಮಗಳಿಗೆ ಜಾತ್ರೆಯಲ್ಲಿ ಕಿರುಕುಳ; ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆ
Raksha Khadse

Updated on: Mar 02, 2025 | 4:39 PM

ಮುಂಬೈ (ಮಾರ್ಚ್ 2): ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ನಡೆದ ಸಂತ ಮುಕ್ತಾಯಿ ಯಾತ್ರೆಯ ಸಂದರ್ಭದಲ್ಲಿ ತನ್ನ ಅಪ್ರಾಪ್ತ ಮಗಳು ಮತ್ತು ಇತರ ಹುಡುಗಿಯರಿಗೆ ಕಿರುಕುಳ ನೀಡಿದ ಕೆಲವು ಹುಡುಗರ ವಿರುದ್ಧ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ರಕ್ಷಾ ಖಾಡ್ಸೆ ಇಂದು ದೂರು ದಾಖಲಿಸಿದ್ದಾರೆ. ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ನಡೆದ ಸಂತ ಮುಕ್ತಾಯಿ ಯಾತ್ರೆಯ ಸಂದರ್ಭದಲ್ಲಿ ಕೆಲವು ಯುವಕರು ತನ್ನ ಅಪ್ರಾಪ್ತ ಮಗಳು ಮತ್ತು ಇತರ ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ರಕ್ಷಾ ಖಾಡ್ಸೆ ಇಂದು ಕೆಲವು ಹುಡುಗರ ವಿರುದ್ಧ ದೂರು ನೀಡಿದ್ದಾರೆ.

“ಪ್ರತಿ ವರ್ಷ ಮಹಾಶಿವರಾತ್ರಿಯ ಸಂದರ್ಭದಲ್ಲಿ ಸಂತ ಮುಕ್ತಾಯಿ ಯಾತ್ರೆ ಈ ಪ್ರದೇಶದಲ್ಲಿ ನಡೆಯುತ್ತದೆ. 2 ದಿನಗಳ ಹಿಂದೆ ನನ್ನ ಮಗಳು ಯಾತ್ರೆಗೆ ಹೋಗಿದ್ದರು. ಕೆಲವು ಯುವಕರು ಆಕೆಗೆ ಕಿರುಕುಳ ನೀಡಿದರು. ನಾನು ಅವರ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದೆ” ಎಂದು ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ನನ್ನನ್ನು ಹಗುರವಾಗಿ ಪರಿಗಣಿಸಬೇಡಿ; ಸಿಎಂ ಫಡ್ನವೀಸ್ ಜೊತೆಗಿನ ಶೀತಲ ಸಮರದ ವದಂತಿ ಬೆನ್ನಲ್ಲೇ ಏಕನಾಥ್ ಶಿಂಧೆ ಅಚ್ಚರಿಯ ಹೇಳಿಕೆ

ಈ ಘಟನೆಯ ಸಮಯದಲ್ಲಿ, ಆರೋಪಿಗಳು ಸಚಿವರ ಭದ್ರತಾ ಸಿಬ್ಬಂದಿಯ ಕಾಲರ್ ಹಿಡಿದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.ಕಿರುಕುಳ ನೀಡಿದವರಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರಲ್ಲೊಬ್ಬರು ಶಿವಸೇನೆ (ಏಕನಾಥ್ ಶಿಂಧೆ ಬಣ) ಶಾಸಕ ಚಂದ್ರಕಾಂತ್ ಪಾಟೀಲ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.


ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. “ಒಂದು ಪಕ್ಷದ ಜೊತೆ ಸಂಬಂಧ ಹೊಂದಿರುವ ಕೆಲವು ಅಧಿಕಾರಿಗಳು ಈ ಕೃತ್ಯ ಎಸಗಿದ್ದಾರೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ. ಈ ರೀತಿಯ ಕಿರುಕುಳ ತಪ್ಪು. ಅವರನ್ನು ಕ್ಷಮಿಸಲು ಸಾಧ್ಯವಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಫಡ್ನವೀಸ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sun, 2 March 25