ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ
Baghpat Chacha: ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್ಪತ್ನಲ್ಲಿ ಚಾಟ್ ಮಾರಾಟಗಾರರಾಗಿದ್ದಾರೆ.
ಉತ್ತರ ಪ್ರದೇಶದ ಬಾಗ್ಪತ್ ರಸ್ತೆಯಲ್ಲಿ ಚಾಟ್ ಮಾರುವವರ ನಡುವೆ ನಡೆದ ಮಾರಾಮಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪರಸ್ಪರ ಕೋಲುಗಳಿಂದ ಬಾರಿಸುತ್ತಾ, ಕಾಲು ಹಿಡಿದು ಎಳೆದಾಡಿ ಹೊಡೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಈ ವಿಡಿಯೊದಲ್ಲಿ ಕೆಂಪು ಬಣ್ಣದ ಕೂದಲಿರುವ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಬಡಿಗೆಯಿಂದ ಬಡಿಯುತ್ತಿರುವುದು ಕಾಣುತ್ತದೆ. ಸ್ಪಲ್ಪ ಹೊತ್ತಿನ ನಂತರ ಅವರು ನೆಲಕ್ಕೆ ಬಿದ್ದಾಗ ಅಲ್ಲಿಂದಲೇ ಇನ್ನೊಬ್ಬನಿಗೆ ಏಟು ನೀಡಿ ಮತ್ತೆ ಎದ್ದು ನಿಂತು ಜಗಳ ಮುಂದುವರಿಸುತ್ತಾರೆ. ಹಾಡಹಗಲೇ ನಡೆದ ಈ ಬೀದಿಜಗಳದ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಂಪುಗೂದಲಿನ ಆ ವ್ಯಕ್ತಿ ಮೀಮ್ ಗೆ ಆಹಾರವಾಗಿದ್ದಾರೆ. ನೆಟ್ಟಿಗರು ಈ ವ್ಯಕ್ತಿಯನ್ನು ಚಾಚಾ (ಮಾವ) ಎಂದು ಕರೆದು ತರಹೇವಾರಿ ಮೀಮ್ಗಳನ್ನು ಹರಿಬಿಟ್ಟಿದ್ದಾರೆ.
ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್ಪತ್ನಲ್ಲಿ ಚಾಟ್ ಮಾರಾಟಗಾರರಾಗಿದ್ದಾರೆ. ಪೊಲೀಸರ ಪ್ರಕಾರ ಬಾಗ್ಪತ್ನ ಬರೂತ್ ಪ್ರದೇಶದಲ್ಲಿರುವ ಚಾಟ್ ಮಾರುವವರ ಎರಡು ಗುಂಪುಗಳ ನಡುವೆ ಈ ಜಗಳ ನಡೆದಿದೆ. ಈ ಬೀದಿ ಜಗಳದಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಜನರ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
Chat Fight in Bhagpat, UP. Someone has added music. This is straight out of a 90s Bollywood film. pic.twitter.com/mtlebgAie0
— Aditya Raj Kaul (@AdityaRajKaul) February 22, 2021
#UPDATE | Eight people have been arrested in connection with the clash that broke out between two groups of shopkeepers in Baraut area of Baghpat earlier today: Baghpat Police pic.twitter.com/xwoGVBEGav
— ANI UP (@ANINewsUP) February 22, 2021
ಸಾಮಾಜಿಕ ಮಾಧ್ಯಮಗಲ್ಲಿ ಚಾಚಾ ಮೀಮ್
Normalcy returns in Baghpat, chacha on his way to collect Drona Award from city SP office. pic.twitter.com/CKStIHfPd5
— Rofl Gandhi 2.0 ?? (@RoflGandhi_) February 23, 2021
Chaat fighters of Baghpat have won 2021 #Bhagpat #chaat #chacha pic.twitter.com/J8k63fRxMQ
— Hemant Kumar ?? (@Hemantkumar398) February 23, 2021
When teacher When she’s leaves class back after 5min pic.twitter.com/dJSeRDwbjl
— ?。☆✼★?????★✼☆。? (@RebelGeek1111) February 22, 2021
When teacher When she’s leaves class back after 5min pic.twitter.com/dJSeRDwbjl
— ?。☆✼★?????★✼☆。? (@RebelGeek1111) February 22, 2021
ಯಾರು ಈ ಚಾಚಾ ? ಎಎನ್ಐ ಸುದ್ದಿಸಂಸ್ಥೆ ಪ್ರಕಾರ 40 ವರ್ಷಗಳಿಂದ ಹರಿಂದರ್ ಚಾಟ್ ಮಾರಾಟಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವ್ಯಾಪಾರ ಕುಸಿದಿದೆ. ಇನ್ನೊಂದು ಕಡೆಯಲ್ಲಿರುವ ಚಾಟ್ ಮಾರಾಟಗಾರರು ತಮ್ಮ ಗ್ರಾಹಕರನ್ನು ಕಸಿದುಕೊಂಡಿದ್ದಾರೆ ಎಂದು ಚಾಟ್ ಮಾರಾಟಗಾರರು ಆರೋಪಿಸಿದ್ದರು. ಇನ್ನೊಂದು ತಂಡದವರು ನಮ್ಮ ಚಾಟ್ ಮಾರಾಟವಾಗದಂತೆ ಮಾಡಿ ಗ್ರಾಹಕರನ್ನು ತಮ್ಮಿಂದ ದೂರ ಮಾಡಿದ್ದಾರೆ ಎಂದು ಹರಿಂದರ್ ಹೇಳಿದ್ದಾರೆ.