ಔರಂಗಾಬಾದ್‌ನಲ್ಲಿ ಹೆಲ್ಮೆಟ್ ಇಲ್ಲದೆ ಬುಲೆಟ್ ಬೈಕ್ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ ಕೇಂದ್ರ ಸಚಿವ

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್​ಸಾಹೇಬ್ ದಾನ್ವೆ ಅವರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೆಲ್ಮೆಟ್ ಇಲ್ಲದೇ ಫ್ಯಾನ್ಸಿ ನಂಬರ್ ಪ್ಲೇಟ್ ಇರುವ ಬುಲೆಟ್​​ನ್ನು ಇವರು ಚಲಾಯಿಸಿದ್ದಾರೆ. ರಾವ್​ಸಾಹೇಬ್ ದಾನ್ವೆ ತಮ್ಮದೇ ಬುಲೆಟ್ ಮೇಲೆ ಸವಾರಿ ಮಾಡುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಬುಲೆಟ್​​‘ನ ನಂಬರ್ ಪ್ಲೇಟ್​​ನಲ್ಲಿ BOSS ಎಂದು ಬರೆಯಲಾಗಿತ್ತು. ಇವರು ಹೆಲ್ಮೆಟ್ ಕೂಡಾ ಧರಿಸಿರಲಿಲ್ಲ

ಔರಂಗಾಬಾದ್‌ನಲ್ಲಿ ಹೆಲ್ಮೆಟ್ ಇಲ್ಲದೆ ಬುಲೆಟ್ ಬೈಕ್ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ ಕೇಂದ್ರ ಸಚಿವ
ರಾವ್​​ಸಾಹೇಬ್ ದಾನ್ವೆ
Follow us
ರಶ್ಮಿ ಕಲ್ಲಕಟ್ಟ
|

Updated on:Aug 28, 2023 | 5:02 PM

ಜಲ್ನಾ ಆಗಸ್ಟ್ 28: ನಿಯಮಗಳು ಮತ್ತು ಕಾನೂನುಗಳು (Traffic Rules)ಎಲ್ಲರಿಗೂ ಒಂದೇ. ಆದ್ದರಿಂದ, ಅದು ಸಾಮಾನ್ಯ ವ್ಯಕ್ತಿಯಾಗಿರಲಿ ಅಥವಾ ವಿಐಪಿಯಾಗಿರಲೀ ಪ್ರತಿಯೊಬ್ಬರ ಪ್ರಯಾಣ ಸುರಕ್ಷಿತವಾಗಿರಲು ಸಂಚಾರ ನಿಯಮಗಳನ್ನು ಪಾಲಿಸಲೇ ಬೇಕು. ಆದರೆ ಆಗಾಗ್ಗೆ ಈ ಸಂಚಾರ ನಿಯಮಗಳು ಉಲ್ಲಂಘಿಸಲ್ಪಡುತ್ತದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ, ಸಂಚಾರ ಪೊಲೀಸರು ದಂಡದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಜನಸಾಮಾನ್ಯರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಜನ ಸಾಮಾನ್ಯರು ಸಂಚಾರ ನಿಯಮ ಉಲ್ಲಂಘಿಸಿದರೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.

ಇಂಥಾ ಜವಾಬ್ದಾರಿಯುತ ನಡವಳಿಕೆಯನ್ನು ಸಾರ್ವಜನಿಕ ಪ್ರತಿನಿಧಿಗಳಿಂದಲೂ ನಿರೀಕ್ಷಿಸಲಾಗಿದೆ. ಅವರು ಇತರರಿಗೆ ಮಾದರಿಯಾಗಬೇಕು. ಆದರೆ ಕೆಲವೊಮ್ಮೆ ಜನಪ್ರತಿನಿಧಿಗಳು ಇದನ್ನು ಮರೆಯುತ್ತಾರೆ. ಇಂತಹದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ಛತ್ರಪತಿ ಸಂಭಾಜಿ ನಗರದಲ್ಲಿ ಕೇಂದ್ರ ಸಚಿವ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್​ಸಾಹೇಬ್ ದಾನ್ವೆ ಅವರು ರಾಜಿಯಾಗದ, ಮುಕ್ತ ಮನಸ್ಸಿನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದಾರೆ. ಇವರು ಛತ್ರಪತಿ ಸಂಭಾಜಿ ನಗರಕ್ಕೆ ಬಂದಾಗ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಟಿವಿ9 ಮರಾಠಿ ವರದಿ ಮಾಡಿದೆ.

ಇದನ್ನೂ ಓದಿ:  ಯುಪಿ ಶಾಲೆಯಲ್ಲಿ ಬಾಲಕನಿಗೆ ಕಪಾಳಮೋಕ್ಷ ಪ್ರಕರಣ: ಗುರುತು ಬಹಿರಂಗಪಡಿಸಿದ ಫ್ಯಾಕ್ಟ್ ​​ಚೆಕರ್​​ ಮೊಹಮ್ಮದ್ ಜುಬೇರ್ ವಿರುದ್ಧ ಪೊಲೀಸ್ ಕೇಸ್

ನಂಬರ್ ಪ್ಲೇಟ್ ಮೇಲೆ ಬಾಸ್ ಎಂದು ಬರೆದಿತ್ತು

ಆ ವೇಳೆ ರೈಲ್ವೇ ಖಾತೆ ರಾಜ್ಯ ಸಚಿವ ರಾವ್​ಸಾಹೇಬ್ ದಾನ್ವೆ ಅವರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೆಲ್ಮೆಟ್ ಇಲ್ಲದೇ ಫ್ಯಾನ್ಸಿ ನಂಬರ್ ಪ್ಲೇಟ್ ಇರುವ ಬುಲೆಟ್​​ನ್ನು ಇವರು ಚಲಾಯಿಸಿದ್ದಾರೆ. ರಾವ್ಸಾಹೇಬ್ ದಾನ್ವೆ ಅವರು ತಮ್ಮದೇ ಬುಲೆಟ್ ಮೇಲೆ ಸವಾರಿ ಮಾಡುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಬುಲೆಟ್ ನ ನಂಬರ್ ಪ್ಲೇಟ್ ನಲ್ಲಿ BOSS ಎಂದು ಬರೆಯಲಾಗಿತ್ತು. ಇವರು ಹೆಲ್ಮೆಟ್ ಕೂಡಾ ಧರಿಸಿರಲಿಲ್ಲ.

ಡ್ರೈವಿಂಗ್ ಪರೀಕ್ಷೆಗಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಪರೀಕ್ಷೆ

ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿರು ಮಹಾರಾಷ್ಟ್ರ ಮೋಟಾರು ವಾಹನಗಳ ಸಾರಿಗೆ ಇಲಾಖೆಯು ಡ್ರೈವಿಂಗ್ ಪರೀಕ್ಷೆಗಳಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಪರೀಕ್ಷೆಗಳನ್ನು ಪರಿಚಯಿಸುತ್ತಿದೆ. ಕನಿಷ್ಠ ಮಾನವ ಹಸ್ತಕ್ಷೇಪಕ್ಕಾಗಿ AI ಸಾಫ್ಟ್‌ವೇರ್‌ನೊಂದಿಗೆ ಸಂಯೋಜಿಸಲ್ಪಟ್ಟ ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳನ್ನು ನಿರ್ಮಿಸುವ ರಾಜ್ಯದ 17 ಸ್ಥಳಗಳಲ್ಲಿ ಮುಂಬೈ ಕೂಡ ಸೇರಿದೆ. 2022 ರಲ್ಲಿ, ಮಹಾರಾಷ್ಟ್ರವು ಒಟ್ಟು 33,069 ರಸ್ತೆ ಅಪಘಾತಗಳನ್ನು ದಾಖಲಿಸಿದೆ, 2019 ರಲ್ಲಿ 32,925 ಕ್ಕೆ ಹೋಲಿಸಿದರೆ, 0.44 ಶೇಕಡಾ ಏರಿಕೆಯನ್ನು ಸೂಚಿಸುತ್ತದೆ. ಅಂಕಿಅಂಶಗಳ ಪ್ರಕಾರ ಸಾವುನೋವುಗಳು ಶೇಕಡಾ 16.38 ರಷ್ಟು ಹೆಚ್ಚಾಗಿದೆ. WHO ಪ್ರಕಾರ, ರಸ್ತೆ ಅಪಘಾತದ ಗಾಯಗಳು ಭಾರತದಲ್ಲಿ ಸಾವಿಗೆ ಐದನೇ ಪ್ರಮುಖ ಕಾರಣಗಳಾಗಿವೆ. ಅಪಘಾತಗಳು ಪ್ರತಿ ವರ್ಷ ಜಿಡಿಪಿಯ ಶೇಕಡಾ 3 ರಷ್ಟು ನಷ್ಟಕ್ಕೆ ಕಾರಣವಾಗುತ್ತವೆ. ವಿವಿಧ ಅಂಶಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದರೂ, ಸಂಶೋಧನೆಯು ಚಾಲನೆಯ ಕೌಶಲ್ಯವನ್ನು ಪ್ರಮುಖ ಅಂಶವಾಗಿ ಎತ್ತಿ ತೋರಿಸಿದೆ. ಆದ್ದರಿಂದ, ಚಾಲಕರ ಗ್ರಹಿಕೆ ಮತ್ತು ಮೋಟಾರು ಕೌಶಲ್ಯಗಳನ್ನು ನಿರ್ಣಯಿಸುವುದು ರಸ್ತೆ ಸುರಕ್ಷತೆಗೆ ನಿರ್ಣಾಯಕವಾಗಿದೆ. ಈ ಉದ್ದೇಶದಿಂದ ಮಹಾರಾಷ್ಟ್ರದ 17 ಸ್ಥಳಗಳಲ್ಲಿ ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳನ್ನು ಸ್ಥಾಪಿಸಲು ಸಾರಿಗೆ ಇಲಾಖೆ ಯೋಜಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Mon, 28 August 23