ಲಖನೌ: 2022 ರ ಚುನಾವಣೆಯಲ್ಲಿ ಪಕ್ಷದ ಮುಖವಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ನಿಲ್ಲಲು ಉತ್ತರ ಪ್ರದೇಶದ ಬಿಜೆಪಿಯಿಂದ ಒಪ್ಪಂದ ಮತ್ತು ಐಕ್ಯತೆಯ ಸಂಕೇತಗಳು ಕಾಣಿಸಿವೆ. ಪಕ್ಷವು ತನ್ನ ಶಕ್ತಿಯನ್ನು ಮರು ಕೇಂದ್ರೀಕರಿಸಲು ‘ಬೂತ್ ಜೀತಾ ತೊ ಸಬ್ ಜೀತಾ’ (ಬೂತ್ ಗೆದ್ದರೆ ಎಲ್ಲವನ್ನೂ ಗೆದ್ದಂತೆ) ಎಂಬ ಕಾರ್ಯತಂತ್ರವನ್ನು ಬಳಸಲಿದೆ.
ಬಿಜೆಪಿ ನಾಯಕರು ಮಂಗಳವಾರ ಲಖನೌದಲ್ಲಿ ಮ್ಯಾರಥಾನ್ ಸಭೆಗಳನ್ನು ನಡೆಸಿದರು., ಅಲ್ಲಿ ಪಕ್ಷವನ್ನು ಚುನಾವಣೆಗೆ ಮುನ್ನಡೆಸುವ ಆದಿತ್ಯನಾಥ ಅವರ ಸಾಮರ್ಥ್ಯದ ಬಗ್ಗೆ ರಾಜ್ಯ ಸಚಿವರು ನಂಬಿಕೆ ವ್ಯಕ್ತಪಡಿಸಿದರು. ಇಲ್ಲಿ ಪಕ್ಷದ ಮುಖ್ಯ ಟ್ರಬಲ್-ಶೂಟರ್ ಆಗಿ ಹೊರಹೊಮ್ಮಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಬಿ.ಎಲ್.ಸಂತೋಷ್ ಉತ್ತರ ಪ್ರದೇಶದಲ್ಲಿ ಮಂಗಳವಾರ ದಾಖಲೆಯ 8.1 ಲಕ್ಷ ಲಸಿಕೆಗಳನ್ನು ನೀಡಿದ್ದಕ್ಕೆ ಆದಿತ್ಯನಾಥ ಅವರನ್ನು ಅವರನ್ನು ಟ್ವಿಟ್ಟರ್ನಲ್ಲಿ ಅಭಿನಂದಿಸಿದ್ದಾರೆ.
2017 ರಲ್ಲಿ ಬಿಜೆಪಿ ಮಾಡಿದಂತೆ ಬ್ಲಾಕ್ ಮಟ್ಟದಲ್ಲಿ ಜನರ ಬಳಿ ಹೋಗಬೇಕು, ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಮಾಡಿದ ಉತ್ತಮ ಕಾರ್ಯಗಳ ಬಗ್ಗೆ ಪ್ರಚಾರ ನಡೆಸಬೇಕು. 2017ರಲ್ಲಿ ಕೇಂದ್ರದ ಸಾಧನೆಗಳನ್ನು ಮಾತ್ರ ನಾವು ಜನರಿಗೆ ತಿಳಿಸಿದ್ದೆವು ಆದರೆ ಈ ಬಾರಿ ನಮ್ಮಲ್ಲಿ ಹಲವಾರು ರಾಜ್ಯ ಸರ್ಕಾರದ ಸಾಧನೆಗಳು ಇವೆ ಎಂದು ಲಖನೌದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಮ್ಯಾರಥಾನ್ ಸಭೆಯಲ್ಲಿ ಹಾಜರಿದ್ದ ಇಬ್ಬರು ಹಿರಿಯ ಸಚಿವರು ತಿಳಿಸಿರುವುದಾಗಿ ನ್ಯೂಸ್ 18 ಮಾಧ್ಯಮ ವರದಿ ಮಾಡಿದೆ.
ಸಂತೋಷ್ ಮತ್ತು ಬಿಜೆಪಿಯ ಉತ್ತರಪ್ರದೇಶದ-ಇನ್ ಚಾರ್ಜ್ ರಾಧಾ ಮೋಹನ್ ಸಿಂಗ್ ಅವರು ಬುಧವಾರ ಲಕ್ನೋದಲ್ಲಿ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರನ್ನು ಭೇಟಿ ಮಾಡಲಿದ್ದು, ಬಿಜೆಪಿ ತನ್ನ 2017 ರ ಗೆಲುವಿನ ಕಾರ್ಯತಂತ್ರವನ್ನು ಅನುಸರಿಸಬೇಕು ಮತ್ತು ಎಲ್ಲಾ ಸಚಿವರು ಮತ್ತು ಕಾರ್ಯಕರ್ತರು ಬೂತ್‌ಗಳತ್ತ ಗಮನ ಹರಿಸಬೇಕಾಗಿದೆ ಎಂಬ ಸಂದೇಶವನ್ನು ನೀಡಿದ್ದಾರೆ.
ಒಂದು ತಿಂಗಳೊಳಗೆ ಉತ್ತರ ಪ್ರದೇಶದಂತಹ ದೊಡ್ಡ ಮತ್ತು ಜನಸಂಖ್ಯೆಯ ರಾಜ್ಯದಲ್ಲಿ ಕೊರಾನಾವೈರಸ್ ಅನ್ನು ಹೇಗೆ ನಿಯಂತ್ರಿಸಲಾಗಿದೆ ಎಂದು ಜನರಿಗೆ ತಿಳಿಸಬೇಕು. ಪ್ರತಿ ವಯಸ್ಕರಿಗೆ 2021 ರ ಅಂತ್ಯದ ವೇಳೆಗೆ ಲಸಿಕೆ ನೀಡಲಾಗುವುದು ಎಂದು ಸಭೆಯಲ್ಲಿ ಒತ್ತಿಹೇಳಲಾಯಿತು ಎಂದು ಸಚಿವರು ಹೇಳಿದ್ದಾರೆ.
ಉಚಿತ ಪಡಿತರ ಯೋಜನೆಗಳು, ಬೆಳೆಗಳ ದಾಖಲೆ ಸಂಗ್ರಹಣೆ, ಕಬ್ಬಿನ ಬಾಕಿ ಪಾವತಿ ಮತ್ತು 2017 ರಿಂದ ರಾಜ್ಯದಲ್ಲಿ ನೀಡಲಾದ ನಾಲ್ಕು ಲಕ್ಷ ಸರ್ಕಾರಿ ಉದ್ಯೋಗಗಳಂತಹ ಸಾಧನೆಗಳನ್ನು ಸಾರ್ವಜನಿಕರಲ್ಲಿ ಪ್ರಚಾರ ಮಾಡಲು ಸಂದೇಶ ನೀಡಲಾಗಿದೆ. ಪ್ರತಿಪಕ್ಷಗಳು ಪ್ರಾರಂಭಿಸಿದ ಅಭಿಯಾನದ ವಿರುದ್ಧವೂ ನಾವು ನಿಲ್ಲಬೇಕು ಎಂದು ಸಂದೇಶದಲ್ಲಿ ಹೇಳಿದೆ.
ಬಿಜೆಪಿ ಕಾರ್ಯಕರ್ತರ ದೂರುಗಳಿಗೆ ನಾಯಕತ್ವ ಗಮನ ಹರಿಸುವುದಿಲ್ಲ ಎಂದು ಸಚಿವರು ದೂರುವುದನ್ನು ನಾಯಕರು ತಾಳ್ಮೆಯಿಂದ ಆಲಿಸಿದರು.
ಆದಿತ್ಯನಾಥ ಮತ್ತು ಹಿರಿಯ ಆರ್‌ಎಸ್‌ಎಸ್ ಮುಖಂಡರು ಮಂಗಳವಾರ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಮನೆಗೆ ಭೇಟಿ ನೀಡಿ ತಮ್ಮ ಮಗನ ಮದುವೆಗೆ ಶುಭ ಹಾರೈಸಿದರು. ಪಕ್ಷದ ನಾಯಕತ್ವ ಯಾರು ವಹಿಸಲಿದ್ದಾರೆಎಂದು ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ಮೌರ್ಯ ಇತ್ತೀಚೆಗೆ ಹೇಳಿದ್ದದ್ದರು.ಈ ಚುನಾವಣೆಯಲ್ಲಿ ಆದಿತ್ಯನಾಥ ನೇತೃತ್ವ ವಹಿಸಲಿದ್ದು ಅವರ ಹೇಳಿಕೆಗೆ ಮತ್ತೊಬ್ಬ ಬಿಜೆಪಿ ಮುಖಂಡ ಮತ್ತು ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಬೆಂಬಲ ನೀಡಿದರು.
ಪಕ್ಷದ ಹಿರಿಯ ನಾಯಕತ್ವವು ಆದಿತ್ಯನಾಥ ಅವರು ಸಿಎಂ ಮುಖವಾಗಿದ್ದರೆ, ಕೇಶವ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರ ಇಬ್ಬರು ಉಪಮುಖ್ಯಮಂತ್ರಿಗಳು ಪ್ರಚಾರದ ಸಮಯದಲ್ಲಿ ಸರಿಯಾದ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ. ಮತದಾರರರಲ್ಲಿ ವಿಶೇಷವಾಗಿ ಒಬಿಸಿಗಳು, ಮೇಲ್ಜಾತಿಗಳು ಮತ್ತು ಬ್ರಾಹ್ಮಣರರನ್ನು ಗುರಿಯಾಗಿಸಿ ಬಿಜೆಪಿ ಪ್ರಚಾರದಲ್ಲಿ ಸಾಮಾಜಿಕ ಒಕ್ಕೂಟವನ್ನು ಬಿಂಬಿಸುತ್ತಿದೆ.
ಇತ್ತೀಚೆಗೆ ನೇಮಕಗೊಂಡ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎ.ಕೆ.ಶರ್ಮಾ ಅವರು ಉತ್ತರ ಪ್ರದೇಶದಲ್ಲಿ ಪಕ್ಷದ ಮುಖ್ಯಸ್ಥರಿಗೆ ಬರೆದ ಪತ್ರವನ್ನು ಸಹ ಒಪ್ಪಂದದ ಸಂಕೇತವೆಂದು ಪರಿಗಣಿಸಲಾಗುತ್ತಿದ್ದು, ಯೋಗಿ ಆದಿತ್ಯನಾಥ ಅವರ ನಾಯಕತ್ವದಲ್ಲಿ 2022 ರ ಚುನಾವಣೆಯಲ್ಲಿ ಪಕ್ಷವು ಜಯಗಳಿಸುವ ಬಗ್ಗೆ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಲಖನೌದಲ್ಲಿ ನಡೆದ ಬಿಜೆಪಿ ರಾಜ್ಯ ನಾಯಕತ್ವದ ಸಭೆಗಳಿಗೆ ಶರ್ಮಾ ಅವರನ್ನು ಆಹ್ವಾನಿಸಲಾಗಿದ್ದು, ಹೊಸದಾಗಿ ಸೇರ್ಪಡೆಗೊಂಡ ಜಿತಿನ್ ಪ್ರಸಾದ ಜೊತೆಗೆ ಅವರಿಬ್ಬರೂ ಮೇಲ್ಜಾತಿಗಳನ್ನು ತಲುಪುವ ಅಭಿಯಾನದಲ್ಲಿ ದೊಡ್ಡ ರೀತಿಯಲ್ಲಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಪಕ್ಷವು ದಲಿತರ ಪರ ದೊಡ್ಡಮಟ್ಟದಲ್ಲಿ ತಲುಪಲು ಯೋಜಿಸುತ್ತಿದೆ ಎಂದು ರಾಜ್ಯದ ಸಚಿವರು ಹೇಳಿದರು.
(ttar Pradesh Assembly elections 2022 BJP deciding to refocus its energy on 2017 Plan of Winning Booths)
Published On - 12:49 pm, Wed, 23 June 21