Viral Video: ಬೇರೆ ಹೆಣ್ಣಿನ ಜೊತೆಗಿದ್ದಾಗ ಹಿಡಿಯಲು ಬಂದ ಹೆಂಡತಿ ಮೇಲೆ ಕಾರು ಚಲಾಯಿಸಿದ ನಿರ್ಮಾಪಕ!

| Updated By: ಸುಷ್ಮಾ ಚಕ್ರೆ

Updated on: Oct 27, 2022 | 1:22 PM

ಹಿಂದಿಯ ‘ದೇಹತಿ ಡಿಸ್ಕೋ’, ‘ಶರ್ಮಾ ಜಿ ಕಿ ಲಗ್ ಗಯಿ’ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಪಕ ಕಮಲ್ ಮಿಶ್ರಾ ಮಾಡೆಲ್ ಜೊತೆ ಕಾರಿನಲ್ಲಿದ್ದಾಗ ಹೆಂಡತಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಗ ಅವರು ಹೆಂಡತಿ ಮೇಲೆ ಕಾರು ಹರಿಸಿದ್ದರಿಂದ ಯಾಸ್ಮಿನ್ ಅವರ ತಲೆಗೆ ಗಾಯವಾಗಿದೆ.

Viral Video: ಬೇರೆ ಹೆಣ್ಣಿನ ಜೊತೆಗಿದ್ದಾಗ ಹಿಡಿಯಲು ಬಂದ ಹೆಂಡತಿ ಮೇಲೆ ಕಾರು ಚಲಾಯಿಸಿದ ನಿರ್ಮಾಪಕ!
ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ
Follow us on

ಮುಂಬೈ: ತನ್ನ ಹೆಂಡತಿಯ ಮೇಲೆ ಕಾರು ಚಲಾಯಿಸಿಕೊಂಡು ಹೋದ ಆರೋಪದಲ್ಲಿ ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ (Kamal Kishor Mishra) ವಿರುದ್ಧ ಕೇಸ್ ದಾಖಲಿಸಲಾಗಿದೆ. ಮಿಶ್ರಾ ಜೊತೆ ಇನ್ನೋರ್ವ ಮಹಿಳೆ ಇರುವುದನ್ನು ನೋಡಿದ ಅವರ ಪತ್ನಿ ಯಾಸ್ಮಿನ್ (Yasmin Mishra) ಅವರಿಬ್ಬರನ್ನೂ ರೆಡ್​ಹ್ಯಾಂಡ್ ಆಗಿ ಹಿಡಿಯಲು ಹೋದಾಗ ಕಮಲ್ ಮಿಶ್ರಾ ತನ್ನ ಹೆಂಡತಿಯ ಮೇಲೆ ಕಾರು ಚಲಾಯಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆಗಿದೆ.

ಮಹಾರಾಷ್ಟ್ರದ ಅಂಧೇರಿಯಲ್ಲಿರುವ ಅಪಾರ್ಟ್​ಮೆಂಟ್​ ಒಂದರ ಪಾರ್ಕಿಂಗ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಕಾರು ಮೈ ಮೇಲೆ ಹರಿದಿದ್ದರಿಂದ ಮಿಶ್ರಾ ಅವರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಹಿಂಗೆ ಸಿನಿಮಾ ಮಾಡಿದ್ರೆ ನಿರ್ಮಾಪಕರು ನೇಣು ಹಾಕಿಕೊಳ್ತಾರೆ’: ಸುದೀಪ್​ ಹೇಳಿದ್ದು ಯಾರ ಬಗ್ಗೆ?

ಈ ಘಟನೆಯ ನಂತರ ಚಿತ್ರ ನಿರ್ಮಾಪಕ ಕಮಲ್ ಮಿಶ್ರಾ ಅವರ ಪತ್ನಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಆಕೆ ತನ್ನ ಗಂಡನನ್ನು ಹುಡುಕುತ್ತಾ ಹೊರಗೆ ಬಂದಾಗ ಆತ ಕಾರಿನೊಳಗೆ ಇನ್ನೊಬ್ಬಳು ಮಹಿಳೆಯೊಂದಿಗೆ ಕುಳಿತುಕೊಂಡು ರೊಮ್ಯಾನ್ಸ್​ ಮಾಡುತ್ತಿರುವುದನ್ನು ನೋಡಿ ಆ ಕಾರಿನತ್ತ ಓಡಿ ಬಂದಾಗ ಈ ಘಟನೆ ನಡೆದಿದೆ. ಹೆಂಡತಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮಿಶ್ರಾ ಆಕೆಯ ಮೇಲೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ.


ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ವಿರುದ್ಧ ಪತ್ನಿ ಯಾಸ್ಮಿನ್ ತನ್ನ ಗಂಡನ ಜೊತೆಗಿದ್ದ ಮಾಡೆಲ್ ಯಾರೆಂದು ಪ್ರಶ್ನೆ ಮಾಡುತ್ತಿದ್ದಾಗ ಆತ ತನ್ನ ಹೆಂಡತಿಯನ್ನು ಕೆಳಗೆ ತಳ್ಳಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಇದರಿಂದ ಯಾಸ್ಮಿನ್ ತಲೆಗೆ ಪೆಟ್ಟಾಗಿದೆ. ಅಂದಹಾಗೆ, ಕಮಲ್ ಮಿಶ್ರಾ ಹಿಂದಿಯ ‘ದೇಹತಿ ಡಿಸ್ಕೋ’, ‘ಶರ್ಮಾ ಜಿ ಕಿ ಲಗ್ ಗಯಿ’ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಪಕ.

ಇದನ್ನೂ ಓದಿ: Appu Food Festival: ಪುನೀತ್​ಗೆ ಫೇವರಿಟ್​ ಆಗಿದ್ದ ದೋಸೆ ಸವಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ

ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ 9 ವರ್ಷಗಳ ಹಿಂದೆ ಯಾಸ್ಮಿನ್ ಅವರನ್ನು ಮದುವೆಯಾಗಿದ್ದು, ಈಗ ಬೇರೆಯವರನ್ನು ಮದುವೆಯಾಗಿದ್ದಾರೆ ಎಂದು ಸಿನಿಮಾ ಮತ್ತು ಧಾರಾವಾಹಿ ನಟಿ ಯಾಸ್ಮಿನ್ ಆರೋಪಿಸಿದ್ದಾರೆ. ಯಾಸ್ಮಿನ್ ತನ್ನ ಪತಿ ಕಮಲ್ ಕಿಶೋರ್ ಮಿಶ್ರಾ ಅವರ ಮನೆಗೆ ಹೋದಾಗ ಅವರ ಕಾರಿನಲ್ಲಿ ಕುಳಿತು ಮಾಡೆಲ್ ಆಯೇಷಾ ಸುಪ್ರಿಯಾ ಮೆಮನ್ ಅವರ ಜೊತೆ ರೊಮ್ಯಾನ್ಸ್ ಮಾಡುವುದನ್ನು ನೋಡಿದ್ದರು. ಯಾಸ್ಮಿನ್ ತನ್ನ ಗಂಡನ ಕಾರಿನ ಗಾಜು ಬಡಿದು ನೀವು ಸ್ವಲ್ಪ ಹೊರಗೆ ಬನ್ನಿ, ನಾನು ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾರೆ. ಅಲ್ಲಿ ಹೆಂಡತಿಯನ್ನು ನೋಡಿ ಭಯಗೊಂಡ ಕಮಲ್ ಮಿಶ್ರಾ ಆಕೆಯನ್ನು ಕೆಳಗೆ ತಳ್ಳಿ, ಕಾರನ್ನು ವೇಗವಾಗಿ ತಿರುಗಿಸಿದನು. ಆಗ ಆ ಕಾರಿನ ಚಕ್ರ ಯಾಸ್ಮಿನ್ ಕಾಲಿಗೆ ತಗುಲಿ ಗಾಯವಾಯಿತು. ಕೆಳಗೆ ಬಿದ್ದಿದ್ದರಿಂದ ಆಕೆಯ ತಲೆಗೆ ಕೂಡ ಗಾಯವಾಯಿತು. ಯಾಸ್ಮಿನ್ ಅವರ ತಲೆಗೆ 3 ಹೊಲಿಗೆ ಹಾಕಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ