Bulandshahr: ವೈದ್ಯರೊಬ್ಬರ ಎಂಟು ವರ್ಷದ ಮಗನ ಅಪಹರಣ, ಹತ್ಯೆ -ಕಾರಣ?

| Updated By: ಸಾಧು ಶ್ರೀನಾಥ್​

Updated on: Jan 31, 2022 | 10:03 AM

ಕಾಂಪೌಂಡರ್​​ಗಳಾಗಿ ಕೆಲಸ ಮಾಡುತ್ತಿದ್ದ ಆ ಇಬ್ಬರೂ 2 ವರ್ಷಗಳ ಹಿಂದೆ ಏನೋ ತಪ್ಪು ಮಾಡಿದರು ಎಂದು ವೈದ್ಯರು ಕೆಲಸದಿಂದ ತೆಗೆದುಹಾಕಿದ್ದರು. ಅದೇ ಆ ವೈದ್ಯರ ಪುತ್ರನ ಜೀವಕ್ಕೆ ಮುಂದೆ ಸಂಚಕಾರ ತಂದಿತು.

Bulandshahr: ವೈದ್ಯರೊಬ್ಬರ ಎಂಟು ವರ್ಷದ ಮಗನ ಅಪಹರಣ, ಹತ್ಯೆ -ಕಾರಣ?
ಪ್ರಾತಿನಿಧಿಕ ಚಿತ್ರ
Follow us on

ಬುಲಂದಷಹರ್: ಉತ್ತರ ಪ್ರದೇಶದಲ್ಲಿ ರಕ್ತ ಹರಿಯುವುದು ನಿಂತಿಲ್ಲ. ಖ್ಯಾತ ವೈದ್ಯರೊಬ್ಬರ 8 ವರ್ಷದ ಮಗನನ್ನು ಅಪಹರಣ ಮಾಡಿ (Abduction), ಹತ್ಯೆ ಮಾಡಲಾಗಿದೆ (murder). ಕಾರಣ ಇನ್ನೂ ಘೋರ. ಶುಕ್ರವಾರ ಸಂಜೆ ತಮ್ಮ ಪುತ್ರ ನಾಪತ್ತೆಯಾಗುತ್ತಿದ್ದಂತೆ ಸದರಿ ವೈದ್ಯರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ತಡಮಾಡದೆ ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ ಎರಡು ದಿನಗಳ ಬಳಿಕ 8 ವರ್ಷದ ವೈದ್ಯರ ಮಗನ ಹೆಣ ಪತ್ತೆಯಾಗಿದೆ. ಛಠಾರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಏನಾಗಿತ್ತೆಂದರೆ ನಿಜಾಮ್ ಮತ್ತು ಶಹೀದ್​ ಎಂಬಿಬ್ಬರನ್ನು ವೈದ್ಯರು ಕೆಲಸಕ್ಕೆಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಅವರಿಬ್ಬರೂ ಹೇಯ ಕೃತ್ಯವೆಸಗಿ, ಸೇಡು ತೀರಿಸಿಕೊಂಡಿದ್ದಾರೆ ಎಂದು ದೇವಾಯಿ ಸರ್ಕಲ್​ ಇನ್ಸ್​ಪೆಕ್ಟರ್​ ವಂದನಾ ಶರ್ಮಾ (Debai Circle Officer Vandana Sharma) ಹೇಳಿದ್ದಾರೆ.

ಪುತ್ರ ನಾಪತ್ತೆಯಾಗುತ್ತಿದ್ದಂತೆ ಸದರಿ ವೈದ್ಯರು ತಕ್ಷಣವೇ ನಮ್ಮ ಗಮನಕ್ಕೆ ತಂದರು. ನಾವೂ ಪ್ರಾಂಪ್ಟ್​ ಆಗಿ ಕಾರ್ಯಾಚರಣೆಗೆ ಇಳಿದೆವು. ಪ್ರಾಥಮಿಕ ತನಿಖೆ ಮಾಡುತ್ತಿದ್ದಂತೆ ಒಂದಷ್ಟು ಸುಳಿವುಗಳು ದೊರೆತವು. ಅದನ್ನ ಆಧರಿಸಿ ಅವರಿಬ್ಬರೂ ಕೆಲಸಗಾರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆವು. ನೀವೇ ಏನಾದರೂ ಅಪಹರಣ ಮಾಡಿದಿರಾ ಎಂದು ಉಚ್ಛಾಟಿತ ಆ ಇಬ್ಬರೂ ಕಾಂಪೌಂಡರ್​​ಗಳನ್ನು ಪ್ರಶ್ನಿಸತೊಡಗಿದೆವು. ಪೊಲೀಸ್​ ಒತ್ತಡ ಹೆಚ್ಚಾಗುತ್ತಿದ್ದಂತೆ ಯಸ್ ನಾವೇ ಅಪಹರಣ ಮಾಡಿ, ಸಾಯಿಸಿದೆವು ಎಂದು ತಪ್ಪೊಪ್ಪಿಕೊಂಡರು. ವೈದ್ಯರ ಮೇಲಿನ ಹಗೆಯಿಂದ ಇಂತಾ ಕೆಲಸ ಮಾಡಿದೆವು ಎಂದು ಹೇಳತೊಡಗಿದರು ಎಂದು ಸರ್ಕಲ್​ ಇನ್ಸ್​ಪೆಕ್ಟರ್​ ವಂದನಾ ಹೇಳಿದ್ದಾರೆ. ಆರೋಪಿಗಳು ತೋರಿಸಿದ ಜಾಗಕ್ಕೆ ಪೊಲೀಸ್​ ತಂಡ ಹೋದಾಗ ಬಾಲಕನ ಶವ ಪತ್ತೆಯಾಯಿತು ಎಂದು ಇನ್ಸ್​ಪೆಕ್ಟರ್​ ವಂದನಾ ಹೇಳಿದ್ದಾರೆ.

ಇಷ್ಟಕ್ಕೂ ಕಾಂಪೌಂಡರ್​​ಗಳಾಗಿ ಕೆಲಸ ಮಾಡುತ್ತಿದ್ದ ಆ ಇಬ್ಬರೂ 2 ವರ್ಷಗಳ ಹಿಂದೆ ಏನೋ ತಪ್ಪು ಮಾಡಿದರು ಎಂದು ವೈದ್ಯರು ಕೆಲಸದಿಂದ ತೆಗೆದುಹಾಕಿದ್ದರು. ಅದೇ ಆ ವೈದ್ಯರ ಪುತ್ರನ ಜೀವಕ್ಕೆ ಮುಂದೆ ಸಂಚಕಾರ ತಂದಿತು.

ಮೈಸೂರು: ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ
ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಬೈಕ್‌ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ತಂದೆ, ಮಗನಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಮಹಿಳೆ ಪಾರಾಗಿದ್ದಾರೆ. ಹಲ್ಲೆಯಲ್ಲಿ ಶಿವಪ್ಪ(45), ಮಗ ಶರತ್(20)ಗೆ ಗಾಯಗಳಾಗಿವೆ. ಲೋಹಿತ್‌ ಕುಮಾರ್, ಪರಶಿವಮೂರ್ತಿ ಎಂಬುವವರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ವಿವಾಹಿತ ಮಹಿಳೆ ಜೊತೆ ಹಲ್ಲೆಗೊಳಗಾದ ಶರತ್ಗೆ ಅಕ್ರಮ ಸಂಬಂಧವಿದೆ ಎಂದು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಶರತ್ಗೆ ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧವಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಲವು ಬಾರಿ ರಾಜಿ ಪಂಚಾಯಿತಿ ಆಗಿತ್ತು. ಆದ್ರೆ ತಂದೆ, ಮಗ, ಮಹಿಳೆ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದಾಗ ಲೋಹಿತ್‌ ಕುಮಾರ್, ಪರಶಿವಮೂರ್ತಿ ಎಂಬುವವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಚ್ಚಿನಿಂದ ಆರೋಪಿಗಳು ಹಲ್ಲೆ ಮಾಡಿರುವುದರಿಂದ ತಂದೆ, ಮಗನಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ; ಬೈಕ್ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ

Published On - 9:52 am, Mon, 31 January 22