ಶಬರಿಮಲೆ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ಅವಕಾಶ; ದಿನಾಂಕ, ಷರತ್ತುಗಳ ವಿವರ ಇಲ್ಲಿದೆ
ಕೊವಿಡ್-19 ಮಧ್ಯೆ ದೇವಸ್ಥಾನ ತೆರೆದಿರುವುದರಿಂದ ಭಕ್ತಾದಿಗಳು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ದೇವಾಲಯಕ್ಕೆ ಭೇಟಿ ನೀಡಬೇಕು, ಕೊರೊನಾ ಹರಡುವಿಕೆ ತಡೆಗಟ್ಟಬೇಕು ಎಂದು ಹೇಳಲಾಗಿದೆ.
ತಿರುವನಂತಪುರ: ಕೊರೊನಾ ಎರಡನೇ ಅಲೆ ಬಳಿಕ ದೇಶದೆಲ್ಲೆಡೆ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಜಾರಿಯಾಗುತ್ತಿದೆ. ದೇವಾಲಯಗಳಲ್ಲಿ ಕೂಡ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಇದೀಗ ಶಬರಿಮಲೆ ದೇವಸ್ಥಾನ ತೆರೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಿಂಗಳ ಪೂಜೆಗೆ ಶಬರಿಮಲೆ ಅಯ್ಯಪ್ಪ ಸನ್ನಿಧಾನ ತೆರೆಯಲಿದೆ. ಜುಲೈ 17ರಿಂದ 21ನೇ ತಾರೀಖಿನವರೆಗೆ ದೇವಸ್ಥಾನ ತೆರೆದಿರಲಿದೆ ಎಂದು ಶನಿವಾರ ದೇವಾಲಯ ಮಾಹಿತಿ ನೀಡಿದೆ.
ಕೊವಿಡ್-19 ಮಧ್ಯೆ ದೇವಸ್ಥಾನ ತೆರೆದಿರುವುದರಿಂದ ಭಕ್ತಾದಿಗಳು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ದೇವಾಲಯಕ್ಕೆ ಭೇಟಿ ನೀಡಬೇಕು, ಕೊರೊನಾ ಹರಡುವಿಕೆ ತಡೆಗಟ್ಟಬೇಕು ಎಂದು ಹೇಳಲಾಗಿದೆ.
ಶಬರಿಮಲೆ ದೇವಾಲಯ ಭೇಟಿಗೆ ನಿಯಮಾವಳಿಗಳು:
- ಕೊರೊನಾ ವಿರುದ್ಧ ಎರಡೂ ಡೋಸ್ ಲಸಿಕೆ ಪಡೆದುಕೊಂಡಿರುವ ಜನರು ಶಬರಿಮಲೆಗೆ ಭೇಟಿ ಕೊಡಬಹುದು. ಎರಡೂ ಡೋಸ್ ಲಸಿಕೆ ನೀಡಿಕೆ ಆಗಿರುವ ಬಗ್ಗೆ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ.
- ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವ ಭಕ್ತರಿಗೂ ದೇವಾಲಯ ಭೇಟಿಗೆ ಅವಕಾಶವಿದೆ. ಆದರೆ, ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ 48 ಗಂಟೆಗಳ ಮೊದಲು ಪಡೆದದ್ದಾಗಿರಬೇಕಿದೆ.
- ಆನ್ಲೈನ್ ಬುಕಿಂಗ್ ವಿಧಾನದ ಮೂಲಕ 5,000 ಭಕ್ತರು ದೇವಾಲಯ ಪ್ರವೇಶಿಸಬಹುದಾಗಿದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿಲ್ಲ. ಕೇರಳದಲ್ಲಿ ಈಗಲೂ ಪ್ರತಿನಿತ್ಯ 15,000ದಷ್ಟು ಕೊರೊನಾ ಪ್ರಕರಣಗಳು ಕಂಡುಬರುತ್ತಿದೆ. ಶನಿವಾರ (ಜುಲೈ 10) 14,087 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 109 ಮಂದಿ ಕೊವಿಡ್ ಸೋಂಕಿನಿಂದ ನಿಧನರಾಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ಶಬರಿಮಲೆ ಅಫಿಡವಿಟ್ನಲ್ಲಿ ಯಾವುದೇ ಬದಲಾವಣೆ ಇಲ್ಲ, ಎಲ್ಡಿಎಫ್ ಸರ್ಕಾರದ ನಿಲುವು ಅಚಲ: ಸಿಪಿಐ ನಾಯಕ ಕಾನಂ ರಾಜೇಂದ್ರನ್