ಉತ್ತರಾಖಂಡ್ ಕೊಲೆ ಪ್ರಕರಣ; ನೀರಿನಲ್ಲಿ ಮುಳುಗಿ ಯುವತಿಯ ಸಾವು ಸಂಭವಿಸಿದೆ: ಮರಣೋತ್ತರ ಪರೀಕ್ಷೆ ವರದಿ

19 ವರ್ಷದ ರಿಸೆಪ್ಶನಿಸ್ಟ್ ಅಂಕಿತ ಭಂಡಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ದೇಹದ ಮೇಲೆ 4-5 ಗಾಯದ ಗುರುತುಗಳಿವೆ ಎಂದು ವರದಿ ಹೇಳಿದೆ. 

ಉತ್ತರಾಖಂಡ್ ಕೊಲೆ ಪ್ರಕರಣ; ನೀರಿನಲ್ಲಿ ಮುಳುಗಿ ಯುವತಿಯ ಸಾವು ಸಂಭವಿಸಿದೆ: ಮರಣೋತ್ತರ ಪರೀಕ್ಷೆ ವರದಿ
TV9kannada Web Team

| Edited By: Rashmi Kallakatta

Sep 26, 2022 | 8:52 PM

ಉತ್ತರಾಖಂಡ್ (Uttarakhand) ರೆಸಾರ್ಟ್​​ನಲ್ಲಿ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಅಂತಿಮ ಮರಣೋತ್ತರ ಪರೀಕ್ಷೆ (final autopsy) ವರದಿ ಬಂದಿದ್ದು  ನೀರಿನಲ್ಲಿ ಮುಳುಗಿ ಯುವತಿಯ ಸಾವು ಸಂಭವಿಸಿದೆ ಎಂದು ಹೇಳಿದೆ. 19 ವರ್ಷದ ರಿಸೆಪ್ಶನಿಸ್ಟ್ ಅಂಕಿತ ಭಂಡಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ದೇಹದ ಮೇಲೆ 4-5 ಗಾಯದ ಗುರುತುಗಳಿವೆ ಎಂದು ವರದಿ ಹೇಳಿದೆ. ಇದೀಗ ಉಚ್ಛಾಟಿತ ಬಿಜೆಪಿ ನಾಯಕನ ಮಾಲೀಕತ್ವದ ಪೌರಿ ಜಿಲ್ಲೆಯ ವನಂತರಾ ರೆಸಾರ್ಟ್‌ನಲ್ಲಿ ಅಂಕಿತಾ ಕೆಲಸ ಮಾಡುತ್ತಿದ್ದರು. ಬಿಜೆಪಿ ಉಚ್ಛಾಟಿತ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಮಹಿಳೆಯ ಶವವ ಸೆಪ್ಟೆಂಬರ್ 24 ರಂದು ರಿಷಿಕೇಶದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಕೋಪಗೊಂಡ ಸ್ಥಳೀಯರು ರೆಸಾರ್ಟ್‌ಗೆ ಬೆಂಕಿ ಹಚ್ಚಿದ್ದರು. ಅದಕ್ಕೂ ಮೊದಲು, ರೆಸಾರ್ಟ್‌ನ ಭಾಗಗಳನ್ನು ಸ್ಥಳೀಯ ಅಧಿಕಾರಿಗಳು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡು ಬುಲ್ಡೋಜರ್‌ ಬಳಸಿ ನೆಲಸಮ ಮಾಡಿದ್ದರು.  ನಿಧಾನಗತಿಯ ಕ್ರಮಕ್ಕಾಗಿ ಪೊಲೀಸರ ವಿರುದ್ಧ ಭಾರೀ ಪ್ರತಿಭಟನೆಗಳ ನಡುವೆ ಅಂಕಿತಾಳ  ಅಂತ್ಯಸಂಸ್ಕಾರ ನಿನ್ನೆ  ನಡೆದಿದೆ. ಪ್ರಕರಣದಲ್ಲಿ ಸರ್ಕಾರದ ಕ್ರಮದ ಬಗ್ಗೆಯೂ ಕುಟುಂಬದವರು ಪ್ರಶ್ನೆಗಳನ್ನು ಎತ್ತಿದ್ದರು.

ಆಕೆ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಕೆಡವಿದ್ದನ್ನು ಪ್ರಶ್ನಿಸಿ ಕುಟುಂಬ ಮತ್ತು ಪ್ರತಿಭಟನಾಕಾರರು ಶವವನ್ನು ಅಂತ್ಯಸಂಸ್ಕಾರ ಮಾಡಲು ಆರಂಭದಲ್ಲಿ ನಿರಾಕರಿಸಿದ್ದರು. ಬಿಜೆಪಿಯ ಹಿರಿಯ ನಾಯಕರೊಬ್ಬರ ಪುತ್ರನನ್ನು ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಅವಳನ್ನು ನೋಡಲು ಬಿಡಲಿಲ್ಲ: ಅಂಕಿತಾಳ ಅಮ್ಮ

ತನ್ನ ಮಗಳನ್ನು ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದು, ಆಕೆಯ ಶವವನ್ನು ನೋಡಲೇ ಇಲ್ಲ ಎಂದು ಅಂಕಿತಾಳ ಅಮ್ಮ ಹೇಳಿದ್ದಾರೆ. ತನ್ನನ್ನು ತನ್ನ ಮಗಳ ಬಳಿಗೆ ಕರೆದೊಯ್ಯುವ ನೆಪದಲ್ಲಿ ಆಡಳಿತವು ತನ್ನನ್ನು ಆಸ್ಪತ್ರೆಗೆ ಕರೆದೊಯ್ದು  ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ತಾಯಿ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಈ ಹಿಂದೆ ಸುದ್ದಿ ವರದಿಗಳು ತಿಳಿಸಿದ್ದವು. ಆದರೆ, ಇದೀಗ ವಿಡಿಯೊವೊಂದು ಹೊರಬಿದ್ದಿದ್ದು, ಆಕೆ ತಾನು ಆರೋಗ್ಯವಾಗಿರುವುದಾಗಿ ಹೇಳಿಕೊಂಡಿದ್ದು, ಸುಳ್ಳು ನೆಪದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ.

“ನನ್ನ ಪತಿಯನ್ನು ಬಲವಂತವಾಗಿ ಕರೆದೊಯ್ದರು, ಆದರೆ ನನ್ನನ್ನು ಕರೆದುಕೊಂಡು ಹೋಗಲಿಲ್ಲ, ಅವರು ನನ್ನ ಮಗಳನ್ನು ತೋರಿಸುತ್ತೇನೆ ಎಂದು ಹೇಳಿ  ಇಲ್ಲಿಗೆ ಕರೆತಂದರು ಎಂದು  ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ ವಿಡಿಯೊದಲ್ಲಿ ಅವರು ಹೇಳಿದ್ದಾರೆ.

ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದಾಗ ಅವರು  ಮಗಳ ಬಳಿಗೆ ಕರೆದೊಯ್ಯುತ್ತಿದ್ದಾರೆ ಎಂದು ಹೇಳಿ ಸಮಾಧಾನಪಡಿಸಿದರು.

“ಆಮೇಲೆ ವೈದ್ಯರು ನನ್ನನ್ನು ಗಾಲಿಕುರ್ಚಿಯಲ್ಲಿ ಕೂರಿಸಿದರು. ಇದು ಏಕೆ ಬೇಕು ಎಂದು ನಾನು ಕೇಳಿದೆ.  ಅವರು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅವರು ಬಲವಂತವಾಗಿ ಡ್ರಿಪ್ ಹಾಕಿ ವಿಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದರು” ಎಂದು ಅವರು ಹೇಳಿದರು.

ನಾಲ್ಕೈದು ಜನರು ತನ್ನ ಬಳಿಗೆ ಬಂದಿದ್ದಾರೆ. ಅವರು ನನ್ನನ್ನು ದಹನ ಸ್ಥಳಕ್ಕೆ ಕರೆದೊಯ್ಯುವುದಾಗಿ ಹೇಳಿದರು. “ನಾನು ಅವಳ ತಾಯಿ ಎಂದು ನಾನು ಹೇಳಿದೆ, ನಾನು ಅವಳನ್ನು ನೋಡುವವರೆಗೂ ನಾನು ಏನನ್ನೂ ಮಾಡುವುದಿಲ್ಲ, ನೀವು ನನ್ನ ಮಗಳನ್ನು ನನಗೆ ತೋರಿಸುವವರೆಗೆ ನಾನು ಬಗ್ಗುವುದಿಲ್ಲ ಎಂದು ನಾನು ಹೇಳಿದೆ. ನನಗೆ ಸ್ವಲ್ಪವೂ ಅನಾರೋಗ್ಯವಿಲ್ಲ. ಅವರು ನನ್ನನ್ನು ಮೋಸದಿಂದ ಕರೆದುಕೊಂಡು ಬಂದಿದ್ದಾರೆ ಎಂದು ಅಂಕಿತಾಳ ತಾಯಿ ಕಣ್ಣೀರು ಹಾಕಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada