ರಾಜಸ್ಥಾನ: ನ್ಯಾಯಾಧೀಶರ ಮಗನ ಚಪ್ಪಲಿ ಕಳವು, ಹುಡುಕಾಟಕ್ಕೆ ವಿಶೇಷ ತಂಡ ರಚಿಸಿದ ಪೊಲೀಸರು
ನ್ಯಾಯಧೀಶರೊಬ್ಬರ ಮಗನ ಶೂ ಯಾರೋ ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಅದನ್ನು ಪತ್ತೆ ಮಾಡುವ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ಶೂ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಜೈಪುರ, ಆ.28 : ರಾಜಸ್ಥಾನದಲ್ಲಿ (Rajasthan) ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಈ ಪ್ರಕರಣ ಒಂದು ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ವ್ಯಂಗ್ಯಕ್ಕೂ ಕಾರಣವಾಗಿದ್ದು, ಇದೀಗ ಈ ವಿಚಾರ ಎಲ್ಲ ಕಡೆ ಟ್ರೋಲ್ ಆಗುತ್ತಿದೆ. ಜೈಪುರದ ನ್ಯಾಯಧೀಶರೊಬ್ಬರ ಮಗನ ಶೂ ಯಾರೋ ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಅದನ್ನು ಪತ್ತೆ ಮಾಡುವ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ಶೂ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ ರಾಜಸ್ಥಾನದ ಅಲ್ವಾರ್‌ನ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಜೋಗೇಂದ್ರ ಕುಮಾರ್ ಅಗರ್ವಾಲ್ ಅವರು ತಮ್ಮ ಕುಟುಂಬದ ಜತೆಗೆ ಜೈಪುರದ ಬಡಿ ಚೌಪರ್ ಪ್ರದೇಶದಲ್ಲಿರುವ ಬ್ರಿಜ್ ನಿಧಿ ಮಂದಿರಕ್ಕೆ ಹೋಗಿದ್ದಾರೆ, ನ್ಯಾಯಧೀಶರ ಮಗ ಶೂ ತೆಗೆದು ದೇವಾಲಯದ ಒಳಗೆ ಹೋಗಿ ಪೂಜೆ ಮುಗಿಸಿ ಹೊರಗೆ ಬರಬೇಕಾದರೆ ನ್ಯಾಯಧೀಶರ ಮಗನ ಪಾದರಕ್ಷೆಯನ್ನು ಯಾರೋ ಕದ್ದೊಯ್ದಿದ್ದಾರೆ.
ಇದನ್ನೂ ಓದಿ: ವೈದ್ಯರ ಎಡವಟ್ಟಿನಿಂದ 18 ಜನರ ದೃಷ್ಟಿಯೇ ಹೋಯ್ತು!
ಪಾದರಕ್ಷೆ ಬೆಲೆ 10 ಸಾವಿರ
ನ್ಯಾಯಾಧೀಶರ ಪುತ್ರನ ಪಾದರಕ್ಷೆಗಳ ಬೆಲೆ 10,000 ರೂಪಾಯಿ ಎಂದು ಹೇಳಲಾಗಿದೆ. ಬೆಲೆ ಬಾಳುವ ಶೂ ಆಗಿರುವ ಕಾರಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ನ್ಯಾಯಾಧೀಶ ಜೋಗೇಂದ್ರ ಕುಮಾರ್ ಅಗರ್ವಾಲ್ ಅವರು ಮನಕ್ ಚೌಕ್ ಪೊಲೀಸ್ ಠಾಣೆಗೆ ಅಂಚೆ ಮೂಲಕ ದೂರನ್ನು ಕಳುಹಿಸಿದ್ದಾರೆ. ನ್ಯಾಯಾಧೀಶರ ಈ ದೂರಿನ ಮೇರೆಗೆ ಮನಕ್ ಚೌಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ತಂಡವನ್ನು ಸಹ ರಚಿಸಲಾಗಿದೆ. ಈ ಬಗ್ಗೆ ಹೆಡ್ ಕಾನ್‌ಸ್ಟೆಬಲ್ ಮಣಿರಾಮ್ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮಾಹಿತಿ ಪ್ರಕಾರ, ಪೊಲೀಸರು ಶೂ ಪತ್ತೆ ಮಾಡಲು ಮೊದಲಿಗೆ ಸೇತುವೆ ನಿಧಿ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಇನ್ನು ಈ ಬಗ್ಗೆ ಜನರು ಅಪಹ್ಯಾಸ ಮಾಡಿದ್ದು, ಪೊಲೀಸರಿಗೆ ಇದು ದೊಡ್ಡ ಪ್ರಕರಣ, ಶೂ ಹುಡುಕುವ ಕೆಲಸದಲ್ಲಿ ನಮ್ಮ ಪೊಲೀಸರು ನಿರತರಾಗಿದ್ದಾರೆ. ಶೂ ಕಳ್ಳರನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Mon, 28 August 23