ಉತ್ತರಾಖಂಡ ಸುರಂಗ ಕುಸಿತ: ರಕ್ಷಣಾ ತಂಡಗಳ ಮೇಲೆ ಒತ್ತಡ ಹೇರದಂತೆ NDMA ಎಚ್ಚರಿಕೆ

Uttarakhand tunnel collapse: ಉತ್ತರಾಖಂಡ ಸುರಂಗ ಕುಸಿತ ಸಂಭವಿಸಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ರಕ್ಷಣಾ ಕಾರ್ಯಕರ್ತರ ಮೇಲೆ ಒತ್ತಡ ಹೇರಬೇಡಿ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಇಂದು ಸಂಜೆ ಅಲ್ಲದಿದ್ದರೆ ನಾಳೆ ಹೊತ್ತಿಗೆ ಸಿಲುಕಿರುವ ಕಾರ್ಮಿಕರನ್ನು ಹೊರತೆಗೆಯುವ ನಿರೀಕ್ಷೆ ಇದೆ.

ಉತ್ತರಾಖಂಡ ಸುರಂಗ ಕುಸಿತ: ರಕ್ಷಣಾ ತಂಡಗಳ ಮೇಲೆ ಒತ್ತಡ ಹೇರದಂತೆ NDMA ಎಚ್ಚರಿಕೆ
ಉತ್ತರಾಖಂಡ ಸುರಂಗ ಕುಸಿತ
Follow us
ರಶ್ಮಿ ಕಲ್ಲಕಟ್ಟ
|

Updated on:Nov 23, 2023 | 7:14 PM

ಉತ್ತರಕಾಶಿ ನವೆಂಬರ್ 23 : ಉತ್ತರಕಾಶಿಯಲ್ಲಿ ಭಾಗಶಃ ಕುಸಿದಿರುವ ಸುರಂಗದಲ್ಲಿ  (Uttarakhand tunnel collapse)ಸಿಲುಕಿರುವ 41 ಕಾರ್ಮಿಕರನ್ನು ತರಾತುರಿಯಲ್ಲಿ ರಕ್ಷಿಸುವ ನಿರೀಕ್ಷೆಯೊಂದಿಗೆ ರಕ್ಷಣಾ ತಂಡಗಳ ಮೇಲೆ ಒತ್ತಡ ಹೇರದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಹಿರಿಯ ಸದಸ್ಯರು ಗುರುವಾರ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್, ಸಿಕ್ಕಿಬಿದ್ದ ಕಾರ್ಮಿಕರು ಮತ್ತು ರಕ್ಷಕರು ಸಮಾನ ಅಪಾಯದಲ್ಲಿದ್ದಾರೆ ಮತ್ತು “ಮುಂದಿನ ಎರಡು ಗಂಟೆಗಳಲ್ಲಿ” ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯು ರಕ್ಷಣಾ ಕಾರ್ಯಕರ್ತರ ಮೇಲೆ ಒತ್ತಡವನ್ನು ಬೀರುತ್ತದೆ. ಈ ಒತ್ತಡವು ಅಪಾಯವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು.

ಇದೊಂದು ಸವಾಲಿನ ಕೆಲಸ. ಮುಂದಿನ ಎರಡು ಗಂಟೆಗಳಲ್ಲಿ ರಕ್ಷಣಾ ಕಾರ್ಯ ಮಾಡಲಾಗುತ್ತದೆ ಎಂದು ನಿರೀಕ್ಷಿಸುತ್ತಿರಲು, ಉದ್ಯೋಗಿಗಳ ಮೇಲೆ ಒತ್ತಡ ಹೇರುತ್ತದೆ. ಇದು ತಪ್ಪು. ಈ ಪರಿಸ್ಥಿತಿಯಲ್ಲಿ, ಸಿಕ್ಕಿಬಿದ್ದ ಕಾರ್ಮಿಕರು ಮತ್ತು ರಕ್ಷಣಾ ತಂಡ ಇಬ್ಬರೂ ಅಪಾಯದಲ್ಲಿದ್ದಾರೆ. ನಾವು ಎರಡೂ ಕಡೆಯ ಸುರಕ್ಷತೆಯನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.

ಆದಾಗ್ಯೂ, ಮುಂದಿನ ಕೆಲವು ಗಂಟೆಗಳಲ್ಲಿ ಅಥವಾ ನಾಳೆಯೊಳಗೆ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. “ಐದು ದಿಕ್ಕಿನ ವಿಧಾನವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಖ್ಯ ವಿಧಾನವೆಂದರೆ ಸಿಲ್ಕ್ಯಾರ ವಿಧಾನ. ನವೆಂಬರ್ 16 ರಿಂದ, ಪ್ರಗತಿ ಸಾಧಿಸಲಾಗಿದೆ, ಆದರೆ ಕೆಲವು ಅಡೆತಡೆಗಳು ಇದ್ದವು. ನವೆಂಬರ್ 22 ರಂದು, ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದು ಇದು ಮುಂದುವರಿಯುತ್ತಿದೆ . ಒಳ್ಳೆಯ ಸುದ್ದಿ. ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರು ಸುರಂಗದೊಳಗೆ 2 ಕಿಮೀ ಉದ್ದದ ಪ್ರದೇಶದಲ್ಲಿದ್ದಾರೆ ಎಂದು ಅವರು ಹೇಳಿದರು.

ಉತ್ತರಕಾಶಿ ಆಡಳಿತವು 41 ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಿದೆ. “41 ಆಂಬ್ಯುಲೆನ್ಸ್‌ಗಳಿದ್ದು 31 ಆಂಬ್ಯುಲೆನ್ಸ್‌ಗಳು ‘108’ ಆಗಿದ್ದರೆ ಇತರ 10 ಆಡಳಿತದಿಂದ ಒದಗಿಸಲಾಗಿದೆ. 31 ರಲ್ಲಿ 7 ALS, ಆದರೆ ಇತರವು BLS. ALS ಎಂದರೆ ಸುಧಾರಿತ ಜೀವನ ಬೆಂಬಲ ಮತ್ತು BLS ಮೂಲ ಜೀವನ ಬೆಂಬಲ . 27 ಆಂಬ್ಯುಲೆನ್ಸ್‌ಗಳು ಇಲ್ಲಿವೆ ಮತ್ತು ಸುರಂಗದ ಬಳಿ 5 ಆಂಬ್ಯುಲೆನ್ಸ್‌ಗಳಿವೆ. ಎಲ್ಲಾ ಆಂಬ್ಯುಲೆನ್ಸ್‌ಗಳು ಸುಸಜ್ಜಿತವಾಗಿವೆ, ಇದು ಮಿನಿ ಎಮರ್ಜೆನ್ಸಿಯಂತಿದೆ” ಎಂದು ಅಧಿಕಾರಿಯೊಬ್ಬರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡ್ ಸುರಂಗ ಕುಸಿತ: ಸಿಕ್ಕಿಬಿದ್ದ 41 ಕಾರ್ಮಿಕರಿಂದ ಕೇವಲ 12 ಮೀಟರ್ ದೂರದಲ್ಲಿ ರಕ್ಷಣಾ ತಂಡ 

ಏತನ್ಮಧ್ಯೆ, ಕಾರ್ಮಿಕರನ್ನು ಸುರಂಗದಿಂದ ಹೊರಗೆ ಕರೆದೊಯ್ಯಲು ಸುಮಾರು 15 ಗಂಟೆಗಳು ಬೇಕಾಗುತ್ತದೆ ಎಂದು ಪ್ರಧಾನಿ ಕಚೇರಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯಾವುದೇ ಅಡೆತಡೆಗಳು, ಬಂಡೆಗಳು ಅಥವಾ ಗರ್ಡರ್‌ಗಳು ಇಲ್ಲದಿದ್ದರೆ ದಿನದ ಅಂತ್ಯದ ವೇಳೆಗೆ ಕಾರ್ಯಾಚರಣೆ ಯಶಸ್ವಿಯಾಗಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥ ಅತುಲ್ ಕರ್ವಾಲ್ ಸುದ್ದಿಗಾರರಿಗೆ ತಿಳಿಸಿದರು.

ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಧಾಮಿ ಮಾತು

ಏತನ್ಮಧ್ಯೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಿಕ್ಕಿಬಿದ್ದ ಜನರೊಂದಿಗೆ ಮಾತನಾಡಿದ್ದಾರೆ ಮತ್ತು ಅವರನ್ನು ಶೀಘ್ರವಾಗಿ ರಕ್ಷಿಸುವ ಭರವಸೆ ನೀಡಿದರು.”ನಾವು ತುಂಬಾ ಆತ್ಮೀಯರಾಗಿದ್ದೇವೆ. ನೀವೆಲ್ಲರೂ ತುಂಬಾ ಧೈರ್ಯಶಾಲಿಯಾಗಿದ್ದೀರಿ. ಎಲ್ಲರೂ ನಿಮಗಾಗಿ ಪ್ರಾರ್ಥಿಸುತ್ತಿದ್ದಾರೆ” ಎಂದು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಿಕ್ಕಿಬಿದ್ದವರಲ್ಲಿ ಒಬ್ಬರಾದ ಗಬ್ಬರ್ ಸಿಂಗ್ ನೇಗಿಗೆ ವೈಯರ್ಡ್ ಸಂವಹನ ಲಿಂಕ್ ಮೂಲಕ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Thu, 23 November 23

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ