ಉತ್ತರ ಪ್ರದೇಶ: ವಾರಾಣಸಿಯಲ್ಲಿ ಒಂದೇ ಟ್ರ್ಯಾಕ್​ನಲ್ಲಿ ಎದುರು ಬದುರು ಬಂದ ರೈಲುಗಳು

ವಾರಾಣಸಿಯಲ್ಲಿ ರೈಲು ಅಪಘಾತ ಸ್ವಲ್ಪದರಲ್ಲೇ ತಪ್ಪಿದೆ. ಲೊಕೊ ಪೈಲಟ್‌ನ ಜಾಣತನದಿಂದ ಎರಡು ರೈಲುಗಳ ನಡುವಿನ ಡಿಕ್ಕಿಯನ್ನು ಸ್ವಲ್ಪದರಲ್ಲೇ ತಪ್ಪಿಸಲಾಯಿತು. ಬಿಲಾಸ್‌ಪುರ-ಅಯೋಧ್ಯಾ ಧಾಮ್ ಸ್ಪೆಷಲ್ ಓಡಿಸುತ್ತಿದ್ದ ಲೊಕೊ ಪೈಲಟ್ (ಚಾಲಕ) ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ತನ್ನದೇ ಆದ ಸಾಲಿನಲ್ಲಿ ನಿಂತಿರುವುದನ್ನು ಕಂಡು ಒಮ್ಮೆ ಆಘಾತವಾಗಿತ್ತು. ಕೂಡಲೇ ಬ್ರೇಕ್​ ಹಾಕಿ ರೈಲನ್ನು ನಿಲ್ಲಿಸಲಾಯಿತು.

ಉತ್ತರ ಪ್ರದೇಶ: ವಾರಾಣಸಿಯಲ್ಲಿ ಒಂದೇ ಟ್ರ್ಯಾಕ್​ನಲ್ಲಿ ಎದುರು ಬದುರು ಬಂದ ರೈಲುಗಳು
ರೈಲುImage Credit source: Business Standard
Follow us
|

Updated on: Nov 08, 2024 | 10:01 AM

ಒಂದೇ ಮಾರ್ಗದಲ್ಲಿ ಎರಡು ರೈಲುಗಳು ಮುಖಾಮುಖಿಯಾಗಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಕ್ಯಾಂಟ್ ರೈಲು ನಿಲ್ದಾಣದಲ್ಲಿ ಗುರುವಾರ ಒಂದೇ ಮಾರ್ಗದಲ್ಲಿ ಎರಡು ರೈಲುಗಳು ಮುಖಾಮುಖಿಯಾಗಿವೆ. ಇದನ್ನು ಕಂಡ ವಿಶೇಷ ರೈಲಿನ ಲೋಕೋ ಪೈಲಟ್ (ರೈಲು ಚಾಲಕ) ಏಕಾಏಕಿ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ ಇದರಿಂದ  ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಚಾಲಕ ರೈಲನ್ನು ನಿಲ್ಲಿಸಿದ ಸ್ಥಳದಿಂದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ 50 ಮೀಟರ್‌ಗಿಂತ ಕಡಿಮೆ ದೂರದಲ್ಲಿತ್ತು. ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಇಡೀ ಇಲಾಖೆಯಲ್ಲಿ ಆತಂಕ ಮನೆ ಮಾಡಿದೆ. ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಲಾಲ್ಜಿ ಚೌಧರಿ ಮತ್ತು ನಿಲ್ದಾಣದ ನಿರ್ದೇಶಕ ಅರ್ಪಿತ್ ಗುಪ್ತಾ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಪೂರ್ಣ ಪ್ರಕರಣದ ತನಿಖೆಗೆ ಜಂಟಿ ಸಮಿತಿಯನ್ನು ರಚಿಸಲಾಗಿದೆ.

ರೈಲು ಸಂಖ್ಯೆ 12562 ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಗುರುವಾರ ಬೆಳಗ್ಗೆ 8.15 ಕ್ಕೆ ಪ್ಲಾಟ್‌ಫಾರ್ಮ್ ನಂಬರ್ ಒಂದನ್ನು ಪ್ರವೇಶಿಸುತ್ತಿತ್ತು. ರೈಲ್ವೆ ನಿಯಂತ್ರಣಾಧಿಕಾರಿಗಳಿಂದ ಮಾಹಿತಿ ಬಂದ ತಕ್ಷಣ ಸ್ಥಳೀಯ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ಕಾರ್ಯಾಚರಣೆ ಮತ್ತು ಸಿಗ್ನಲ್ ವಿಭಾಗದ ನೌಕರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಮತ್ತಷ್ಟು ಓದಿ: ಕೇರಳ: ರೈಲ್ವೆ ಗುತ್ತಿಗೆ ಕಾರ್ಮಿಕರ ಮೇಲೆ ಹರಿದ ಎಕ್ಸ್​ಪ್ರೆಸ್ ರೈಲು, ನಾಲ್ವರು ಸಾವು

ತನಿಖೆಗಾಗಿ ಐವರು ಸದಸ್ಯರ ಜಂಟಿ ಸಮಿತಿಯನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಲಾಲ್ಜಿ ಚೌಧರಿ ತಿಳಿಸಿದ್ದಾರೆ. 48 ಗಂಟೆಗಳಲ್ಲಿ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇತ್ತೀಚಿನ ದಿನಗಳಲ್ಲಿ ರೈಲು ಅಪಘಾತದ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಒಂದೇ ಮಾರ್ಗದಲ್ಲಿ ಎರಡು ರೈಲುಗಳು ಬಂದಿರುವ ಬಗ್ಗೆ ಕೇಳಿ ಆಶ್ಚರ್ಯವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆ
ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆ
ದೇವಾಲಯದಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ದೇವಾಲಯದಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ಕಾರ್ತಿಕ ಮಾಸದ ಮೊದಲ ಶುಕ್ರವಾರದ ದಿನಭವಿಷ್ಯ ತಿಳಿಯಿರಿ
ಕಾರ್ತಿಕ ಮಾಸದ ಮೊದಲ ಶುಕ್ರವಾರದ ದಿನಭವಿಷ್ಯ ತಿಳಿಯಿರಿ
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ