ಕಾನ್ಪುರದಲ್ಲಿ ರೈಲು ಹಳಿ ತಪ್ಪಿಸುವ ಯತ್ನ, ಹಳಿಯಲ್ಲಿ ಸಿಲಿಂಡರ್​ ಪತ್ತೆ

|

Updated on: Sep 22, 2024 | 11:17 AM

ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದಿದೆ. ಕಾನ್ಪುರದಿಂದ ಫತೇಪುರ್‌ಗೆ ಬರುತ್ತಿದ್ದ ದೆಹಲಿ ಹೌರಾ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು. ಕಾನ್ಪುರದ ಪ್ರೇಂಪುರ ರೈಲು ನಿಲ್ದಾಣದ ಬಳಿ ಲೂಪ್ ಲೈನ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಇರಿಸಲಾಗಿತ್ತು. ಬೆಳಗ್ಗೆ 5.50ಕ್ಕೆ ಈ ಘಟನೆ ನಡೆದಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸಿದರು.

ಕಾನ್ಪುರದಲ್ಲಿ ರೈಲು ಹಳಿ ತಪ್ಪಿಸುವ ಯತ್ನ, ಹಳಿಯಲ್ಲಿ ಸಿಲಿಂಡರ್​ ಪತ್ತೆ
ರೈಲು
Follow us on

ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದಿದೆ.
ಕಾನ್ಪುರದಿಂದ ಫತೇಪುರ್‌ಗೆ ಬರುತ್ತಿದ್ದ ದೆಹಲಿ ಹೌರಾ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು.
ಕಾನ್ಪುರದ ಪ್ರೇಂಪುರ ರೈಲು ನಿಲ್ದಾಣದ ಬಳಿ ಲೂಪ್ ಲೈನ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಇರಿಸಲಾಗಿತ್ತು. ಬೆಳಗ್ಗೆ 5.50ಕ್ಕೆ ಈ ಘಟನೆ ನಡೆದಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸಿದ್ದರು.

ರೈಲಿನಲ್ಲಿದ್ದ ರೈಲ್ವೆ ನೌಕರರು ಆರ್‌ಪಿಎಫ್ ಮತ್ತು ಇತರ ಇಲಾಖೆಯ ಜನರಿಗೆ ಮಾಹಿತಿ ನೀಡಿದರು. ರೈಲ್ವೆ ಹಳಿಯಲ್ಲಿ ಖಾಲಿ 5 ಕೆಜಿ ಸಿಲಿಂಡರ್ ಅನ್ನು ಇಡಲಾಗಿದೆ. ಪೈಲಟ್ ಮತ್ತು ಸಹಾಯಕ ಪೈಲಟ್ ಎಚ್ಚರಿಕೆಯಿಂದಾಗಿ ರೈಲನ್ನು ಉರುಳಿಸುವ ಸಂಚು ವಿಫಲವಾಗಿದೆ. ಈ ಘಟನೆ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಕುರಿತು ಉತ್ತರ ಮಧ್ಯ ರೈಲ್ವೆ ವಲಯದ ಪ್ರಯಾಗ್‌ರಾಜ್ ವಿಭಾಗದ ಪಿಆರ್‌ಒ ಅಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಕಾನ್ಪುರದಲ್ಲಿ ಎರಡು ಬಾರಿ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಒಮ್ಮೆ ಟ್ರ್ಯಾಕ್ ಮೇಲೆ ಟ್ರಕ್ ಪಲ್ಟಿಯಾಗಿತ್ತು. ಕಳೆದ ತಿಂಗಳು, ಹಳಿ ಮೇಲೆ ಬಂಡೆಯನ್ನು ಇರಿಸಲಾಗಿತ್ತು, ನಂತರ ರೈಲಿನ 22 ಬೋಗಿಗಳು ಹಳಿತಪ್ಪಿದವು. ಈ ಅವಘಡವೂ ರಾತ್ರಿ ವೇಳೆ ಸಂಭವಿಸಿದೆ. ಆದರೆ, ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಮತ್ತಷ್ಟು ಓದಿ: ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ, ಉತ್ತರಾಖಂಡದಲ್ಲಿ ರೈಲು ಹಳಿ ತಪ್ಪಿಸುವ ಯತ್ನ

ರಾಜಸ್ಥಾನದ ಅಜ್ಮೀರ್ ನಲ್ಲಿ ದುಷ್ಕರ್ಮಿಗಳು ರೈಲು ಹಳಿಗಳ ಮೇಲೆ ಸಿಮೆಂಟ್‌ ಬ್ಲಾಕ್‌ಗಳನ್ನು ಇರಿಸಿ, ರೈಲು ಹಳಿ ತಪ್ಪಿಸುವ ಯತ್ನ ನಡೆಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಅಜ್ಮೀರ್​ನ ಪಶ್ಚಿಮ ಮೀಸಲು ಸರಕು ಸಾಗಣೆ ಕಾರಿಡಾರ್‌ನ ರೈಲು ಹಳಿಗಳ ಮೇಲೆ ದೊಡ್ಡ ಗಾತ್ರದ ಎರಡು ಸಿಮೆಂಟ್‌ ಬ್ಲಾಕ್‌ಗಳು ಪತ್ತೆಯಾಗಿದ್ದವು. ಇದನ್ನು ಮೊದಲೇ ಇಲಾಖೆ ಸಿಬಂದಿ ಗಮನಿಸಿ, ರೈಲು ಹಳಿಗಳಿಂದ ತೆರವುಗೊಳಿಸಿದ್ದರಿಂದಾಗಿ ಇಲ್ಲೂ ಭಾರೀ ಅಪಘಾತವೊಂದು ತಪ್ಪಿತ್ತು.

ಉತ್ತರಾಖಂಡದಲ್ಲಿ ಕಿಡಿಗೇಡಿಗಳು ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ. ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಇರಿಸಿದ್ದರು. ಉತ್ತರ ಪ್ರದೇಶ ಉತ್ತರಾಖಂಡ ಗಡಿಯಲ್ಲಿರುವ ಬಿಲಾಸ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವೊಂದು ಪತ್ತೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಲಿಗಾಗಿ ಇಲ್ಲಿ ಕ್ಲಿಕ್ ಮಾಡಿ