AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಮದುವೆಯಾದ ಮರುದಿನವೇ ಗಂಡನ ಮನೆಯ ಲೂಟಿ ಮಾಡಿ ಆಭರಣಗಳ ಜತೆ ವಧು ಪರಾರಿ

ಮದುವೆಯಾದ ಮರು ದಿನವೇ ವಧು ಗಂಡನ ಮನೆಯನ್ನು ಲೂಟಿ ಮಾಡಿ, ಆಭರಣಗಳ ಜತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಮದುವೆಯಾದ ಐದು ದಿನಗಳ ನಂತರ ನವವಿವಾಹಿತ ಮಹಿಳೆಯೊಬ್ಬರು ತನ್ನ ಗಂಡನ ಮನೆಯಿಂದ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಬಸೋಲಿ ಗ್ರಾಮದಲ್ಲಿ ವರದಿಯಾದ ಘಟನೆಯಲ್ಲಿ, ದರೋಡೆ ನಡೆದ ರಾತ್ರಿ ಮಹಿಳೆ ತನ್ನ ಅತ್ತೆ-ಮಾವನಿಗೆ ಚಹಾ ಕುಡಿಸಿದ್ದಾಳೆ.

ಉತ್ತರ ಪ್ರದೇಶ: ಮದುವೆಯಾದ ಮರುದಿನವೇ ಗಂಡನ ಮನೆಯ ಲೂಟಿ ಮಾಡಿ ಆಭರಣಗಳ ಜತೆ ವಧು ಪರಾರಿ
ಮದುವೆ Image Credit source: IndiaFilings
ನಯನಾ ರಾಜೀವ್
|

Updated on: Mar 05, 2025 | 9:07 AM

Share

ಉತ್ತರಪ್ರದೇಶ, ಮಾರ್ಚ್​ 05: ಮದುವೆಯಾದ ಮರು ದಿನವೇ ವಧು ಗಂಡನ ಮನೆಯನ್ನು ಲೂಟಿ ಮಾಡಿ, ಆಭರಣಗಳ ಜತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಮದುವೆಯಾದ ಐದು ದಿನಗಳ ನಂತರ ನವವಿವಾಹಿತ ಮಹಿಳೆಯೊಬ್ಬರು ತನ್ನ ಗಂಡನ ಮನೆಯಿಂದ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ಬಸೋಲಿ ಗ್ರಾಮದಲ್ಲಿ ವರದಿಯಾದ ಘಟನೆಯಲ್ಲಿ, ದರೋಡೆ ನಡೆದ ರಾತ್ರಿ ಮಹಿಳೆ ತನ್ನ ಅತ್ತೆ-ಮಾವನಿಗೆ ಚಹಾ ಕುಡಿಸಿದ್ದಾಳೆ. ಮರುದಿನ, 3.15 ಲಕ್ಷ ರೂ. ಮತ್ತು ಆಭರಣಗಳು ಕಾಣೆಯಾಗಿರುವುದು ಕಂಡುಬಂದಿದೆ. ಈ ಪ್ರಕರಣದ ಕುರಿತು ಸಂತ್ರಸ್ತೆಯ ಕುಟುಂಬವು ಲಿಖಿತ ಪೊಲೀಸ್ ದೂರು ಸಲ್ಲಿಸಿದೆ.

ಮತ್ತೊಂದು ಘಟನೆ ಉತ್ತರ ಪ್ರದೇಶದ ಜಲೌನ್‌ನಲ್ಲಿ, ನವವಿವಾಹಿತ ವಧು ಮದುವೆಯ ನಂತರ ವರನೊಂದಿಗೆ ವಾಸಿಸಲು ನಿರಾಕರಿಸಿರುವ ಘಟನೆ ನಡೆದಿದೆ. ವಧು ತನ್ನ ಪ್ರಿಯಕರನೊಂದಿಗೆ ವಾಸಿಸಲು ಬಯಸಿದ್ದಳು ರಾತ್ರಿಯಿಡೀ ಇಬ್ಬರ ನಡುವೆ ಜಗಳ ನಡೆಯಿತು. ಬೆಳಗ್ಗೆ ಪಂಚಾಯತ್ ಕರೆಯಲಾಯಿತು. ವಧುವಿನ ತಾಯಿಯನ್ನೂ ಕರೆಸಲಾಯಿತು.

ಜಗಳ ಬಿಡಿಸಲು ಪೊಲೀಸರೂ ಬಂದರು. ಈ ಘಟನೆ ಜಿಲ್ಲೆಯ ಕುಥೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸ್ಥಳದ ನಿವಾಸಿ ಲಕ್ಷ್ಮಿಕಾಂತ್, ಫೆಬ್ರವರಿ 13 ರಂದು ಕುಥೌಂಡ್ ಪ್ರದೇಶದ ಛೋಟಿ ಸುರೌಲಿ ಗ್ರಾಮದ ನಿವಾಸಿ ನಿಕಿತಾ ಎಂಬ ಹುಡುಗಿಯನ್ನು ವಿವಾಹವಾದರು. ಮದುವೆಯ ಎಲ್ಲಾ ವಿಧಿವಿಧಾನಗಳು ಸಂಪ್ರದಾಯದಂತೆ ನಡೆದವು. ನಂತರ ನವವಿವಾಹಿತ ವಧು ನಿಕಿತಾ ಲಕ್ಷ್ಮಿಕಾಂತ್ ಜೊತೆ ತನ್ನ ಅತ್ತೆಯ ಮನೆಗೆ ತಲುಪಿದಳು.

ಮತ್ತಷ್ಟು ಓದಿ: Viral: 40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಮದುವೆಯಾದ ದಂಪತಿ; ಕಾರಣ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

ಇಲ್ಲಿ ಅವಳು ರಾತ್ರಿಯಲ್ಲಿ ತನ್ನ ಗಂಡನೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ಅವಳು ಅವನೊಂದಿಗೆ ವಾಸಿಸುವ ಬದಲು, ತನ್ನ ಪ್ರೇಮಿಯೊಂದಿಗೆ ವಾಸಿಸಲು ಇಷ್ಟಪಡುತ್ತೇನೆ ಎಂದು ಹೇಳಿದಳು. ಇಬ್ಬರ ನಡುವಿನ ವಿವಾದ ರಾತ್ರಿಯಿಡೀ ಮುಂದುವರೆಯಿತು, ನಂತರ ಮರುದಿನ ವಧು ನಿಕಿತಾಳ ತಾಯಿಗೆ ಕರೆ ಮಾಡಲಾಯಿತು.

ಕುಟುಂಬ ಮತ್ತು ಸಂಬಂಧಿಕರೊಂದಿಗೆ ಪಂಚಾಯತ್ ನಡೆಸಲಾಯಿತು, ಇದರಲ್ಲಿ ಎರಡೂ ಕಡೆಯ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ನವವಿವಾಹಿತ ವಧು ಮತ್ತು ಅವಳ ತಾಯಿ ಕಣ್ಮರೆಯಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ