ಕುಕಿ ಸಮುದಾಯದ ವ್ಯಕ್ತಿಯ ರುಂಡ ಕತ್ತರಿಸಿ ಬೇಲಿಯಲ್ಲಿರಿಸಿದ ದುಷ್ಕರ್ಮಿಗಳು; ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ಮತ್ತೊಂದು ವಿಡಿಯೊ ವೈರಲ್

ಜುಲೈ 2 ರಂದು ನಡೆದು ಘರ್ಷಣೆಗಳು ನಡೆದಿತ್ತು. ಅಂದು ರಾತ್ರಿ ಸತ್ತ ಮೂವರಲ್ಲಿ ಕುಕಿ ವ್ಯಕ್ತಿಯೂ ಇದ್ದಾನೆ. ಅವನ ತಲೆಯನ್ನು ಕತ್ತರಿಸಿ ಬಿದಿರಿನ ಬೇಲಿಯ ಮೇಲೆ ಮೈತಿ ಉಗ್ರರು ಇರಿಸಿದ್ದಾರೆ ಎಂದು ಹೇಳಲಾಗಿದೆ.

ಕುಕಿ ಸಮುದಾಯದ ವ್ಯಕ್ತಿಯ ರುಂಡ ಕತ್ತರಿಸಿ ಬೇಲಿಯಲ್ಲಿರಿಸಿದ ದುಷ್ಕರ್ಮಿಗಳು; ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ಮತ್ತೊಂದು ವಿಡಿಯೊ ವೈರಲ್
ಮಣಿಪುರ ಹಿಂಸಾಚಾರ
Follow us
ರಶ್ಮಿ ಕಲ್ಲಕಟ್ಟ
|

Updated on:Jul 21, 2023 | 8:55 PM

ದೆಹಲಿ ಜುಲೈ 21: ಮಣಿಪುರದಲ್ಲಿ (Manipur) ಇಬ್ಬರು ಕುಕಿ ಮಹಿಳೆಯರನ್ನು (Kuki women) ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದ ಬೆನ್ನಲ್ಲೇ ಹಿಂಸಾಚಾರ ಪೀಡಿತ ರಾಜ್ಯದಿಂದ ಮತ್ತೊಂದು ಆಘಾತಕಾರಿ ವಿಡಿಯೊ ಹೊರಬಿದ್ದಿದೆ. ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಈ ವಿಡಿಯೊದಲ್ಲಿ ಕುಕಿ ವ್ಯಕ್ತಿಯ ಕತ್ತರಿಸಿದ ತಲೆಯನ್ನು ಬೇಲಿಯ ಮೇಲೆ ಇರಿಸುವುದು ಕಾಣಿಸುತ್ತದೆ. ಈ ವಿಡಿಯೊದಲ್ಲಿರುವ ಸಂತ್ರಸ್ತರನ್ನು ಮಣಿಪುರದ ಬಿಷ್ಣುಪುರ (Bishnupur)ಜಿಲ್ಲೆಯ ನಿವಾಸಿ ಡೇವಿಡ್ ಥಿಕ್ ಎಂದು ಗುರುತಿಸಲಾಗಿದೆ. ಜುಲೈ 2 ರಂದು ನಡೆದು ಘರ್ಷಣೆಗಳು ನಡೆದಿತ್ತು. ಅಂದು ರಾತ್ರಿ ಸತ್ತ ಮೂವರಲ್ಲಿ ಕುಕಿ ವ್ಯಕ್ತಿಯೂ ಇದ್ದಾನೆ. ಅವನ ತಲೆಯನ್ನು ಕತ್ತರಿಸಿ ಬಿದಿರಿನ ಬೇಲಿಯ ಮೇಲೆ ಮೈತಿ ಉಗ್ರರು ಇರಿಸಿದ್ದಾರೆ ಎಂದು ಹೇಳಲಾಗಿದೆ. ಬಿದಿರಿನ ಬೇಲಿಯಲ್ಲಿರುವ ರಕ್ತದ ಕಲೆಯ ಚಿತ್ರವೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಏತನ್ಮಧ್ಯೆ, ಮಣಿಪುರದ ಭದ್ರತಾ ಅಧಿಕಾರಿಗಳು ಮಣಿಪುರದಲ್ಲಿ ‘ಮೀರಾ ಪೈಬಿಸ್’ (women torch bearers) ಎಂದು ಬಿಂಬಿಸುತ್ತಿರುವವರನ್ನು ನಿಭಾಯಿಸಲು ಮಹಿಳಾ ಬೆಟಾಲಿಯನ್ ಅಗತ್ಯವಿದೆ ಎಂದು ಹೇಳಿದರು.

ಏಕೆಂದರೆ ಅವರು ಕಲಹ ಪೀಡಿತ ರಾಜ್ಯದಲ್ಲಿ ಕೇಂದ್ರ ಅರೆಸೈನಿಕ ಪಡೆಗಳಿಗೆ ಇವರು ತಡೆಯೊಡ್ಡಿದ್ದು ಮಾತ್ರವಲ್ಲದೆ ಗಂಭೀರ ಅಪರಾಧಗಳನ್ನು ನಡೆಸುವಲ್ಲಿ “ಸಹಾಯ” ಮಾಡಿದ್ದಾರೆ. ಅಸ್ಸಾಂ ರೈಫಲ್ಸ್ ಮಹಿಳೆಯರ ಉಪಸ್ಥಿತಿಯನ್ನು ಹೊಂದಿದ್ದರೂ ಅವರು ಕಾನೂನು ಮತ್ತು ಸುವ್ಯವಸ್ಥೆಗಾಗಿ ತರಬೇತಿ ಪಡೆದಿಲ್ಲ ಎಂದು ಅಧಿಕಾರಿಗಳು ಭಾವಿಸುತ್ತಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತೊಡಗಿರುವ ಅಧಿಕಾರಿಗಳು ರಾಜ್ಯದಲ್ಲಿ ಹೆಚ್ಚಿನ ಮಹಿಳಾ ಅರೆಸೇನಾ ಪಡೆಗಳಿಗೆ ವಿಶೇಷವಾಗಿ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ನವರು ಗಲಭೆ ನಿಯಂತ್ರಿಸಲು ಸನ್ನದ್ಧರಾಗಿದ್ದಾರೆ.

ಇದನ್ನೂ ಓದಿ: Manipur Violence: ಶಾಂತಿ ಕಾಪಾಡುವಂತೆ ಮಣಿಪುರ ಜನತೆಗೆ ಪತ್ರ ಬರೆದ ಪೇಜಾವರ ಶ್ರೀ ಈ ಮಹಿಳೆಯರು ತಮ್ಮನ್ನು ಮೀರಾ ಪೈಬಿ ಎಂದು ಕರೆದುಕೊಳ್ಳುವುದನ್ನು ನೀವು ನೋಡುತ್ತೀರಿ, ಒತ್ತಡ ಹೇರಿದರೆ ಬಟ್ಟೆ ಬಿಚ್ಚುವುದಾಗಿ ಬೆದರಿಕೆ ಹಾಕುತ್ತಾರೆ. ಈಗ ಬೆಟ್ಟಗಳಲ್ಲಿನ ಮತ್ತೊಂದು ತಾಣದ ಕಡೆಗೆ ಸೇನಾ ಬೆಂಗಾವಲು ಪಡೆ ಸಾಗುವಾಗ ಈ ಮಹಿಳೆಯರು ದೊಣ್ಣೆ ಹಿಡಿದು ರಸ್ತೆಗಳನ್ನು ನಿರ್ಬಂಧಿಸುತ್ತಾರೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Fri, 21 July 23

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ