UP Election 2022 ಈ ಬಾರಿ ಪಾಶ್ಚಾತ್ಯ ಉಡುಗೆ ಧರಿಸಿ ಗಮನ ಸೆಳೆದ ಉತ್ತರ ಪ್ರದೇಶದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ

Reena Dwivedi ಚುನಾವಣಾ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ ಅವರು ಕಳೆದ ಬಾರಿ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಇದೀಗ2022 ರಲ್ಲಿ ಮತ್ತೊಮ್ಮೆ ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಬಿಂದುವಾಗಿದ್ದಾರೆ. 

UP Election 2022 ಈ ಬಾರಿ ಪಾಶ್ಚಾತ್ಯ ಉಡುಗೆ ಧರಿಸಿ ಗಮನ ಸೆಳೆದ ಉತ್ತರ ಪ್ರದೇಶದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ
ರೀನಾ ದ್ವಿವೇದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 23, 2022 | 1:47 PM

2017 ರ ವಿಧಾನಸಭೆ ಮತ್ತು 2019 ರ ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯ ಸಮಯದಲ್ಲಿ ಲಖನೌದಲ್ಲಿ ಮತದಾನದ ಕರ್ತವ್ಯದ ಸಮಯದಲ್ಲಿ ಹಳದಿ ಸೀರೆ ಧರಿಸಿ ಸ್ಟೈಲಿಶ್ ಆಗಿ ಬಂದ ರೀನಾ ದ್ವಿವೇದಿಯ (Reena Dwivedi) ಫೋಟೊ ವೈರಲ್ ಆಗಿತ್ತು. ಈಗ, ಅವರು ಬುಧವಾರ ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರ (UP Election) ನಾಲ್ಕನೇ ಹಂತದ ತಯಾರಿಯಲ್ಲಿದ್ದಾರೆ. ಬುಧವಾರ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದಲ್ಲಿ ರೀನಾ ಮೋಹನ್‌ಲಾಲ್‌ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ ಅವರು ಕಳೆದ ಬಾರಿ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಇದೀಗ2022 ರಲ್ಲಿ ಮತ್ತೊಮ್ಮೆ ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಬಿಂದುವಾಗಿದ್ದಾರೆ.  ರೀನಾ ದ್ವಿವೇದಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ರಲ್ಲಿ ಚುನಾವಣಾ ಅಧಿಕಾರಿಗಳಲ್ಲಿ ಒಬ್ಬರು. ಫೆಬ್ರವರಿ 22 ರಂದು (ಮಂಗಳವಾರ) ಅವರು ಸ್ಲೀವ್ ಲೆಸ್ ಕಪ್ಪು ಟಾಪ್ ಮತ್ತು ಬೀಜ್ ಹೈ ವೇಸ್ಟ್ ಪ್ಯಾಂಟ್‌ ಧರಿಸಿ ಮೋಹನ್‌ಲಾಲ್‌ಗಂಜ್ ಮತಗಟ್ಟೆಗೆ ಆಗಮಿಸಿದರು. ಲಖನೌದ ಗೋಸೈಗಂಜ್ ಬೂತ್ ಸಂಖ್ಯೆ 114 ರ ಬಸ್ತಿಯಾದಲ್ಲಿನ ಮತದಾನ ಕೇಂದ್ರಕ್ಕೆ ಆಗಮಿಸುತ್ತಿದ್ದಾಗ ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ.  2017ರ ಉತ್ತರ ಪ್ರದೇಶ ಚುನಾವಣೆಯಲ್ಲೂ ದ್ವಿವೇದಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು.

2019 ರಲ್ಲಿ ಹಳದಿ ಸೀರೆ ಧರಿಸಿ ಬಂದಿದ್ದ ಪಿಡಬ್ಲ್ಯುಡಿ ಅಧಿಕಾರಿಯ ಛಾಯಾಚಿತ್ರವನ್ನು ಚುನಾವಣಾ ಕರ್ತವ್ಯದಲ್ಲಿದ್ದಾಗ ಸಹೋದ್ಯೋಗಿಯೊಬ್ಬರು ಕ್ಲಿಕ್ ಮಾಡಿದ್ದಾರೆ. ಪತಿ ನಿಧನದ ನಂತರ ರೀನಾ 2013 ರಿಂದ ಪಿಡಬ್ಲ್ಯೂಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ದ್ವಿವೇದಿ ಅವರು 2014, 2017 ಮತ್ತು 2019 ರ ಚುನಾವಣೆಗಳಲ್ಲಿ ಚುನಾವಣಾ ಅಧಿಕಾರಿಯಾಗಿದ್ದರು. ರೀನಾ ದ್ವಿವೇದಿ ಉತ್ತರ ಪ್ರದೇಶದ ಡಿಯೋರಿಯಾದವರು. ರೀನಾ ದ್ವಿವೇದಿ ಅವರ ಅಧಿಕೃತ ಇನ್ ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಸುಮಾರು 277K ಫಾಲೋವರ್​​ಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ತಮ್ಮ ದೈನಂದಿನ ಜೀವನದ ಆಗು ಹೋಗುಗಳ   ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ: UP Election 2022 Phase 4 Voting Live Updates: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; 11ಗಂಟೆವರೆಗೆ ಶೇ. 22.62ರಷ್ಟು ಮತದಾನ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?