ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದೂ ವಿರೋಧಿ’ ಅಭಿಯಾನ ನಡೆಸುತ್ತಿರುವ ಮತಾಂಧರು
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ವಿರುದ್ಧ ಅಭಿಪ್ರಾಯ ಮೂಡಿಸುವಂತಹ ಹೊಂಸದೊಂದು ಪ್ರಯೋಗ ನಡೆಯುತ್ತಿದೆ ಎಂಬುದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ವಿರುದ್ಧ ಅಭಿಪ್ರಾಯ ಮೂಡಿಸುವಂತಹ ಹೊಂಸದೊಂದು ಪ್ರಯೋಗ ನಡೆಯುತ್ತಿದೆ ಎಂಬುದು ವರದಿಯಾಗಿದೆ. ಟ್ವಿಟ್ಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ವಿರೋಧಿ ಅಭಿಯಾನ ಹಾಗೂ ಹಿಂದೂಗಳ ಕುರಿತಂತೆ ಭಯ ಹುಟ್ಟಿಸುವಂತಹ ಸುಳ್ಳು ಮಾಹಿತಿಗಳ ಅಭಿಯಾನವನ್ನು ಕೆಲವು ನಿರ್ದಿಷ್ಟ ಗುಂಪುಗಳು ಮಾಡುತ್ತಿವೆ ಇದಕ್ಕೆ ಕಾಮೆಂಟ್ಗಳನ್ನು ಮಾಡುವ ಮೂಲಕ ಈ ವಿಚಾರವನ್ನು ಹೆಚ್ಚು ಜನರಿಗೆ ತಲುಪಿಸುವಂತಹ ಪ್ರಯತ್ನವು ನಡೆಯುತ್ತಿದೆ ಎಂದು ಎನ್‌ಸಿಆರ್‌ಐ ವರದಿಯಲ್ಲಿ ತಿಳಿಸಲಾಗಿದೆ.
‘ಹಿಂದೂಗಳು ಹಿಂಸಾತ್ಮಕರು, ನಿರಂಕುಶಾಧಿಕಾರಿಗಳಾಗಿದ್ದಾರೆ. ಹಿಂದೂಗಳು ನರಮೇಧ ಮಾಡುತ್ತಾರೆ. ಹಿಂದೂಗಳು ವಿಶ್ವಾಸಘಾತುಕರು, ಧರ್ಮದ್ರೋಹಿಗಳು ಹಿಂದೂಗಳು ಇತರ ಧರ್ಮಗಳನ್ನು ದ್ವೇಷಿಸುತ್ತಾರೆ’ ಹೀಗೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ ಎಂದು ಇತ್ತೀಚೆಗಷ್ಟೇ ಅಮೆರಿಕದ ವರದಿಯೊಂದರಲ್ಲಿ ಉಲ್ಲೇಖಿಸಲಾಗಿತ್ತು.
ಜಗತ್ತಿನಾದ್ಯಂತ ಹಿಂದೂಗಳ ವಿರುದ್ಧ ಯಾವ ರೀತಿ ದ್ವೇಷ ಹರಡಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಮಾತುಗಳ ಮಹಾಪೂರವೇ ಹರಿದುಬರುತ್ತಿದೆ ಎಂದು ಈ ವರದಿ ಹೇಳುತ್ತದೆ.
ಯುಎಸ್‌ನ ರಟ್ಜರ್ಸ್ ವಿಶ್ವವಿದ್ಯಾಲಯ ಮತ್ತು ಎನ್‌ಸಿಆರ್‌ಐ (ನೆಟ್‌ವರ್ಕ್ ಕಾಂಟ್ಯಾಜಿಯನ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಸಂಶೋಧಕರು ತಮ್ಮ ಇತ್ತೀಚಿನ ಅಧ್ಯಯನದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ವಿರೋಧಿ ಪ್ರಚಾರವು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹಿಂದೂಗಳ ವಿರುದ್ಧ ಪ್ರಚಾರಗಳು ನಡೆಯುತ್ತಿವೆ.
ಈ ಅಧ್ಯಯನದ ಪ್ರಕಾರ, ಭಯೋತ್ಪಾದಕ ಇಸ್ಲಾಮಿಕ್ ವೆಬ್ ನೆಟ್‌ವರ್ಕ್ ಪ್ರಪಂಚದಾದ್ಯಂತ ಹಿಂದೂಗಳ ವಿರುದ್ಧ ವಿಷವನ್ನು ಉಗುಳುತ್ತಿದೆ. ಇದರಲ್ಲಿ ದ್ವೇಷಪೂರಿತ ಭಾಷಣದಿಂದ ಹಿಡಿದು ಹಿಂದೂಗಳ ಮೇಲಿನ ಹಿಂಸಾಚಾರದವರೆಗೆ ಇಡೀ ಅಭಿಯಾನ ನಡೆಯುತ್ತಿದೆ. ದೇಶದಲ್ಲಿ ಹಿಂದೂ-ಮುಸ್ಲಿಂ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಈ ಎಲ್ಲ ಬಹಿರಂಗವಾಗಿದೆ.
ಜಗತ್ತಿನಾದ್ಯಂತ ಹಿಂದೂಗಳ ವಿರುದ್ಧ ಜನರನ್ನು ಪ್ರಚೋದಿಸಲಾಗುತ್ತಿದೆ. ಅವರನ್ನು ಅಸಭ್ಯ, ಹಿಂಸಾತ್ಮಕ, ಧರ್ಮದ್ರೋಹಿ, ದಬ್ಬಾಳಿಕೆ ಎಂದು ವಿವರಿಸುವ ಪ್ರಯತ್ನಗಳು ನಡೆಯುತ್ತಿವೆ.
ಭಾರತದಲ್ಲಿ ಮುಸ್ಲಿಮರನ್ನು ಹಿಂದೂಗಳು ಹಿಂಸಿಸುವಂತಹ ಸೆನಾರಿಯೊಗಳನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ.ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ವಿರುದ್ಧ ಒಂದು ರೀತಿಯ ಪ್ರಚಾರ ನಡೆಯುತ್ತಿದ್ದು, ಇದರ ಅಪಾಯಗಳೂ ಹೆಚ್ಚಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ವಿರುದ್ಧ ಮೀಮ್‌ಗಳು, ಸಂದೇಶಗಳು, ಕಾರ್ಟೂನ್‌ಗಳು, ಫೋಟೋಗಳು ಇತ್ಯಾದಿಗಳನ್ನು ಬಳಸಲಾಗುತ್ತಿದೆ ಎಂದು ಈ ಸಂಶೋಧನೆಯಲ್ಲಿ ವಿವರವಾಗಿ ಹೇಳಲಾಗಿದೆ.
ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಹಿಂದೂಗಳ ವಿರುದ್ಧ ದ್ವೇಷ ಭಾಷಣಗಳು ವೇಗವಾಗಿ ಹೆಚ್ಚುತ್ತಿವೆ ಎಂಬುದಕ್ಕೆ ಬಲವಾದ ಪುರಾವೆಗಳು ನಮಗೆ ದೊರೆತಿವೆ ಎಂದು ಹೇಳಿದೆ.
ಹಿಂದೂಗಳ ವಿರುದ್ಧ ಮಾತ್ರವಲ್ಲದೆ ಸಿಖ್ ಮತ್ತು ಬೌದ್ಧರ ವಿರುದ್ಧವೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ತೀವ್ರಗೊಂಡಿದೆ ಎಂದು ಅಮೆರಿಕದ ಸಂಶೋಧಕರು ಹೇಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಮತೋಲಿತ ಚರ್ಚೆಗೆ ಸಂಶೋಧಕರು ಕರೆ ನೀಡಿದ್ದಾರೆ.
Published On - 8:43 pm, Thu, 14 July 22