ಉತ್ತರ ಪ್ರದೇಶ: ಕಾರ್ಟೂನ್ ನೋಡುತ್ತಲೇ ಪ್ರಾಣಬಿಟ್ಟ 5 ವರ್ಷದ ಬಾಲಕಿ
ಹಾಸಿಗೆ ಮೇಲೆ ಮಲಗಿ ಕಾರ್ಟೂನ್ ನೋಡುತ್ತಲೇ 5 ವರ್ಷದ ಬಾಲಕಿ ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಆಮ್ರೋಹಾದಲ್ಲಿ ನಡೆದಿದೆ. ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಹಸನ್‌ಪುರ ಕೊತ್ವಾಲಿ ವ್ಯಾಪ್ತಿಯ ಹಥಿಯಾಖೇಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಾಲಕಿಯ ಸಾವಿನ ನಂತರ ಮನೆಯವರು ಅಂತ್ಯಸಂಸ್ಕಾರ ಮಾಡಿದರು, ಬಾಲಕಿಯನ್ನು ಕಾಮಿನಿ ಎಂದು ಗುರುತಿಸಲಾಗಿದೆ. ಮನೆಯವರ ಪ್ರಕಾರ, ಬಾಲಕಿ ಹಾಸಿಗೆಯ ಮೇಲೆ ಮಲಗಿ ಫೋನ್ ನೋಡುತ್ತಿದ್ದಾಗ ಅವಳ ಕೈಯಿಂದ ಫೋನ್ ಬಿದ್ದಿತ್ತು ಆಕೆ ಪ್ರಜ್ಞಾಹೀನಳಾಗಿದ್ದಳು.
ಕಾಮಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಅಷ್ಟರಲ್ಲೇ ಆಕೆ ಸಾವನ್ನಪ್ಪಿದ್ದಳು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹಸನ್‌ಪುರ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ಶವ ಪರೀಕ್ಷೆಗಾಗಿ ಶವವನ್ನು ಹಸ್ತಾಂತರಿಸುವಂತೆ ಕೇಳಿಕೊಂಡಿದ್ದೆವು ಆದರೂ ಕುಟುಂಬದವರು ಕೇಳಲಿಲ್ಲ ಎಂದರು.
ಮತ್ತಷ್ಟು ಓದಿ: Viral: ನೋಡ ನೋಡುತ್ತಲೇ ತರಗತಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಯುವಕ; ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ
ಬಾಲಕಿ ಹೇಗೆ ಸಾವಿಗೀಡಾಗಿದ್ದಾಳೆ ಎಂಬುದು ತನಿಖೆಯಾಗಬೇಕಿದೆ ಎಂದು ಡಾ ಸತ್ಯಪಾಲ್ ಹೇಳಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಬಿಜ್ನೋರ್ ಮತ್ತು ಅಮ್ರೋಹಾದಲ್ಲಿ ಹನ್ನೆರಡು ಮಕ್ಕಳು ಮತ್ತು ಯುವಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಸೂಚಿಸಿದೆ.
ಚಳಿಗಾಲದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ತುಸು ಹೆಚ್ಚಿರುತ್ತದೆ.ಇದು ಆಮ್ಲಜನಕದ ಮಟ್ಟದಲ್ಲಿ ಏರುಪೇರುಗಳನ್ನು ಉಂಟುಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ