ಅಂತೂ ಉತ್ತರ ಪ್ರದೇಶ ಪೊಲೀಸರು 9 ಮಹಿಳೆಯರನ್ನು ಕೊಲೆ ಮಾಡಿದ್ದ ಸರಣಿ ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಹುಡುಕಾಟಕ್ಕೆ 22 ಪೊಲೀಸ್ ತಂಡಗಳಿದ್ದವು, 1.5 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲಾಗಿತ್ತು. 24 ಗಂಟೆಯೂ ಪೊಲೀಸರು ಈ ವಿಚಾರದ ಮೇಲೆ ನಿದ್ದೆಗೆಟ್ಟು ಕೆಲಸ ಮಾಡಿದ್ದರು, ಕೆಲ ಬರೇಲಿ ಜಿಲ್ಲೆಯಲ್ಲಿ 9 ಮಹಿಳೆಯರನ್ನು ಕತ್ತು ಹಿಸುಕಲು ಸೀರೆಗಳನ್ನು ಬಳಸುತ್ತಿದ್ದನು.
ಸೀರೆಯ ಗಂಟನ್ನು ಕಟ್ಟುವ ಶೈಲಿ, ಕೊಲೆಗಳ ವಿಶಿಷ್ಟ ಮಾದರಿ ಎಲ್ಲವೂ ಕೊಲೆ ರಹಸ್ಯವನ್ನು ಭೇದಿಸಲು ಸಹಾಯ ಮಾಡಿದೆ.
ಜೂನ್ 2023 ಮತ್ತು ಜುಲೈ 2024 ರ ನಡುವೆ ಬರೇಲಿ ಶಾಹಿ ಮತ್ತು ಶಿಶ್‌ಗಢ ಪೊಲೀಸ್ ಆಸು ಪಾಸಿನಲ್ಲಿ ನಡೆದ 9 ಮಹಿಳೆಯರ ಕೊಲೆಗೆ ಸಂಬಂಧಿಸಿದಂತೆ ಹಂತಕನನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು 38 ವರ್ಷದ ಕುಲದೀಪ್ ಕುಮಾರ್ ಗಂಗ್ವಾರ್ ಎಂದು ಪೊಲೀಸರು ಗುರುತಿಸಿದ್ದು, ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ಆಗಸ್ಟ್ 8 ರಂದು ಬಂಧಿಸಲಾಯಿತು. ಆತ ಮಹಿಳೆಯರನ್ನು ಕೊಲೆ ಮಾಡಿ, ಮಹಿಳೆಯರ ಲಿಪ್ಸ್ಟಿಕ್ ಹಾಗೂ ಬಿಂದಿಗಳನ್ನು ಆತ ಇಟ್ಟುಕೊಳ್ಳುತ್ತಿದ್ದ.
ಮತ್ತಷ್ಟು ಓದಿ: ನಂಬಿದವರು ಅಸಹಾಯಕ ಸ್ಥಿತಿಯಲ್ಲಿದ್ದಾಗಲೇ ಆ ಇಬ್ಬರು ವಿವಾಹಿತರ ಮಧ್ಯೆ ಪ್ರೇಮಾಂಕುರ! ಆಮೇಲೇನಾಯ್ತು?
ಆತ ಕ್ರೂರಿಯಾಗಲು ಕಾರಣ?
ಗಂಗ್ವಾರ್ ಬಾಲ್ಯದಲ್ಲಿ ಅನುಭವಿಸಿದ ತೊಂದರೆ, ತಾಯಿಯನ್ನು ಕಳೆದುಕೊಂಡಾಗ ತಂದೆ ಬೇರೆ ಮದುವೆಯಾಗಿದ್ದು, ಮಲತಾಯಿ ಆತನಿಗೆ ಕೊಡುತ್ತಿದ್ದ ಕಷ್ಟವನ್ನೆಲ್ಲಾ ನೋಡಿ ಆತ ಹೆಣ್ಣುಮಕ್ಕಳನ್ನು ದ್ವೇಷಿಸಲು ಶುರು ಮಾಡಿದ್ದ. ಇದೀಗ ಆತನನ್ನು ಮನಃಶಾಸ್ತ್ರಜ್ಞರ ಬಳಿ ಕಳುಹಿಸಲಾಗಿದೆ.
ಕಾಡಿನಲ್ಲಿ ಏಕಾಂಗಿಯಾಗಿ ಮಹಿಳೆಯರು ಕಂಡುಬಂದರೆ ಅವರನ್ನು ಕೊಲೆ ಮಾಡುತ್ತಿದ್ದ. ಆತ ದುರ್ಬಲ ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ. ಕಳೆದ 13 ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ವರದಿಯಾದ 11 ಕೊಲೆಗಳಲ್ಲಿ, ಗಂಗ್ವಾರ್ ಆರು ಕೊಲೆಗಳನ್ನು ಒಪ್ಪಿಕೊಂಡಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ https://tv9kannada.com/nationalen