AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳಿಗಳ ಮೇಲೆ ಬಿದ್ದಿದ್ದ ಸಿಮೆಂಟ್​ ಸ್ಲ್ಯಾಬ್​ಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು

ವಂದೇ ಭಾರತ್​ ರೈಲಿಗಿರುವ ಸಂಕಷ್ಟಗಳು ಒಂದೆರಡಲ್ಲ, ಇಂಥಾ ಘಟನೆಗಳು ಸಾಕಷ್ಟು ನಡೆದಿವೆ. ಕಲ್ಲು ತೂರಾಟ, ಹಳಿಗಳ ಮೇಲೆ ವಸ್ತುಗಳು ಕಾಣಿಸಿಕೊಳ್ಳುವುದೆಲ್ಲಾ ಸಾಮಾನ್ಯವಾಗಿದೆ. ಆದರೆ ಅದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬುದೇ ಸಮಾಧಾನ. ಹಳಿಗಳ ಮೇಲೆ ಹಾಕಿದ್ದ ಸಿಮೆಂಟ್​ ಸ್ಲ್ಯಾಬ್​ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ

ಹಳಿಗಳ ಮೇಲೆ ಬಿದ್ದಿದ್ದ ಸಿಮೆಂಟ್​ ಸ್ಲ್ಯಾಬ್​ಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು
ವಂದೇ ಭಾರತ್ ರೈಲುImage Credit source: Hindustan Times
ನಯನಾ ರಾಜೀವ್
|

Updated on: Aug 27, 2024 | 10:09 AM

Share

ಅಹಮದಾಬಾದ್-ಜೋಧ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ರೈಲ್ವೆ ಹಳಿಯಲ್ಲಿ ಹಾಕಲಾಗಿದ್ದ ಸಿಮೆಂಟ್ ಸ್ಲ್ಯಾಬ್​ಗೆ ಡಿಕ್ಕಿ ಹೊಡೆದಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಪಾಲಿ ಜಿಲ್ಲೆಯ ಜವಾಯಿ-ಬಿರೋಲಿಯಾ ವಿಭಾಗದ ನಡುವೆ ರೈಲು ಓಡುತ್ತಿದ್ದಾಗ ಎಂಜಿನ್‌ನ ಒಂದು ಭಾಗ ಸಿಮೆಂಟ್ ಚಪ್ಪಡಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವಾಯುವ್ಯ ರೈಲ್ವೇ ಸಿಪಿಆರ್‌ಒ ಶಶಿ ಕಿರಣ್ ಹೇಳಿಕೆಯಲ್ಲಿ ತಿಳಿಸಿದ್ದು, ಘಟನೆಯಿಂದಾಗಿ ರೈಲು ಎಂಟು ನಿಮಿಷ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಫಲ್ನಾ ಪ್ರದೇಶದ ಹಿರಿಯ ಸೆಕ್ಷನ್ ಇಂಜಿನಿಯರ್ (ಎಸ್‌ಎಸ್‌ಇ) ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಕಿರಣ್ ಹೇಳಿದ್ದಾರೆ.

ಸುಮೇರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಯಿ ಮತ್ತು ಬಿರೋಲಿಯಾ ನಡುವೆ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು-ಧಾರವಾಡ ವಂದೇ ಭಾರತ್​ ರೈಲು ತುಮಕೂರಲ್ಲೂ ನಿಲ್ಲುತ್ತೆ, ವೇಳಾಪಟ್ಟಿ ಇಲ್ಲಿದೆ

ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಬಳಸಲಾಗಿದ್ದ ಸಿಮೆಂಟ್ ಸ್ಲ್ಯಾಬ್‌ನ ತುಂಡುಗಳು ಟ್ರ್ಯಾಕ್‌ನಲ್ಲಿ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಅಹಮದಾಬಾದ್-ಜೋಧ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಚಲಿಸುತ್ತದೆ, ಸಾಬರಮತಿ ನಿಲ್ದಾಣದಿಂದ ಸಂಜೆ 4.45 ಕ್ಕೆ ಹೊರಟು ರಾತ್ರಿ 10.50 ಕ್ಕೆ ಜೋಧ್‌ಪುರ ತಲುಪುತ್ತದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಲೋಕೋಮೋಟಿವ್ ಪೈಲಟ್‌ಗಳು ಹಳಿಗಳ ಮೇಲೆ ಕಲ್ಲುಗಳು ಮತ್ತು ರಾಡ್‌ಗಳನ್ನು ಗುರುತಿಸಿದ ನಂತರ ತುರ್ತು ಬ್ರೇಕ್‌ ಹಾಕಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು. ಇಬ್ಬರು ಮಕ್ಕಳು ಆಟವಾಡುತ್ತಿದ್ದಾಗ ಕಲ್ಲುಗಳು ಮತ್ತು ರಾಡ್‌ಗಳನ್ನು ಟ್ರ್ಯಾಕ್‌ಗಳ ಮೇಲೆ ಇರಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ