Uttar Pradesh: ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿಕೊಂಡ 12 ರೋಗಿಗಳು, 20 ನಿಮಿಷಗಳ ಬಳಿಕ ರಕ್ಷಣೆ

ಆಸ್ಪತ್ರೆಯ ಲಿಫ್ಟ್​ನಲ್ಲಿ 12 ಮಂದಿ ರೋಗಿ ಸಿಲುಕಿಕೊಂಡಿದ್ದು 20 ನಿಮಿಷಗಳ ಬಳಿಕ ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

Uttar Pradesh: ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿಕೊಂಡ 12 ರೋಗಿಗಳು, 20 ನಿಮಿಷಗಳ ಬಳಿಕ ರಕ್ಷಣೆ
ಆಸ್ಪತ್ರೆ ಲಿಫ್ಟ್​
Image Credit source: India Today

Updated on: Jun 29, 2023 | 2:27 PM

ಆಸ್ಪತ್ರೆಯ ಲಿಫ್ಟ್​ನಲ್ಲಿ 12 ಮಂದಿ ರೋಗಿ ಸಿಲುಕಿಕೊಂಡಿದ್ದು 20 ನಿಮಿಷಗಳ ಬಳಿಕ ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯ ಎರಡನೇ ಮಹಡಿಗೆ ಹೋಗಲು ಕೆಲವು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಲಿಫ್ಟ್‌ ಏರಿದ್ದರು. ಲಿಫ್ಟ್ ಮೇಲಕ್ಕೆ ಹೋಗುತ್ತಿದ್ದಾಗ, ಅದು ಮಧ್ಯದಲ್ಲಿ ನಿಂತಿತ್ತು.

ಗಾಬರಿಗೊಂಡ ಜನರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು, ಅವರ ಕೂಗು ಹೊರಗಡೆಯೂ ಕೇಳಿತ್ತು. ತಕ್ಷಣವೇ ಲಿಫ್ಟ್​ನ್ನು ಸರಿಪಡಿಸುವ ಕಾರ್ಯ ಕೈಗೊಳ್ಳಲಾಯಿತು. ಘಟನೆಯ ಸಮಯದಲ್ಲಿ ಎಲಿವೇಟರ್‌ಗಳ ಕಾರ್ಯನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿ ಅಲ್ಲಿರಲಿಲ್ಲ, ನಂತರ, ಅವರನ್ನು ಕರೆಸಿ ಕೀಯಿಂದ ಲಿಫ್ಟ್​ ತೆರೆದು ಜನರನ್ನು ರಕ್ಷಿಸಲಾಯಿತು.

ಮತ್ತಷ್ಟು ಓದಿ: ಬೆಂಗಳೂರು ಮಳೆಗೆ ಯುವತಿ ಬಲಿ: ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಇನ್ಫೋಸಿಸ್ ಉದ್ಯೋಗಿ ದುರಂತ ಅಂತ್ಯ

ಆದಾಗ್ಯೂ, ಲಿಫ್ಟ್ ಅಟೆಂಡೆಂಟ್ ಪಾತ್ರದ ಬಗ್ಗೆ ಪ್ರತಿಕ್ರಿಯಿಸಲು ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿತು. ಆಸ್ಪತ್ರೆಯ ಲಿಫ್ಟ್ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಒಪ್ಪಂದವಿರುವ ಕಾರಣ ಕಾಲ ಕಾಲಕ್ಕೆ ಲಿಫ್ಟ್​ನ ತಪಾಸಣೆ ನಡೆಯುತ್ತಿದೆ. ಲಿಫ್ಟ್​ನಲ್ಲಿ ಓರ್ವ ಲಿಫ್ಟ್​ ಅಟೆಂಡೆಂಟ್ ಇದ್ದೇ ಇರುತ್ತಾರೆ. ಆದರೆ ವಿಡಿಯೋ ನೋಡಿದಾಗ ಲಿಫ್ಟ್​ನಲ್ಲಿ 10-12 ಮಂದಿ ಇದ್ದುದ್ದು ಕಂಡುಬಂದಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us