ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾವೈರಸ್​​ ಸೋಂಕು ದೃಢ

ರಾಜೇಂದ್ರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ನಾಗರಿಕರಲ್ಲಿ ಕ್ಷಮೆಯಾಚಿಸಿರುವ ಸ್ಮೃತಿ ಇರಾನಿ, ಕೊವಿಡ್ ಪಾಸಿಟಿವ್ ಆಗಿದ್ದರಿಂದ ಬರಲಾಗಲಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾವೈರಸ್​​ ಸೋಂಕು ದೃಢ
ಸ್ಮೃತಿ ಇರಾನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 19, 2022 | 10:36 PM

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬಿನ್ ಇರಾನಿ (Smriti Zubin Irani )ಅವರಿಗೆ ಕೊವಿಡ್- 19 (Covid-19) ದೃಢಪಟ್ಟಿದೆ ಎಂದು ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ. ರಾಜೇಂದ್ರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ನಾಗರಿಕರಲ್ಲಿ ಕ್ಷಮೆಯಾಚಿಸಿರುವ ಸ್ಮೃತಿ ಇರಾನಿ, ಕೊವಿಡ್ ಪಾಸಿಟಿವ್ ಆಗಿದ್ದರಿಂದ ಬರಲಾಗಲಿಲ್ಲ ಎಂದು ಹೇಳಿದ್ದಾರೆ. ಇರಾನಿ ಅವರು ಈ ಹಿಂದೆ 2020 ರಲ್ಲಿ ಕೊರೊನಾವೈರಸ್ (Coronavirus) ಸೋಂಕಿಗೆ ಒಳಗಾಗಿದ್ದರು. ಆ ಸಮಯದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಸಚಿವರು ತಮ್ಮ ಸಂಪರ್ಕದಲ್ಲಿರುವವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಕೇಳಿಕೊಂಡಿದ್ದರು. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಭಾರತವು ಭಾನುವಾರ 12,899 ಹೊಸ ಪ್ರಕರಣಗಳನ್ನು ದಾಖಲಿಸಿದ್ದು,  ಒಟ್ಟು ಪ್ರಕರಣಗಳ ಸಂಖ್ಯೆ 4,32,96,692 ಕ್ಕೆ ಏರಿಕೆ ಆಗಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 72,474 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

15 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,855 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.17 ಪ್ರತಿಶತವನ್ನು ಒಳಗೊಂಡಿವೆ. ರಾಷ್ಟ್ರೀಯ ಕೊವಿಡ್ -19 ಚೇತರಿಕೆ ದರವು ಶೇಕಡಾ 98.62 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ 4,366 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ದೈನಂದಿನ ಧನಾತ್ಮಕತೆಯ ದರವು 2.89 ಶೇಕಡಾ ಮತ್ತು ಸಾಪ್ತಾಹಿಕ ಧನಾತ್ಮಕ ದರವು 2.50 ಶೇಕಡಾದಲ್ಲಿ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 10:26 pm, Sun, 19 June 22