ಗೋಮಾಂಸ ಸೇವಿಸುವವರ ಡಿಎನ್​ಎ ನಮ್ಮಲ್ಲಿಲ್ಲ: ವಿಹಿಂಪ ನಾಯಕಿ ಸಾಧ್ವಿ ಪ್ರಾಚಿಯಿಂದ ಆರ್​ಎಸ್​ಎಸ್​ ಮುಖ್ಯಸ್ಥರಿಗೆ ಟಾಂಗ್

| Updated By: ಆಯೇಷಾ ಬಾನು

Updated on: Jul 11, 2021 | 8:26 AM

ರಾಜಸ್ಥಾನದಲ್ಲಿ ಹಿಂದೂ ಹುಡುಗಿಯರನ್ನು ಲವ್ ಜಿಹಾದ್​ನ ಹೆಸರಲ್ಲಿ ಮೋಸಗೊಳಿಸಿ ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ರಾಜಕೀಯವನ್ನು ಬಿಟ್ಟು ಹಿಂದೂ ಹುಡುಗಿಯರನ್ನು ರಕ್ಷಿಸಿ ಎಂದು ಅವರು ರಾಜಸ್ಥಾನ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗೋಮಾಂಸ ಸೇವಿಸುವವರ ಡಿಎನ್​ಎ ನಮ್ಮಲ್ಲಿಲ್ಲ: ವಿಹಿಂಪ ನಾಯಕಿ ಸಾಧ್ವಿ ಪ್ರಾಚಿಯಿಂದ ಆರ್​ಎಸ್​ಎಸ್​ ಮುಖ್ಯಸ್ಥರಿಗೆ ಟಾಂಗ್
ಸಾಧ್ವಿ ಪ್ರಾಚಿ
Follow us on

ಇತ್ತೀಚಿಗಷ್ಟೇ ನಮ್ಮಲ್ಲಿ ಹಿಂದೂ ಮುಸ್ಲಿಮರು ಯಾವತ್ತೂ ಪ್ರತ್ಯೇಕವಾಗಿ ಬದುಕಿಲ್ಲ. ಹೀಗಾಗಿ ಮತ್ತೆ ಒಂದಾಗುವುದು ಎಂಬ ಕಲ್ಪನೆಯೇ ಸರಿಯಾದುದದಲ್ಲ ಎಂಬ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ವ್ಯಾಖ್ಯಾನವನ್ನು ವಿಶ್ವ ಹಿಂದೂ ಪರಿಷತ್​ನ ಸದಸ್ಯೆ ಸಾಧ್ವಿ ಪ್ರಾಚಿ ನಿರಾಕರಿಸಿದ್ದಾರೆ. ಶನಿವಾರ ಗೋಮಾಂಸ ಸೇವಿಸುವವರ ಡಿಎನ್​ಎ ಹಿಂದೂಗಳಲ್ಲಿ ಎಂದಿಗೂ ಕಂಡುಬರುವುದಿಲ್ಲ ಎಂದು ಹೇಳಿರುವ ಅವರು, ವಿವಾದ ಸೃಷ್ಟಿಸಿದ್ದಾರೆ. ಭಾರತೀಯರೆಲ್ಲರ ಡಿಎನ್​ಎ ಒಂದೇ ಇರಬಹುದು. ಆದರೆ, ನಮ್ಮಲ್ಲಿ ಗೋಮಾಂಸ ಸೇವಿಸುವವರ ಡಿಎನ್​ಎ ನಮ್ಮಲ್ಲಿ ದೊರೆಯುವುದಿಲ್ಲ ಎಂದಿದ್ದಾರೆ ಅವರು.

ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರವು ಜನಸಂಖ್ಯಾ ನಿಯಂತ್ರಣವನ್ನು ಹದ್ದುಬಸ್ತಿನಲ್ಲಿ ಇಡಬಹುದಾದ ಕಾನೂನನ್ನು ಜಾರಿಗೆ ತರಬೇಕೆಂದೂ ಅವರು ಒತ್ತಾಯಿಸಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದದೇ ಇರುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ನಿಯಮ ರೂಪಿಸುವಂತೆ ಅವರು ಆಗ್ರಹಿಸಿದ್ದಾರೆ. ನೀವು ಎಷ್ಟು ಹೆಂಡತಿಯರನ್ನು ಹೊಂದಿದ್ದೀರಿ ಎಂಬುದು ಇಲ್ಲಿ ಮುಖ್ಯವಲ್ಲ, ಆದರೆ ನಿಮಗೆ ಇಬ್ಬರೇ ಮಕ್ಕಳು ಇರಬೇಕು ಎಂದು ಅವರು ಸಂದೇಶ ರವಾನಿಸಿದ್ದಾರೆ.

ರಾಜಸ್ಥಾನದಲ್ಲಿ ಹಿಂದೂ ಹುಡುಗಿಯರನ್ನು ಲವ್ ಜಿಹಾದ್​ನ ಹೆಸರಲ್ಲಿ ಮೋಸಗೊಳಿಸಿ ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ರಾಜಕೀಯವನ್ನು ಬಿಟ್ಟು ಹಿಂದೂ ಹುಡುಗಿಯರನ್ನು ರಕ್ಷಿಸಿ ಎಂದು ಅವರು ರಾಜಸ್ಥಾನ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರು ಎಂದೂ ಪ್ರತ್ಯೇಕವಾಗಿ ಬದುಕಿಲ್ಲ: ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಏಕತೆಯ ವ್ಯಾಖ್ಯಾನ

ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮೀಯರ ಏಕತೆ ಎಂಬ ಪರಿಕಲ್ಪನೆ ನಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುವಂತಿದೆ. ಏಕೆಂದರೆ ನಮ್ಮಲ್ಲಿ ಹಿಂದೂ ಮುಸ್ಲಿಮರು ಯಾವತ್ತೂ ಪ್ರತ್ಯೇಕವಾಗಿ ಬದುಕಿಲ್ಲ. ಹೀಗಾಗಿ ಮತ್ತೆ ಒಂದಾಗುವುದು ಎಂಬ ಕಲ್ಪನೆಯೇ ಸರಿಯಾದುದದಲ್ಲ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ವ್ಯಾಖ್ಯಾನಿಸಿದ್ದರು.

ನಮ್ಮ ಇತಿಹಾಸದ ಪ್ರಕಾರ ಸುಮಾರು 40 ಸಾವಿರ ವರ್ಷಗಳ ಹಿಂದಿನಿಂದ ನಾವೆಲ್ಲರೂ ಒಂದೇ ಮೂಲದಿಂದ ಬಂದವರು. ನಮ್ಮೆಲ್ಲರ ಡಿಎನ್​ಎ ಒಂದೇ ಆಗಿದ್ದು ನಾವೆಲ್ಲರೂ ಒಂದೇ ಪೂರ್ವಜರಿಂದ ಉಗಮವಾಗಿದ್ದೇವೆ. ರಾಜಕಿಯ ಜನರನ್ನು ಒಗ್ಗೂಡಿಸುತ್ತದೆ ಎಂಬುದನ್ನು ನಾನು ಒಪ್ಪಲಾರೆ. ಅದು ನಮ್ಮನ್ನು ವಿಚ್ಛಿದ್ರಗೊಳಿಸಬಹುದು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: 

Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !

(VHP member Sadhvi Prachi says we do not share dna with beef eaters)