ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿ ಐವಿ ಡ್ರಿಪ್‍ನಲ್ಲಿ ರಕ್ತದ ಬದಲು ಮೊಸಂಬಿ ಜ್ಯೂಸ್ ನೀಡಿದ್ದು, ಡೆಂಗ್ಯೂ ರೋಗಿಯೊಬ್ಬ ಮೃತಪಟ್ಟಿದ್ದಾರೆ. ಇದೀಗ ಆಸ್ಪತ್ರೆ ಕಟ್ಟಡವು ಅಕ್ರಮ ಎಂದು ತಿಳಿದುಬಂದಿದ್ದು, ತೆರವಿಗೆ ನೋಟಿಸ್ ನೀಡಲಾಗಿದೆ.
ಪ್ರಯಾಗ್ರಾಜ್ನಲ್ಲಿರುವ ಗ್ಲೋಬಲ್ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ಗೆ ಡೆಮಾಲಿಷನ್ ನೋಟಿಸ್ ಜಾರಿಗೊಳಿಸಲಾಗಿದೆ.
ಅನುಮತಿ ಪಡೆಯದೇ ಆಸ್ಪತ್ರೆ ನಿರ್ಮಿಸಲಾಗಿದ್ದು, ಶುಕ್ರವಾರದೊಳಗೆ ಆಸ್ಪತ್ರೆಯನ್ನು ತೆರವುಗೊಳಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಅಧಿಕಾರಿಗಳ ಲೋಪ ಸಾಬೀತಾದ ಬಳಿಕ ಕಳೆದ ವಾರ ಆಸ್ಪತ್ರೆಯನ್ನು ಮುಚ್ಚಲಾಗಿತ್ತು.
ಈ ಬಗ್ಗೆ ಹಿಂದಿನ ನೋಟಿಸ್ಗೆ ಅಧಿಕಾರಿಗಳು ಉತ್ತರ ನೀಡಿರಲಿಲ್ಲ, ಈ ವರ್ಷದ ಆರಂಭದಲ್ಲಿ ಕಟ್ಟಡವನ್ನು ನೆಲಸಮ ಮಾಡಲು ಆದೇಶ ನೀಡಲಾಗಿದೆ.
ವೈದ್ಯರು ರಕ್ತದ ಪ್ಲಾಸ್ಮಾ ಅಗತ್ಯವಿರುವ ರೋಗಿಗಳಿಗೆ ನೀಡುವ ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಡೆಂಗ್ಯೂ ರೋಗಿಗೆ ನೀಡಿದ್ದ ರಕ್ತದ ಪ್ಯಾಕ್ ಅನ್ನು ಹಿಡಿದುಕೊಂಡಿದ್ದು, ಅದನ್ನು ಹಿಂತಿರುಗಿಸಿ ತೋರಿಸಿದಾಗ ಅದರಲ್ಲಿ ರಕ್ತದ ಬದಲು ಮೊಸಂಬಿ ಜ್ಯೂಸ್ ಇರುವುದನ್ನು ನೀವು ಕಾಣಬಹುದಾಗಿದೆ.
Vedank Singh ಎಂಬುವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಪ್ರಯಾಗ್‍ರಾಜ್‍ನಲ್ಲಿ ಮಾನವೀಯತೆಯೇ ತಲೆತಗ್ಗಿಸುವ ಘಟನೆ ನಡೆದಿದೆ.
ಝಲ್ವಾದ ಗ್ಲೋಬಲ್ ಆಸ್ಪತ್ರೆಯು ಡೆಂಗ್ಯೂ ರೋಗಿ ಪ್ರದೀಪ್ ಪಾಂಡೆಗೆ ಪ್ಲೇಟ್‌ಲೆಟ್ ಬದಲಿಗೆ ಮೊಸಂಬಿ ಜ್ಯೂಸ್ ನೀಡಿದೆ ಎಂದು ಕುಟುಂಬವೊಂದು ಆರೋಪಿಸಿತ್ತು. ರೋಗಿಯು ಸಾವನ್ನಪ್ಪಿದ್ದಾನೆ. ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Wed, 26 October 22