ಉತ್ತರ ಪ್ರದೇಶ: ಹಣಕ್ಕಾಗಿ ಚಿಕ್ಕಪ್ಪನಿಂದಲೇ ಬಾಲಕಿಯ ಅಪಹರಣ, ಹತ್ಯೆ, ಇಬ್ಬರ ಬಂಧನ
ಆಸ್ತಿಗಾಗಿ ಸ್ವಂತ ಚಿಕ್ಕಪ್ಪನೇ 5 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕಿಯ ತಂದೆಗೆ 6 ಲಕ್ಷ ರೂ. ಹೊಂದಿಸಲು ಸಾಧ್ಯವಾಗಿರಲಿಲ್ಲ, ಆ ಕೋಪದಲ್ಲೆ ಆಕೆಯನ್ನೇ ಹತ್ಯಗೈದಿದ್ದಾರೆ.
ಹಣಕ್ಕಾಗಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಪ್ಪನೇ ಅಪಹರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಜಮೀನು ವಿವಾದವಿದ್ದ ಕಾರಣ ಕೋಪದಲ್ಲಿ ಈ ಕೃತ್ಯವೆಸಗಿದ್ದಾನೆ. ಮಂಗಳವಾರ ಸಂಜೆ ಫರೈರಾ ಗ್ರಾಮದ ತನ್ನ ಮನೆಯಿಂದ ಅಪಹರಿಸಲಾಗಿತ್ತು.
ಅಪಹರಣಕಾರರು ಆಕೆಯನ್ನು ಸುರಕ್ಷಿತವಾಗಿ ಹಿಂದಿರುಗಿಸಲು 6 ಲಕ್ಷ ರೂ. ಕೇಳಿದ್ದರು. ಹಣ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಗುರುವಾರ ಫರೈರಾ ಗ್ರಾಮದ ಹೊರವಲಯದಲ್ಲಿರುವ ಸಾಸಿವೆ ತೋಟದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪೊಲೀಸರು ಅಪಹರಣ ಮತ್ತು ಕೊಲೆಯ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಅಪಹರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಪ್ಪ ಅಮಿತ್ ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅತುಲ್ ಶರ್ಮಾ ತಿಳಿಸಿದ್ದಾರೆ. ಅಮಿತ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನ ಸ್ನೇಹಿತ, ಪಕ್ಕದ ಹಳ್ಳಿಯ ನಿವಾಸಿ ನಿಖಿಲ್ ಅವನಿಗೆ ಸಹಾಯ ಮಾಡಿದ್ದಾನೆ ಎಂದು ಶರ್ಮಾ ಹೇಳಿದರು.
ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್ಕಾಲ್ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ
ನಿಖಿಲ್ ಅವರ ಜಮೀನಿನಲ್ಲಿ ಬಾಲಕಿಯ ಕೊಲೆ ನಡೆದಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. ಆಕೆಯ ತಂದೆಯಿಂದ ಹಣ ಪಡೆಯಲು ಸಾಧ್ಯವಾಗದಿದ್ದಾಗ, ಅವನು ಬಾಲಕಿಯನ್ನು ಕೊಂದಿದ್ದಾನೆ. ಬಾಲಕಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಸಂತ್ರಸ್ತ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ