ಆನ್ಲೈನ್ ಮೀಟಿಂಗ್ ಒಂದರಲ್ಲಿ ಶರ್ಟ್ ಧರಿಸದೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ, ಶಿಕ್ಷಣ ಇಲಾಖೆಯ ಸಭೆ ಎಂದರೆ ಎಷ್ಟು ಶಿಸ್ತಿನಿಂದಿರಬೇಕು ಆದರೆ ಅಧಿಕಾರಿನ ಅಶಿಸ್ತಿನ ವರ್ತನೆಯು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ. ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಅವರು ಶೀಘ್ರ ಕ್ರಮ ಕೈಗೊಂಡು ವಿಡಿಯೋ ಕಾನ್ಫರೆನ್ಸ್ ವೇಳೆ ಶರ್ಟ್ ಧರಿಸಿದೆ ಇದ್ದಿದ್ದಕ್ಕೆ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ವಿಜಯ್ ಕಿರಣ್ ಆನಂದ್ ಅವರು ವಿವಿಧ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೊಂದಿಗೆ ಇಲಾಖಾ ಯೋಜನೆಗಳ ಪ್ರಗತಿ ಕುರಿತು ಚರ್ಚಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮತ್ತಷ್ಟು ಓದಿ: Viral Video: ಎಚ್ಡಿಎಫ್ಸಿ ಆನ್ಲೈನ್ ಮೀಟಿಂಗ್ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು
ವರ್ಚುವಲ್ ಸಭೆಯಲ್ಲಿ ಶಿಕ್ಷಣ ಅಧಿಕಾರಿಯ ಈ ಅವತಾರವು ಉಳಿದ ಅಧಿಕಾರಿಗೆ ಇರಿಸುಮುರಿಸು ಉಂಟು ಮಾಡಿತು. ಅಧಿಕಾರಿ ಯಾವ ಜಿಲ್ಲೆಯವರು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ