ಜಾಮೀನು ಪಡೆದು ಕಾನೂನು ಅಧ್ಯಯನ ಮಾಡಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿದ ಕೊಲೆ ಆರೋಪಿ

ಅಪರಾಧ ಮಾಡಿದವರು ಶಿಕ್ಷೆ ಅನುಭವಿಸುವುದೇನೋ ಸರಿ ಆದರೆ ಹಲವು ಮಂದಿ ತಮ್ಮದಲ್ಲದ ತಪ್ಪಿನಲ್ಲಿ ಸಿಲುಕಿಬಿಡುತ್ತಾರೆ. ಹಾಗೆಯೇ ಅಮಿತ್ ಚೌಧರಿ ಕೂಡ ತಾವು ತಪ್ಪು ಮಾಡದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಪಟ್ಟ ಕಟ್ಟಲಾಯಿತು.   18 ವರ್ಷ ವಯಸ್ಸಿನಲ್ಲಿಯೇ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದರು.

ಜಾಮೀನು ಪಡೆದು ಕಾನೂನು ಅಧ್ಯಯನ ಮಾಡಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿದ ಕೊಲೆ ಆರೋಪಿ
Follow us
ನಯನಾ ರಾಜೀವ್
|

Updated on: Dec 10, 2023 | 9:03 AM

ಮೀರತ್​, ಡಿಸೆಂಬರ್ 10:   ಅಪರಾಧ ಮಾಡಿದವರು ಶಿಕ್ಷೆ ಅನುಭವಿಸುವುದೇನೋ ಸರಿ ಆದರೆ ಹಲವು ಮಂದಿ ತಮ್ಮದಲ್ಲದ ತಪ್ಪಿನಲ್ಲಿ ಸಿಲುಕಿಬಿಡುತ್ತಾರೆ. ಹಾಗೆಯೇ ಅಮಿತ್ ಚೌಧರಿ(Amit Chaudhary) ಕೂಡ ತಾವು ತಪ್ಪು ಮಾಡದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಪಟ್ಟ ಕಟ್ಟಲಾಯಿತು.   18 ವರ್ಷ ವಯಸ್ಸಿನಲ್ಲಿಯೇ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದರು.

2011ರಲ್ಲಿ ಇಬ್ಬರು ಕಾನ್​ಸ್ಟೆಬಲ್​ಗಳನ್ನು ಕೊಂದು ಶಸ್ತ್ರಾಸ್ತ್ರಗಳನ್ನು ಕದ್ದ ಆರೋಪಿದಲ್ಲಿ ಚೌಧರಿಗೆ ಕೊಲೆ ಆರೋಪಿ ಹಾಗೂ ಗ್ಯಾಂಗ್​ಸ್ಟರ್ ಪಟ್ಟ ಕಟ್ಟಿದ್ದರು. ಅವರ ಭವಿಷ್ಯ ಅಲ್ಲಿಯೇ ನಿಂತುಬಿಟ್ಟಿತ್ತು.ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಅಪರಾಧಿಯನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದರು ಮತ್ತು ಘಟನೆ ನಡೆದಾಗ ಶಾಮ್ಲಿ ಜಿಲ್ಲೆಯಲ್ಲಿ ತನ್ನ ಸಹೋದರಿಯೊಂದಿಗೆ ಇದ್ದ ಅಮಿತ್ ನನ್ನು ಪ್ರಕರಣದ 17 ಆರೋಪಿಗಳಲ್ಲಿ ಒಬ್ಬನನ್ನಾಗಿ ಮಾಡಲಾಯಿತು.

ಕೊಲೆಯ ಸಂಚು ರೂಪಿಸಿದ ಕುಖ್ಯಾತ ಕೈಲ್ ಗ್ಯಾಂಗ್‌ನ ಭಾಗವೆಂದು ಆರೋಪಿಸಿ ಅವರನ್ನು ಜೈಲಿಗಟ್ಟಲಾಯಿತು. ಆದರೂ ಈ ಪರಿಸ್ಥಿತಿಯನ್ನು ಅಮಿತ್ ಪ್ರತಿಕೂಲ ಪರಿಸ್ಥಿತಿಯಾಗಿ ಬದಲಾಯಿಸಿಕೊಂಡರು. ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಅಧ್ಯಯನ ಮಾಡಿದರು.

ಅಮಿತ್ ಬಾಗ್​ಪ್​ನ ಕಿರ್ತಾಲ್​ ಗ್ರಾಮದ ರೈತರೊಬ್ಬರ ಮಗ, ಮುಜಾಫರ್​ನಗರದ ಜೈಲಿನಲ್ಲಿರುವಾಗ ಗ್ಯಾಂಗ್​ಸ್ಟರ್​​ಗಳು ಗ್ಯಾಂಗ್​ಗೆ ನನ್ನನ್ನು ಸೇರಿಸಿಕೊಳ್ಳಲು ಬಯಸಿದರು. ಆದರೆ ಜೈಲರ್ ಒಳ್ಳೆಯ ಸ್ವಭಾವದವರಾಗಿದ್ದ ಕಾರಣ ನನ್ನನ್ನು ಬೇರೊಂದು ಕಡೆ ಇರಿಸಿದ್ದರು.

ಮತ್ತಷ್ಟು ಓದಿ:  ಕೇರಳ: ಕೈಗಳಿಲ್ಲದಿದ್ದರೂ ಛಲಬಿಡದೆ, ಅಡೆತಡೆಗಳ ಮೀರಿ ಚಾಲನಾ ಪರವಾನಗಿ ಪಡೆದ ದಿಟ್ಟ ಮಹಿಳೆ

2013 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಚೌಧರಿ ತನ್ನನ್ನು ತಾನು ನಿರಪರಾಧಿ ಎಂದು ಘೋಷಿಸಲು ಬೇಕಾದ ಸಾಕ್ಷ್ಯಗಳನ್ನು ಕಲೆಹಾಕಲು ಶುರು ಮಾಡಿದರು. ಸಮಾಜದಲ್ಲಿ ಅವರ ಕುಟುಂಬವು ತಲೆ ಎತ್ತಿ ನಡೆಯುವಂತೆ ಮಾಡುವುದು ಅಮಿತ್ ಉದ್ದೇಶವಾಗಿತ್ತು. ಕಾನೂನು ಅಧ್ಯಯನ ಮಾಡಿದರು,ಬಿಎ, ಎಲ್​ಎಲ್​ಬಿ, ಎಲ್​ಎಲ್​ಎಂ ಮಾಡಿದರು, ಅಂತಿಮವಾಗಿ ಬಾರ್​ ಕೌನ್ಸಿಲ್​ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಬಳಿಕ ನ್ಯಾಯಾಲಯದಲ್ಲಿ ಅಮಿತ್ ತನ್ನ ಪರವಾಗಿಯೇ ವಾದ ಮಂಡಿಸಿದರು ಅಂತಿಮವಾಗಿ ಚೌಧರಿ ಸೇರಿದಂತೆ 13 ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಕಾನ್​ಸ್ಟೆಬಲ್​ಗಳಾದ ಕಿಶನ್​ಪಾಲ್ ಹಾಗೂ ಅಮಿತ್ ಕುಮಾರ್ ಅವರನ್ನು ಕೊಂದು ಅವರ ರೈಫಲ್​ಗಳನ್ನು ಲೂಟಿ ಮಾಡುವ ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿತ್ತು.

ಸುಮಿತ್ ಕೈಲ್, ನೀತು ಮತ್ತು ಧರ್ಮೇಂದ್ರ ಅವರು ನಿಜವಾದ ಅಪರಾಧಿಗಳು ಎಂದು ಸಾಬೀತಾದ ಪರಿಣಾಮ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಅಮಿತ್​ ಚೌಧರಿ ಸೈನ್ಯಕ್ಕೆ ಸೇರುವ ಕನಸ್ಸನ್ನು ಹೊತ್ತಿದ್ದರು, ಆದರೆ ಈ ಕೊಲೆ ಪ್ರಕರಣದಲ್ಲಿ ಸಿಲುಕಿ ಅವರ ಆಸೆ ಭಗ್ನಗೊಂಡಿತ್ತು.

ಮುಂದೆಯೂ ಕೂಡ ನ್ಯಾಯದ ಪರ ನಿಲ್ಲುತ್ತೇನೆ ನನ್ನಂತೆಯೇ ಅನ್ಯಾಯಕ್ಕೊಳಗಾದ ವ್ಯಕ್ತಿಯ ಜತೆಗೆ ನಿಂತು ಅವರಿಗೆ ಸಹಾಯ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ